ಸೌಜನ್ಯ ಪ್ರಕರಣ | ಹೋರಾಟಗಾರರ ವಿರುದ್ಧ ಅಪಪ್ರಚಾರಕ್ಕೆಂದೇ ಸಕ್ರಿಯವಾಗಿವೆಯೇ ಫೇಕ್‌ ಅಕೌಂಟ್‌ಗಳು?

Date:

Advertisements
ಕೆಲವು ಖಾತೆಗಳು ಸೌಜನ್ಯ ಪ್ರಕರಣ ಮುನ್ನಲೆಗೆ ಬಂದ ಬಳಿಕ ಚಾಲ್ತಿಗೆ ಬಂದಿದ್ದರೆ, ಮತ್ತೆ ಕೆಲವು ಹಳೆಯ ಖಾತೆಗಳು ಬಹುದಿನದ ನಂತರ ಸಕ್ರಿಯವಾಗಿವೆ. ಪ್ರೊಫೈಲ್ ಲಾಕ್ ಮಾಡಿಕೊಂಡ ಸ್ಥಿತಿಯಲ್ಲಿರುವ ಅನೇಕ ಅಕೌಂಟ್‌ಗಳು ಸೌಜನ್ಯ ಕುರಿತ ಸುದ್ದಿಗಳಿಗೆ, ಪೋಸ್ಟರ್‌ಗಳಿಗೆ, ವಿಡಿಯೊ ವರದಿಗಳಿಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿವೆ. ಆದರೆ ಇಂತಹ ಅಕೌಂಟ್‌ಗಳನ್ನು ಯಾರು ನಡೆಸುತ್ತಿದ್ದಾರೆಂಬುದು ತಿಳಿಯುವುದಿಲ್ಲ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಹಿಡಿಯಬೇಕು, ಮರು ತನಿಖೆಯಾಗಬೇಕು ಎಂಬ ಆಗ್ರಹಗಳು ಹೆಚ್ಚಾಗುತ್ತಿದ್ದಂತೆ ಹೋರಾಟಗಾರರ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರಗಳು ಆರಂಭವಾಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್‌ ಅಕೌಂಟ್‌ಗಳ ಮೂಲಕ ದ್ವೇಷವನ್ನು ಬಿತ್ತುವ ಕೆಲಸಗಳು ನಡೆಯುತ್ತಿವೆ!

ಶುಕ್ರವಾರ (ಆಗಸ್ಟ್‌ 5) ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ನಡೆದ ಸಮಾವೇಶದ ವೇಳೆ ಸೌಜನ್ಯ ಅವರ ತಾಯಿ ಕುಸುಮಾವತಿಯವರ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ಬೆಳವಣಿಗೆಯೂ ಇದರ ನಡುವೆ ಆಗಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಮತ್ತೊಂದೆಡೆ ಸೌಜನ್ಯ ಪರ ದನಿ ಎತ್ತಿರುವ ಹೋರಾಟಗಾರರ ಕುರಿತು ಅಪಪ್ರಚಾರವನ್ನು ಕೆಲವು ದಿನಗಳಿಂದ ನಕಲಿ ಖಾತೆಗಳ ಮೂಲಕ ಎಗ್ಗಿಲ್ಲದೆ ನಡೆಸಲಾಗುತ್ತಿದೆ.

ಕೆಲವು ಖಾತೆಗಳು ಸೌಜನ್ಯ ಪ್ರಕರಣ ಮುನ್ನೆಲೆಗೆ ಬಂದ ಬಳಿಕ ಚಾಲ್ತಿಗೆ ಬಂದಿದ್ದರೆ, ಮತ್ತೆ ಕೆಲವು ಹಳೆಯ ಖಾತೆಗಳು ಬಹುದಿನದ ನಂತರ ಸಕ್ರಿಯವಾಗಿವೆ. ಪ್ರೊಫೈಲ್ ಲಾಕ್ ಮಾಡಿಕೊಂಡ ಸ್ಥಿತಿಯಲ್ಲಿರುವ ಅನೇಕ ಅಕೌಂಟ್‌ಗಳು ಸೌಜನ್ಯ ಕುರಿತ ಸುದ್ದಿಗಳಿಗೆ, ಪೋಸ್ಟರ್‌ಗಳಿಗೆ, ವಿಡಿಯೊ ವರದಿಗಳಿಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿವೆ. ಆದರೆ ಇಂತಹ ಅಕೌಂಟ್‌ಗಳನ್ನು ಯಾರು ನಡೆಸುತ್ತಿದ್ದಾರೆಂಬುದು ತಿಳಿಯುವುದಿಲ್ಲ.

Advertisements

“ಸೌಜನ್ಯ ಪ್ರಕರಣದ ನೆಪದಲ್ಲಿ ಧರ್ಮಸ್ಥಳಕ್ಕೆ ಅಪಕೀರ್ತಿ ತರಲಾಗುತ್ತಿದೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ, ಧರ್ಮಸ್ಥಳವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಷಡ್ಯಂತ್ರ ನಡೆದಿದ್ದು, ಅದಕ್ಕಾಗಿ ಸೌಜನ್ಯ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ, ಹೋರಾಟಗಾರರು ಎಡಪಂಥೀಯರಾಗಿದ್ದಾರೆ” ಇತ್ಯಾದಿ ಸಾಕ್ಷ್ಯಾಧಾರ ರಹಿತ ಆರೋಪಗಳನ್ನು ಈ ನಕಲಿ ಖಾತೆಗಳ ಮೂಲಕ ಹರಿಬಿಡಲಾಗುತ್ತಿದೆ.

ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಬೇಕು ಎನ್ನುತ್ತಲೇ, ಸೌಜನ್ಯ ಕುಟುಂಬಕ್ಕೆ ಬೆಂಬಲ ನೀಡುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ತಿಮರೋಡಿಯವರ ಮಾತುಗಳನ್ನು ಅಲ್ಲಲ್ಲಿ ಕಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.

ಜುಲೈ 31ರಂದು, ಅಂದರೆ ಇತ್ತೀಚೆಗೆ ಸಕ್ರಿಯವಾಗಿರುವ ‘ಸತ್ಯ ಮೇವ ಜಯತೇ’ ಎಂಬ ಫೇಸ್‌ಬುಕ್ ಖಾತೆಯನ್ನೇ ಗಮನಿಸಿ. ಶನಿವಾರ ಸಂಜೆ 40: 35ರ ವೇಳೆಗೆ ಬರೋಬ್ಬರಿ 23 ಪೋಸ್ಟ್‌ಗಳನ್ನು (ಪ್ರೊಫೈಲ್‌ ಪಿಕ್‌ ಸೇರಿ) ಕಳೆದ ಐದು ದಿನಗಳಲ್ಲಿ ಹಾಕಲಾಗಿದ್ದು, ಈ ಎಲ್ಲವೂ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿವೆ. ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ’ತಿಮರೌಡಿ’ ಎಂದು ಮೂದಲಿಸಿರುವ ಪೋಸ್ಟರ್‌ಗಳು, ರೀಲ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ವಸಂತ್‌ ಗಿಳಿಯಾರ್ ಎಂಬವರು ನಿರಂತರವಾಗಿ ಧರ್ಮಸ್ಥಳ ಧರ್ಮಾಧಿಕಾರಿಯವರ ಕುಟುಂಬದ ಪರ ಮತ್ತು ನಿರಪರಾಧಿ ಸಂತೋಷ್‌ ರಾವ್ ವಿರುದ್ಧ ಮಾಡುತ್ತಿರುವ ವಿಡಿಯೊ ತುಣುಕುಗಳು ಈ ಖಾತೆಯಲ್ಲಿ ಶೇರ್ ಆಗಿವೆ. ಇಷ್ಟು ಪೋಸ್ಟ್‌ಗಳನ್ನು ಹೊರತುಪಡಿಸಿ ಇನ್ಯಾವುದೇ ವಿಷಯಗಳು ಈ ಖಾತೆಯಲ್ಲಿ ಸಿಗುವುದಿಲ್ಲ.

satyameva jayate
ನಾಲ್ಕು ದಿನದ ಹಿಂದೆ ಅಪ್‌ಲೋಡ್ ಆಗಿರುವ ಪ್ರೊಫೈಲ್

ತಿಮರೋಡಿಯವರ ಕುರಿತು ಸಾಲು ಸಾಲು ಅವಹೇಳನಕಾರಿ ಪೋಸ್ಟ್‌ಗಳು ಈ ಖಾತೆಯಲ್ಲಿವೆ.

edit4
edit2

’ಸತ್ಯಮೇವ ಜಯತೆ’ ಖಾತೆಯು ಸಕ್ರಿಯವಾದ ದಿನವೇ, ಅಂದರೆ ಜುಲೈ 31ರಂದೇ ಮತ್ತೊಂದು ಇಂತಹದ್ದೇ ಮತ್ತೊಂದು ಅಕೌಂಟ್ ಕೆಲಸ ಆರಂಭಿಸಿದೆ. ಅದರ ಹೆಸರು ’ಬ್ರಹ್ಮಾಸ್ತ್ರ’. ಪ್ರೊಪೈಲ್‌ಗೆ ಬಳಸಲಾಗಿರುವ ಫೋಟೋದಲ್ಲಿ ’ಬ್ರಹ್ಮಾಸ್ತ್ರ ಪ್ರಯೋಗ- ದುಷ್ಟರ ಶಿಕ್ಷೆಗೆ ಶಿಷ್ಟರ ರಕ್ಷೆಗೆ’ ಎಂಬ ಸಾಲನ್ನು ಬರೆದುಕೊಳ್ಳಲಾಗಿದೆ. ಸೌಜನ್ಯ ಕುಟುಂಬ ಪರ ನಿಂತಿರುವ ಹೋರಾಟಗಾರರು ಮತ್ತು ಕಾಂಗ್ರೆಸ್‌ ವಿರುದ್ಧ ಕೆಲವೇ ಕೆಲವು ಪೋಸ್ಟ್‌ಗಳನ್ನು ಇಲ್ಲಿ ಮಾಡಲಾಗಿದೆ. ಜೊತೆಗೆ ಮಾಧ್ಯಮಗಳ ಸುದ್ದಿ ಲಿಂಕ್‌ಗಳಿಗೆ ಈ ಖಾತೆಯ ಮೂಲಕ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ. ಧರ್ಮಸ್ಥಳ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಖಾತೆಯು ವಾದಿಸುತ್ತಿದೆ.

ವೈ.ಎಂ.ಅಡ್ಮಿನ್‌ (YM Admin) ಎಂಬ ಫೇಸ್‌ಬುಕ್ ನಕಲಿ ಖಾತೆ ಆಸಕ್ತಿಕರವಾಗಿದೆ. ಇದು 2014ರಿಂದಲೇ ಇದ್ದರೂ ಸೌಜನ್ಯ ಪ್ರಕರಣ ಮುನ್ನಲೆಗೆ ಬಂದಾಗ ಮಾತ್ರ ಬಹುತೇಕ ಆಕ್ಟೀವ್ ಆಗಿರುತ್ತದೆ. ಇನ್ನುಳಿದ ಸಮಯಗಳಲ್ಲಿ ತಟಸ್ಥವಾಗಿರುವುದನ್ನು ಕಾಣಬಹುದು. ಈವರೆಗಿನ ಪೋಸ್ಟ್‌ಗಳನ್ನು ಗಮನಿಸಿದರೆ- 2014ರಿಂದಲೂ ಮಹೇಶ್ ಶೆಟ್ಟಿ ತಿಮರೋಡಿಯವರ ವಿರುದ್ಧ ನಿರಂತರ ದ್ವೇಷವನ್ನು ಈ ಖಾತೆಯ ಮೂಲಕ ಹಬ್ಬಿಸಲು ಯತ್ನಿಸಲಾಗಿದೆ.

ಇದನ್ನೂ ಓದಿ ಸ್ನಾನದ ವಿಡಿಯೋ ಪ್ರಕರಣ : ಸಂಘಪರಿವಾರದ ಕಾರ್ಯಕರ್ತನ ವಿರುದ್ಧ ಎಫ್‌ಐಆರ್, ನ್ಯಾಯಾಂಗ ಬಂಧನ

ಈ ಅಕೌಂಟ್‌ನಲ್ಲಿ ನವೆಂಬರ್‌ 10, 2021ರಲ್ಲಿ ಸ್ಟೇಟಸ್ ಹಾಕಿದ ಬಳಿಕ ಮತ್ತೆ ಪೋಸ್ಟ್‌ ಹಾಕಿದ್ದು ಕಳೆದ ಜುಲೈ 27ರಂದು ಎಂಬುದು ಕುತೂಹಲಕಾರಿ. ನಂತರದಲ್ಲಿ ವಿಪರೀತ ಸಕ್ರಿಯವಾದ ಈ ಅಕೌಂಟ್ ಇಲ್ಲಿಯವರೆಗೆ ನಿರಂತರವಾಗಿ ತಿಮರೋಡಿಯವರ ಚಾರಿತ್ರ್ಯಹರಣ ಮಾಡುವ ಪೋಸ್ಟ್‌ಗಳನ್ನು ಹಾಕುತ್ತಾ ಬಂದಿದೆ. ಮೈಸೂರಿನ ʼಒಡನಾಡಿʼ ಸಂಸ್ಥೆಯ ಸ್ಟ್ಯಾನ್ಲಿಯವರನ್ನು ವಿಕೃತವಾಗಿ ನಿಂದಿಸುವ ಪೋಸ್ಟರ್‌ಗಳನ್ನು ಈ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Odanadi
ಒಳನಾಡಿ ಸ್ಟ್ಯಾನ್ಲಿ ಅವರ ವಿರುದ್ಧ ನಿಂದನಾತ್ಮಕ ಪೋಸ್ಟ್‌
stanly
ವೈ.ಎಂ.ಅಡ್ಮಿನ್‌ ಖಾತೆಯಲ್ಲಿನ ಪೋಸ್ಟ್‌ಗಳು

ಸೌಜನ್ಯ ಪ್ರಕರಣ ಮತ್ತೆ ಬಿರುಸು ಪಡೆದ ಬಳಿಕ ನಕಲಿ ಖಾತೆಗಳ ಕೆಲಸವೂ ಹೆಚ್ಚಾದಂತೆ ಕಾಣುತ್ತಿದೆ. ಸೌಜನ್ಯ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ನಿಜವಾದ ತಪ್ಪಿತಸ್ಥರನ್ನು ಹಿಡಿಯಬೇಕು ಎಂಬುದು ಬಹುತೇಕರ ಅಪೇಕ್ಷೆಯಾಗಿರುವುದು ಸದ್ಯದಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳಿಂದಲೇ ತಿಳಿಯುತ್ತಿದೆ. ಹೀಗಾಗಿ ಹೋರಾಟಗಾರರ ವಿರುದ್ಧ ಸುಳ್ಳುಗಳನ್ನು ಹಬ್ಬಿಸುತ್ತಿರುವವರ ವಿರುದ್ಧವೂ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X