ಚಿರತೆ ಸುಮಾರು ದಿನಗಳಿಂದ ಸ್ಥಳೀಯ ಹಳ್ಳಿಗಳಲ್ಲಿ ಕುರಿ ಹಸು, ಜಾನುವಾರು ಮತ್ತು ಗಿಲ್ಕೇನಹಳ್ಳಿಯ ರೈತ ಮಹಿಳೆಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಆರು ವರ್ಷದ ಗಂಡು ಚಿರತೆಯನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನಲ್ಲಿ ಸೆರೆ ಹಿಡಿಯಲಾಯಿತು. ಚಿರತೆ ದಾಳಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿದ್ದರು.

ಇತ್ತೀಚೆಗೆ ಗಿಲಿಕೇೆನಹಳ್ಳಿಯ ಹೊಲದಲ್ಲಿ ಮಹಿಳೆ ಮೇಲೆ ಎರಗಿದ್ದ ಚಿರತೆ ತೀವ್ರ ಗಾಯಗೊಳಿಸಿತ್ತು. ಚಿರತೆಯ ಜಾಡು ಹಿಡಿದು ಅರಣ್ಯ ಇಲಾಖೆ ಸೆರೆ ಹಿಡಿಯಲು ಯೋಜನೆ ರೂಪಿಸಿತ್ತು. ಹೊಳಲ್ಕೆರೆ ತಾಲ್ಲೂಕಿನ ಬಿಜಿಹಳ್ಳಿಯ ಬಳಿ ಭಾನುವಾರ ರಾತ್ರಿ 12 ಗಂಟೆಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಗ್ರಾಮದ ಹೊರವಲಯದಲ್ಲಿ ಬೋನು ಅಳವಡಿಸಿ, ಹಸುವನ್ನು ಕಟ್ಟಿ ಹಾಕಿ ಯೋಜನೆ ರೂಪಿಸಲಾಗಿತ್ತು. ಚಿರತೆ ಹಸುವನ್ನು ತಿನ್ನಲು ಅಟ್ಯಾಕ್ ಮಾಡಿದ ಸುದ್ದಿ ತಿಳಿದ ತಕ್ಷಣ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿ ಬೋನಿಗೆ ಕೆಡವಲಾಯಿತು.

ಹಸುವನ್ನು ತಿನ್ನಲು ಬಂದಿದ್ದ ಚಿರತೆಯನ್ನು ಬೋನಿಗೆ ಹಾಕಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೂ ಪಟ್ಟು ಬಿಡದ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಕೊನೆಗೂ ಬಂಧಿಸಿ ಬೋನಿಗೆ ಕೆಡವಿದ್ದು, ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ತಹಶೀಲ್ದಾರ ವಿಜಯಕುಮಾರ್, ಅರಣ್ಯಾಧಿಕಾರಿ ಸತೀಶ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು “ಚಿರತೆ ಸುಮಾರು 6 ವರ್ಷ ವಯಸ್ಸಿನದಾಗಿದ್ದು, ಚಿರತೆ ಅರಣ್ಯ ಇಲಾಖೆ ವಶದಲ್ಲಿದ್ದು, ಅಧಿಕಾರಿಗಳ ಪರವಾನಿಗಿಗೆ ಕಾಯುತ್ತಿದ್ದು, ಶೀಘ್ರದಲ್ಲೇ ಭದ್ರಾವತಿ ಅರಣ್ಯ ಪ್ರದೇಶಕ್ಕೆ ಸಾಗಿಸಲಾಗುವ ಯೋಜನೆ ಇದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆರೆ ನೀರು ಪೋಲು, ನೀರಾವರಿ ಇಲಾಖೆ ನಿರ್ಲಕ್ಷ್ಯ; ದುರಸ್ತಿಗೆ ರೈತಸಂಘದ ಮುಖಂಡರ ಆಗ್ರಹ
ಇತ್ತೀಚೆಗೆ ಗಿಲ್ಕೇನಹಳ್ಳಿ, ಶಿವಗಂಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾನುವಾರುಗಳ ಮೇಲೆ ಚಿರತೆ ದಾಳಿ, ಮಹಿಳೆ ಗಾಯಗೊಂಡ ಹಿನ್ನೆಲೆಯಲ್ಲಿ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರು ಚಿರತೆ ಸೆರೆ ಹಿಡಿಯಲು ಒತ್ತಾಯಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.