“”ಸರ್ಕಾರದ ಕಳೆದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ನಡೆಯಿತು. ಈ ಅವಧಿಯಲ್ಲಿ ಅದಕ್ಕೆ ಬೆಂಬಲಿಸಿದವರ ಮೇಲೆಯೇ ಅದೇ ಸರ್ಕಾರ ಲಾಠಿ ಚಾರ್ಜ್ ಮಾಡಿದ್ದು ನಮಗೆ ಬೇಸರವಾಗಿದೆ”
ಎಂದು ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಪಂಚಪೀಠಗಳ ಬಾಳೆಹೊನ್ನೂರು ಪೀಠದ ರಂಭಾಪುರಿ ಶ್ರೀ ಪರೋಕ್ಷವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹರಿಹರದಲ್ಲಿ ನೆಡೆದ ರಂಭಾಪುರಿ ಪೀಠದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆಯ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದ ಅವರು “ಈ ಸರ್ಕಾರ ಜಾತಿ ಗಣತಿ ಮಾಡಿ ವೀರಶೈವ ಲಿಂಗಾಯತರು ಕೇವಲ 60 ಲಕ್ಷ ಎಂದು ಹೇಳಲಾಗಿದೆ. ಅಂಕಿ ಅಂಶಗಳನ್ನು, ಜಾತಿ ಗಣತಿ ಸರಿಯಾಗಿ ನಿರ್ವಹಿಸಿಲ್ಲ. ಈಗ ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತಿದೆ. ವೀರಶೈವ ಲಿಂಗಾಯತರು ಒಳ ಪಂಗಡ ಮರೆತು ಒಂದಾಗಬೇಕು” ಎಂದು ಕರೆ ನೀಡಿದರು.

“ಇತ್ತೀಚಿಗೆ ವೀರಶೈವ ಲಿಂಗಾಯತರಿಗೆ ರಾಜಕೀಯ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಪಡಿಸುವ ಕೆಲಸವಾಗಬೇಕಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನಗರಸಭೆಯಿಂದ ನೈರ್ಮಲ್ಯ ಕಾಪಾಡಲು ಹೋಟೆಲ್ ಗಳಲ್ಲಿ ಆಹಾರ ತಯಾರಿಕೆ ಪರಿಶೀಲನೆ, ಎಚ್ಚರಿಕೆ
“ಹತ್ತಾರು ಕಾರಣಕ್ಕೆ ವೀರಶೈವ ಪಂಚಪೀಠಗಳು ಪ್ರತ್ಯೇಕ ಆಗಿದ್ದವು. ಇತ್ತೀಚೆಗೆ ಸಮಾಜದ ಹಿತದೃಷ್ಟಿಯಿಂದ ಮಾತುಕತೆ ನಡೆಸಿ ದಾವಣಗೆರೆಯಲ್ಲಿ ಜುಲೈ 21&22 2025 ರಂದು ದಾವಣಗೆರೆ ರೇಣುಕ ಮಂದಿರದಲ್ಲಿ ನಡೆಯುವ ಪೀಠಾಚಾರ್ಯರ ಹಾಗೂ ಶಿವಾಚಾರ್ಯ ಶೃಂಗ ಸಮ್ಮೇಳನ ನಡೆಯಲಿದೆ. ಪಂಚಪೀಠಗಳು ಹಾಗೂ ಶಿವಾಚಾರ್ಯರು ಒಂದೇ ವೇದಿಕೆ ನಂತರ ವಿರಕ್ತರು ಸಹ ನಮ್ಮೊಂದಿಗೆ ಬರಬೇಕಿದೆ. ಹಾಗಾಗಿ ಮೊದಲು ನಾವು ಒಂದಾಗಿ ನಂತರ ವಿರಕ್ತರು ಅಂದ್ರೆ ಬಸವಾಭಿಮಾನಿಗಳನ್ನು ಒಂದೇ ವೇದಿಕೆಗೆ ತರುವ ಸಂಕಲ್ಪವಿದೆ” ಎಂದು ಬಾಳೆಹೊನ್ನೂರು ಪೀಠದ ಶ್ರೀಗಳು ಆಶಯ ವ್ಯಕ್ತಪಡಿಸಿದರು.