ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

Date:

Advertisements

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ ಉಲ್ಲಂಘನೆಗಳಿವೆಯೇ ಎಂದು ಪತ್ತೆಹಚ್ಚಲು ಪರಿಶೀಲಿಸಲಾಗುತ್ತಿದೆ ಎಂದು ಟ್ರಂಪ್ ಆಡಳಿತವು ಗುರುವಾರ ಪ್ರಕಟಿಸಿದೆ.

ಅಮೆರಿಕಾದಲ್ಲಿ ವಾಸಿಸಲು ಅನುಮತಿ ಪಡೆದ ವಿದೇಶಿಗರ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ಹೊಸ ಕ್ರಮ ಜಾರಿಗೊಳಿಸಲಾಗಿದೆ. ವೀಸಾ ರದ್ದಾಗುವವರಲ್ಲಿ 6 ಸಾವಿರ ಭಾರತೀಯರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಧ್ಯಮವೊಂದರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅಮೆರಿಕದ ವಿದೇಶಾಂಗ ಇಲಾಖೆ, ಪ್ರವಾಸಿ ವೀಸಾಗಳನ್ನು ಹೊಂದಿರುವವರೂ ಸೇರಿದಂತೆ ಎಲ್ಲ ವೀಸಾ ಹೊಂದಿದ ವಿದೇಶಿಗರನ್ನು “ನಿರಂತರ ಪರಿಶೀಲನೆಗೆ” ಒಳಪಡಿಸಲಾಗುತ್ತದೆ ಎಂದು ತಿಳಿಸಿದೆ. ಈ ಪ್ರಕ್ರಿಯೆಯ ಮೂಲಕ, ಅವರು ಅಮೆರಿಕಾಗೆ ಪ್ರವೇಶಿಸಲು ಅಥವಾ ಅಲ್ಲಿ ಉಳಿಯಲು ಅನರ್ಹರಾಗಿದ್ದಾರೆಯೇ ಎಂದು ಪತ್ತೆಹಚ್ಚಲಾಗುವುದು. ಒಂದು ವೇಳೆ ಅಂತಹ ಮಾಹಿತಿ ಲಭ್ಯವಾದರೆ, ವೀಸಾವನ್ನು ರದ್ದುಗೊಳಿಸಲಾಗುವುದು. ವೀಸಾ ರದ್ದಾದ ವ್ಯಕ್ತಿ ಈಗಾಗಲೇ ಅಮೆರಿಕದಲ್ಲಿದ್ದರೆ, ಅವರನ್ನು ಗಡಿಪಾರು ಮಾಡಲಾಗುತ್ತದೆ.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸದನದ ಘನತೆಯನ್ನು ಮಣ್ಣುಪಾಲು ಮಾಡಿದ ಮಹನೀಯರು

ಈ ಪರಿಶೀಲನೆಯು ಪ್ರವಾಸಿಗರು ವೀಸಾ ಅವಧಿ ಮೀರಿದ್ದು, ಅಪರಾಧ ಚಟುವಟಿಕೆಗಳು, ಸಾರ್ವಜನಿಕ ಸುರಕ್ಷತೆಗೆ ಬೆದರಿಕೆ, ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗುವುದು ಅಥವಾ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವುದು ಸೇರಿದಂತೆ ವಿವಿಧ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತದೆ. ಕಾನೂನು ಜಾರಿ ದಾಖಲೆಗಳು, ವಲಸೆ ದಾಖಲೆಗಳು ಹಾಗೂ ವೀಸಾ ನೀಡಿದ ನಂತರ ಬೆಳಕಿಗೆ ಬಂದ ಯಾವುದೇ ಮಾಹಿತಿ ಸೇರಿದಂತೆ ಲಭ್ಯವಿರುವ ಎಲ್ಲ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ.

ಇದೇ ವೇಳೆ, ವಾಣಿಜ್ಯ ಟ್ರಕ್ ಚಾಲಕರಿಗೆ ನೀಡುತ್ತಿದ್ದ ಕಾರ್ಯ ವೀಸಾಗಳನ್ನು ನಿಲ್ಲಿಸಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಘೋಷಿಸಿದ್ದಾರೆ. ವಿದೇಶಿ ಚಾಲಕರ ಹೆಚ್ಚಳವು ಅಮೆರಿಕನ್ ಚಾಲಕರ ಜೀವನೋಪಾಯಕ್ಕೆ ಅಪಾಯ ತಂದಿದೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತಂದಿದೆ ಎಂದು ಅವರು ತಿಳಿಸಿದ್ದಾರೆ. ಈ ಎಲ್ಲ ಕ್ರಮಗಳು, ಅಮೆರಿಕನ್ ಉದ್ಯೋಗದಾತರು ವಿದೇಶಿ ಕೆಲಸಗಾರರನ್ನು ನೇಮಿಸಿಕೊಳ್ಳದಂತೆ ತಡೆಯುವ ಸರ್ಕಾರದ ಪ್ರಯತ್ನಗಳ ಭಾಗವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

ಗಾಝಾದಲ್ಲಿ ನರಮೇಧ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಮತ್ತು ಇಸ್ರೇಲ್ ರಾಯಭಾರಿ ನಡುವೆ ವಾಕ್ಸಮರ

ಗಾಝಾದಲ್ಲಿ 'ಅಲ್‌ಝಝೀರಾ' ಸಂಸ್ಥೆಯ ಪತ್ರಕರ್ತನನ್ನು ಇಸ್ರೇಲ್ ಹತ್ಯೆಗೈದಿದೆ. ಈ ಹತ್ಯೆಯನ್ನು ಕಾಂಗ್ರೆಸ್‌...

ಮೋದಿ-ಝೆಲೆನ್ಸ್ಕಿ ಫೋನ್ ಮಾತುಕತೆ: ರಷ್ಯಾ ತೈಲ ಖರೀದಿ ಕುರಿತು ಭಾರತದ ಮೇಲೆ ಉಕ್ರೇನ್‌ ಒತ್ತಡ

ರಷ್ಯಾ ಜೊತೆ ಸಂಘರ್ಷದಲ್ಲಿರುವ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಪ್ರಧಾನಿ...

ಗಾಝಾದಲ್ಲಿ ಹತ್ಯೆಯಾದ ಯುವ ಪತ್ರಕರ್ತರೊಬ್ಬರ ಭಿನ್ನ ಉಯಿಲು !

ನಾನು ಸಾಯುವುದಾದರೆ, ನನ್ನ ಸಿದ್ಧಾಂತಗಳ ಮೇಲೆ ದೃಢವಾಗಿರುವೆ. ದೇವರ ಮುಂದೆ ನಾನು...

Download Eedina App Android / iOS

X