ಹುಬ್ಬಳ್ಳಿ | ʼಒಡನಾಡಿʼ ಸಂಸ್ಥೆಯಿಂದ ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ; ಕಮಿಷನರ್ ಶಶಿಕುಮಾರ್ ಸಾಥ್

Date:

Advertisements

ಹುಬ್ಬಳ್ಳಿಯ ಹೊಸೂರ್ ರಸ್ತೆಯಲ್ಲಿರುವ ಪಾರಿಜಾತ ಲಾಡ್ಜ್‌ನ ಬಾತ್ರೂಮಿನ ಒಳಗಡೆ ಸೀಕ್ರೆಟ್‌ ಕೋಣೆಯನ್ನು ಮಾಡಿ ಐದು ಯುವತಿಯರನ್ನು ಕೂಡಿಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಮೈಸೂರಿನ ʼಒಡನಾಡಿʼ‌ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಮ್‌ ಅವರ ತಂಡ ಹುಬ್ಬಳ್ಳಿ ಪೊಲೀಸ್‌ ಆಯುಕ್ತರಾದ ಶಶಿಕುಮಾರ್‌ ಜೊತೆಗೆ ದಾಳಿ ನಡೆಸಿದ್ದಾರೆ.

“ಹೋಟೆಲಿನ ಪಕ್ಕದಲ್ಲಿಯೇ ಶಾಲೆ ಇದ್ದು ಕೆಲವು ಗಂಡು ಮಕ್ಕಳನ್ನು ಗಿರಾಕಿಗಳನ್ನು ಕರೆತರಲು ಪ್ರೇರೇಪಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಹಾಗಾಗಿ ಹುಬ್ಬಳ್ಳಿ ಕಮಿಷನರ್ ಅವರಿಗೆ ಈ ವಿಷಯವನ್ನು ತಿಳಿಸಿ, ಸ್ಥಳೀಯ ಪೊಲೀಸರ ಸಹಾಯದಿಂದ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ. ಲಾಡ್ಜ್‌ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ತನಿಖೆ ನಡೆಯಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಆಯುಕ್ತರು ನೇರವಾಗಿ ಲಾಡ್ಜ್ ಅನ್ನು ರೆಡ್ ಮಾಡಲು ಒಡನಾಡಿ ಜೊತೆಗೆ ಕೈಜೋಡಿಸಿದ್ದಾರೆ. ತಮ್ಮ ತಂಡವನ್ನು ಕಳುಹಿಸಿದ್ದೇ ಅಲ್ಲದೇ ಅವರೇ ಖುದ್ದು ಭೇಟಿ ಕೊಟ್ಟಿದ್ದಾರೆ. ಒಬ್ಬ ವಿದೇಶಿ ಯುವತಿ ಸೇರಿ ಐವರು ಯುವತಿಯರನ್ನು, ಮೂವರು ಗಿರಾಕಿಗಳು ಮತ್ತು ಲಾಡ್ಜ್‌ ನಡೆಸುತ್ತಿದ್ದವರು ಸೇರಿ ಏಳುಮಂದಿ ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಟೆಲ್ ಮಾಲೀಕ ವಿಜಿ ಎಂಬಾತ ತಲೆಮರೆಸಿ ಕೊಂಡಿದ್ದಾನೆ. ತಮಿಳುನಾಡು ಸರ್ಕಾರದ ರಾಶಿಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿವೆ” ಎಂದು ಒಡನಾಡಿ ಪರಶುರಾಮ್‌ ʼಈ ದಿನʼಕ್ಕೆ ಮಾಹಿತಿ ನೀಡಿದ್ದಾರೆ.

ಸ್ಟ್ಯಾನ್ಲಿ ಅವರು ಮಾತನಾಡಿ, “ಇದು ಅನಾದಿ ಕಾಲದಿಂದಲೂ ಇದೆ. ಆದರೆ ಇದುವರೆಗೆ ಯಾರಿಗೂ ನಿಲ್ಲಿಸಲು ಆಗಿಲ್ಲ. ದಿನಕ್ಕೆ ನೂರೈವತ್ತಕ್ಕೂ ಹೆಚ್ಚು ಪುರುಷರು ಈ ಲಾಡ್ಜ್‌ಗೆ ಭೇಟಿ ಕೊಡುತ್ತಿದ್ದಾರೆ. ಒಟ್ಟು ಇಪ್ಪತ್ತೈದು ಕೋಣೆಗಳಿವೆ. ವಾಸಕ್ಕೆ ಅಯೋಗ್ಯವಾದ ಕೊಠಡಿಗಳಿದ್ದರೂ ಹದಿನೈದು ನಿಮಿಷಕ್ಕೆ ಮೂರು ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಲೋಕಲ್‌ ಸಿಟಿ ಕಾರ್ಪೊರೇಷನ್‌ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕಿತ್ತು. ಅಡಗು ತಾಣಗಳನ್ನು ಹೊಂದಿರುವ ವಸತಿ ಗೃಹಗಳಲ್ಲಿ, ರೆಸಾರ್ಟ್ ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆ ಹಾಗೂ ಹಿಂದೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅಂತಹ ಸ್ಥಳಗಳನ್ನು ಖಾಯಂ ಆಗಿ ಮುಚ್ಚಿಸಲು ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶವು ಈಗಾಗಲೇ ಇದೆ. ಇದೊಂದು ಮಹಿಳಾ ವಿರೋಧಿ ಚಟುವಟಿಕೆ ಹಾಗೂ ಮಹಿಳೆಯರನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ಇಟ್ಟು ದಂಧೆ ನಡೆಸುವ ಒಂದು ಪ್ರಕ್ರಿಯೆ. ಈ ವಿಚಾರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಚೌಧರಿ ಅವರ ಜೊತೆಗೆ ಮಾತನಾಡಿದ್ದೇವೆ” ಎಂದು ತಿಳಿಸಿದರು.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X