ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್‌ಪ್ರೀತ್ ಬುಮ್ರಾ ಮಾರಕ ದಾಳಿಯಿಂದಾಗಿ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡಿದೆ. ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಎರಡನೇ ದಿನವಾದ ಇಂದು 251/4 ರನ್‌ಗಳೊಂದಿಗೆ ಆಟ ಆರಂಭಿಸಿದ ಅತಿಥೇಯ ಆಟಗಾರರು ಆರಂಭದಲ್ಲೇ ಮುಗ್ಗರಿಸಿದರು.
ಅನುಭವಿ ಆಟಗಾರ ಜೋ ರೂಟ್(104) ಆರಂಭದಲ್ಲೇ ಶತಕ ಗಳಿಸಿದರು. ನಂತರ ನಾಯಕ ಬೆನ್ ಸ್ಟೋಕ್ಸ್ (44) ಅವರನ್ನು ಬುಮ್ರಾ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು. ನಂತರದಲ್ಲಿ 87ನೇ ಓವರ್‌ನ ಸತತ ಎರಡು ಚೆಂಡುಗಳಲ್ಲಿ ರೂಟ್ ಹಾಗೂ ಕ್ರಿಸ್ ವೋಕ್ಸ್ ಅವರನ್ನು ಔಟ್ ಮಾಡಿದರು. ಪಾನೀಯ ವಿರಾಮದ ವೇಳೆಗೆ ಇಂಗ್ಲೆಂಡ್ 94 ಓವರ್‌ಗಳಲ್ಲಿ7 ವಿಕೆಟ್ ನಷ್ಟಕ್ಕೆ 307 ರನ್ ಗಳಿಸಿತ್ತು. ವಿಕೆಟ್ ಕೀಪರ್ ಜೇಮ್ ಸ್ಮಿತ್(33) ಹಾಗೂ ಬ್ರೆಡೊನ್ ಕರ್ಸ್ (11) ಕ್ರೀಸ್‌ನಲ್ಲಿದ್ದರು.
ಮೊದಲ ದಿನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇವರ ವಿಶ್ವಾಸಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಆರಂಭಿಕರು ಭರ್ಜರಿ ಆರಂಭ ನೀಡುವ ಸೂಚನೆ ನೀಡಿದರು. ಈ ವೇಳೆ ಆರಂಭಿಕ ಬೆನ್ ಡಕೆಟ್ (23), ನಿತೀಶ್ ಕುಮಾರ್ ಎಸೆದ ಔಟ್ ಬ್ಯಾಕ್ ಆಫ್ ಲೆಂಥ್ ಬಾಲನ್ನು ಕೆಣಕಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು.
ಜಾಕ್ ಕ್ರಾಲಿ ಸಹ ಇದೇ ಓವರ್‌ನ ಕೊನೆಯ ಎಸೆತದಲ್ಲಿ 18 ರನ್ ಬಾರಿಸಿದಾಗ ನಿತೀಶ್ ತೋಡಿದ ಖೆಡ್ಡಾಗೆ ಬಲಿಯಾದರು. ಇಂಗ್ಲೆಂಡ್ 44 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಭರವಸೆಯ ಆಟಗಾರರಾದ ಒಲಿ ಪೋಪ್ ಹಾಗೂ ಜೋ ರೂಟ್ ಆಧಾರವಾದರು. ಈ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡುವಲ್ಲಿ ಸಫಲವಾಯಿತು.ಟೀಮ್ ಇಂಡಿಯಾ ಹಾಕಿಕೊಂಡ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿ ರನ್‌ಗಳನ್ನು ಕಲೆ ಹಾಕಿತು.
ಇದನ್ನು ಓದಿದ್ದೀರಾ? IND vs ENG T20 | ಸರಣಿ ಗೆಲುವಿನೊಂದಿಗೆ ಇತಿಹಾಸ ನಿರ್ಮಿಸಿದ ಭಾರತದ ವನಿತೆಯರು
ಶತಕದ ಜೊತೆಯಾಟ 3ನೇ ವಿಕೆಟ್‌ಗೆ ಒಲಿ ಪೋಪ್ ಹಾಗೂ ಜೋ ರೂಟ್ ಜೋಡಿ 211 ಎಸೆತಗಳಲ್ಲಿ 109 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಪೋಪ್ 44 ರನ್ ಬಾರಿಸಿದ್ದಾಗ ರವೀಂದ್ರ ಜಡೇಜಾ ಅವರ ಸ್ಪಿನ್ ಬೌಲಿಂಗ್ ಗುರುತಿಸುವಲ್ಲಿ ವಿಫಲರಾಗಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಹ್ಯಾರಿ ಬ್ರೂಕ್ (11 ರನ್) ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದರು.
ಭಾರತದ ವಿರುದ್ಧ ರೂಟ್ ದಾಖಲೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಇವರು ಗುರುವಾರ ನಡೆದ ಪಂದ್ಯದಲ್ಲಿ 45 ರನ್ ಬಾರಿಸುತ್ತಿದ್ದಂತೆ ಹೊಸ ದಾಖಲೆ ಬರೆದರು. ಈ ಮೂಲಕ ಇವರು ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 3000 ರನ್‌ಗಳನ್ನು ಕಲೆ ಹಾಕಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ಯಾವೊಬ್ಬ ಬ್ಯಾಟರ್ ಮಾಡಿರಲಿಲ್ಲ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಟೀಮ್ ಇಂಡಿಯಾ ವಿರುದ್ಧ 2555 ಟೆಸ್ಟ್ ರನ್ ಬಾರಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
172 ರನ್‌ಗಳಿಗೆ 4 ವಿಕೆಟ್‌ಗಳು ಬಿದ್ದಾಗ ಕ್ರೀಸ್‌ಗೆ ಬಂದವರೇ ಬೆನ್ ಸ್ಟೋಕ್ಸ್. ಇವರು, ಭರವಸೆಯ ಆಟಗಾರ ಜೋ ರೂಟ್ ಅವರೊಂದಿಗೆ ಇನಿಂಗ್ಸ್ ಬೆಳೆಸುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈ ಜೋಡಿ 170 ಎಸೆತಗಳಲ್ಲಿ ಅಜೇಯ 79 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.
ಟೀಮ್ ಇಂಡಿಯಾದ ಪರ ಜಸ್ಪ್ರೀತ್ ಬುಮ್ರಾ 4, ನಿತೀಶ್ ಕುಮಾರ್ ರೆಡ್ಡಿ 2, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.