ವಿದ್ಯಾರ್ಥಿಗಳು, ಶೋಷಿತರು, ಬಡವರು, ದಲಿತರು, ಕೂಲಿಕಾರ್ಮಿಕರು ವಿದ್ಯಾರ್ಥಿ ಯುವಜನರು ಸಾಮಾಜಿಕವಾಗಿ ಮುನ್ನೆಲೆಗೆ ಬರಬೇಕು. ಯುವಜನರಿಗೆ ಮಾನವತಾವಾದಿ ಅಂಬೇಡ್ಕರ್ ಅವರ ಜೀವ ಆದರ್ಶವಾಗಬೇಕು ಎಂದು ಪ್ರೋ. ಚಿನ್ನ ಸ್ವಾಮಿ ಸೋಸಲೆ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಹೋಸಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ‘ಅಂಬೇಡ್ಕರ್ ಸ್ವರ್ಧಾತ್ಮಕ ಪರೀಕ್ಷೆ’ಯಲ್ಲಿ ಪರೀಕ್ಷೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶೋಷಿತರು ಸಾಮಾಜಿಕವಾಗಿ, ವೈಚಾರಿಕವಾಗಿ ಮಾತ್ರವಲ್ಲದೇ ಶೈಕ್ಷಣಿಕವಾಗಿ ಕೂಡ ಪ್ರಗತಿ ಸಾಧಿಸಬೇಕು. ದೇಶದಲ್ಲಿರುವ ಅಸಮಾನತೆ, ಅನಾಗರಿಕತೆ, ಮೌಡ್ಯತೆಯನ್ನು ಧಿಕ್ಕರಿಸಬೇಕು” ಎಂದು ಸಲಹೆ ನೀಡಿದರು.
“ಸಾಮರಸ್ಯದ ಬದುಕು ನಡೆಸಲು ಈ ಶಿಕ್ಷಣ ಅವರಿಗೆ ದಾರಿದೀಪವಾಗಬೇಕು. ಆ ನಿಟ್ಟಿನಲ್ಲಿ ಯುವಜನತೆ, ವಿದ್ಯಾರ್ಥಿಗಳಿಗೆ ಮಾನವತಾವಾದದ ಅಂಬೇಡ್ಕರ್ ಜೀವನ ಆರ್ದಶವಾಗಬೇಕು. ಶಿಕ್ಷಣದ ಮೂಲಕವೇ ಮಹಾ ಚೈತನ್ಯವಾಗಬೇಕು” ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಭೀಮ್ ಆರ್ಮಿ (ಭಾರತ್ ಏಕಾತ್ ಮಿಷನ್) ವಿದ್ಯಾರ್ಥಿ ಘಟಕ ರಾಜ್ಯಾಧ್ಯಕ್ಷ ರಘು ಸಿ ಬಳ್ಳಾರಿ, ಶಂಕ್ರುಕಾಟ್ರಳ್ಳಿ, ಡಿವಿಪಿ ಜಿಲ್ಲಾ ಸಂಚಾಲಕ ಹನುಮೇಶ್, ತಾಲೂಕು ಅಧ್ಯಕ್ಷ ಗೌತಮ್, ಶಿವಕುಮಾರ್ ಛಲವಾದಿ ಮಹಾಸಾಭಾ ಜಿಲ್ಲಾ ಕಾರ್ಯದರ್ಶಿ ಅಜಯ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.