ಚೀನಾ | ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ ‘ಡ್ರೋನ್’ – ವಿಡಿಯೋ ವೈರಲ್

Date:

ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ‘ಡ್ರೋನ್’ ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದ್ದು ಸದ್ಯ ಡ್ರೋನ್‌ನಲ್ಲಿ ನೇತಾಡುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಡ್ರೋನ್ ಮೂಲಕ ರಕ್ಷಿಸಲಾಗಿದೆ.

- Advertisement -

ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಮೂರು ನದಿಗಳ ಸಂಗಮವಿರುವ ಮತ್ತು 3,00,000 ನಿವಾಸಿಗಳ ನೆಲೆಯಾದ ರೊಂಗ್ಜಿಯಾಂಗ್ ಅರ್ಧದಷ್ಟು ಮುಳುಗಿದೆ. ಇದರಿಂದಾಗಿ ನಿವಾಸಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಚಾರಣೆಯನ್ನು ಚೀನಾದ ಅಧಿಕಾರಿಗಳು ನಡೆಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಈ ವಾರದ ಆರಂಭದಲ್ಲಿ ರೊಂಗ್ಜಿಯಾಂಗ್‌ನಲ್ಲಿ ದಾಖಲೆಯ ಮಳೆಯಾಗಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ. 80,000ಕ್ಕೂ ಹೆಚ್ಚು ಮಂದಿ ಮನೆ ತೊರೆದಿದ್ದಾರೆ. ಸಾಮಾನ್ಯವಾಗಿ 72 ಗಂಟೆಗಳಲ್ಲಿ ರೊಂಗ್ಜಿಯಾಂಗ್‌ನಲ್ಲಿ ಸುರಿಯುವ ಸರಾಸರಿ ಮಳೆಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಪ್ರವಾಹ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಚೀನಾ ಡ್ರೋನ್‌ನಂತಹ ತಾಂತ್ರಿಕ ಉಪಕರಣಗಳನ್ನು ಬಳಸುತ್ತಿದೆ. ಡ್ರೋನ್ ಮೂಲಕ ವ್ಯಕ್ತಿಯೊಬ್ಬರನ್ನು ಸುರಕ್ಷಿತವಾಗಿ ಸಾಗಿಸಲಾಗುತ್ತಿದ್ದು, ಈ ಡ್ರೋನ್‌ಗಳಿಗೆ 100 ಕೆಜಿ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ ಎಂದು ವರದಿಯಾಗಿದೆ.

ಆಶ್ಚರ್ಯ ವ್ಯಕ್ತಪಡಿಸಿದ ನೆಟ್ಟಿಗರು

ವ್ಯಕ್ತಿಯನ್ನು ಡ್ರೋನ್ ರಕ್ಷಣೆ ಮಾಡುವ ವಿಡಿಯೋವನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚೀನಾ ಸುದ್ದಿ ಮಾಧ್ಯಮಗಳ ಮೂಲಕ ಶನಿವಾರ ರೊಂಗ್ಜಿಯಾಂಗ್‌ನಲ್ಲಿ 40,000ಕ್ಕೂ ಹೆಚ್ಚು ನಿವಾಸಿಗಳನ್ನು ತುರ್ತಾಗಿ ಸ್ಥಳಾಂತರಿಸಲಾಗಿದೆ. “ಚೀನಾ ಇಡೀ ವಿಶ್ವದ ಭವಿಷ್ಯ ಏನಿದೆಯೋ ಅದನ್ನು ಈಗಲೇ ಹೊಂದಿದೆ” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

“ಚೀನಾದ ಡ್ರೋನ್‌ಗಳು ಈಗ ಅರ್ಧದಷ್ಟು ರಕ್ಷಣಾ ತಂಡಗಳು ಮಾಡಲಾಗದ ಕೆಲಸವನ್ನು ಮಾಡುತ್ತವೆ” ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. “ಡ್ರೋನ್‌ಗಳು ಸೂಪರ್‌ಹೀರೋಗಳಾಗಿವೆಯೇ” ಎಂದು ಇನ್ನೋರ್ವರು ಪ್ರಶ್ನಿಸಿದರೆ, “ನಿಜಕ್ಕೂ ನಂಬಲಾಗದು! ತಂತ್ರಜ್ಞಾನವು ಮಾನವೀಯತೆಗೆ ಬಳಕೆಯಾದಾಗ ಪವಾಡಗಳು ಸಂಭವಿಸುತ್ತವೆ” ಎಂದು ನೆಟ್ಟಿಗರು ಆಶ್ಚರ್ಯ ಸೂಚಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕ ಹಿಂದಿಕ್ಕಿ ಭಾರತದ ನಂ.1 LNG ಪೂರೈಕೆದಾರನಾದ ಓಮನ್‌!

ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಅನಿಲ ಪೂರೈಕೆಯಲ್ಲಿ...

ರಷ್ಯಾದಿಂದ ತೈಲ ಖರೀದಿಸಿದ ಅಮೆರಿಕ -ಜಾಗತಿಕ ಸೋಜಿಗ

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ,...

ಲಡಾಖ್ ಭಾರತದ ಅವಿಭಾಜ್ಯ ಅಂಗ, ಚೀನಾ ನಿರಾಕರಿಸಿದರೂ‌ ಇದೇ ಸತ್ಯ; ಡ್ರ್ಯಾಗನ್‌ಗೆ ಭಾರತ ತಿರುಗೇಟು!

ಲಡಾಖ್ ಕೇಂದ್ರಾಡಳಿತ ಪ್ರದೇಶದ 28 ಪ್ರಮುಖ ಹಾಗೂ ಕಾರ್ಯತಂತ್ರದ (Strategic) ಸ್ಥಳಗಳಿಗೆ...