ಸ್ಪರ್ಧಾತ್ಮಕ ಪರೀಕ್ಷೆಗಳು ಸಾಮಾನ್ಯವಾಗಿ ವಿದ್ಯಾರ್ಥಿಗಳು ತಿಳಿದಷ್ಟು ಕಠಿಣ ಇರುವುದಿಲ್ಲ. ಓದುವ ಬರೆಯುವ ಕೌಶಲ್ಯಗಳನ್ನು ಅರಿತಿರಬೇಕು. ಕಷ್ಟಪಟ್ಟು ಓದದೆ, ಇಷ್ಟಪಟ್ಟು ಓದಬೇಕು. ಗುಂಪು ಚರ್ಚೆಗಳನ್ನು ಮಾಡಬೇಕು. ಟಿಪ್ಪಣಿ ಮಾಡಿಕೊಳ್ಳಬೇಕು ಎಂದು ಧಾರವಾಡ ಅಂಜುಮನ್ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರುದ್ರೇಶ್ ಮೇಟಿಯವರು ವಿದ್ಯಾರ್ಥಿಗಳ ಕೌಶಲ್ಯಗಳ ಕುರಿತು ತಿಳಿಸಿದರು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದೊಂದಿಗೆ ನವನಗರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ನೀಲಮ್ಮ ಎಂ ಸಾತ್ಮಾರ ಮತ್ತು ಮಹಾದೇವಗೌಡ ಎಸ್ ಸಾತ್ಮಾರ ಹಾಗೂ ದಿ. ಮೋಹನ್ ನಾಗಮ್ಮನವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, “ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ವಿಶ್ವಾಸದಿಂದ ಪರಿಶ್ರಮ ಪಟ್ಟು ಓದಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಯೂರಿಯಾ ಗೊಬ್ಬರ ಕೊರತೆಯಿಂದ ರೈತರ ಪರದಾಟ: ಸರ್ಕಾರಕ್ಕೆ ಹಿಡಿಶಾಪ
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಅಶೋಕ್ ಸವಣೂರ ಮಾತನಾಡಿ, “ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಅರಿತು ಬದುಕನ್ನು ರೂಪಿಸಿಕೊಳ್ಳಬೇಕು” ಎಂದು ಹೇಳಿದರು.
ಕುಮಾರಿ ಅಕ್ಷತಾ ಪ್ರಾರ್ಥಿಸಿದರು. ಪ್ರೊ. ಕೆ ಎಸ್ ಕೌಜಲಗಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ. ಎಸ್ ಬಿ ವಸ್ತ್ರದಮಠ ನಿರೂಪಿಸಿದರು. ಪ್ರೊ. ಎಸ್ ಕೆ ಆದಪ್ಪನವರ ವಂದಿಸಿದರು. ಪ್ರೊ. ಬಿ ವಿ ಮಡಿವಾಳರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಪ್ರೊ . ಕೆ ಎಸ್ ಬಡಿಗೇರ ಇದ್ದರು.