ರಾಯಚೂರು | ಎಸ್‌ಸಿ/ಎಸ್‌ಟಿ ಮಾರ್ಗಸೂಚಿ ಉಲ್ಲಂಘನೆ – ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ

Date:

Advertisements

ಯರಮರಸ್ ಹತ್ತಿರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿಗೆ ಕೆಕೆಆರ್‌ಡಿಬಿ ಮಂಡಳಿಯ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ 28.95 ಕೋಟಿ ರೂ. ಅನುದಾನ ನೀಡಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(ಎಸ್‌ಸಿ/ಎಸ್‌ಟಿ)ದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಕೂಡಲೇ ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಾಜುಪಟ್ಟಿ ಹೇಳಿದರು.

ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, “2020-21ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಮಂಡಳಿಯಿಂದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ 22.75 ಕೋಟಿ ರೂ. ಅನುದಾನವನ್ನು 2021 ಜನವರಿ 7ರಂದು ವಿಮಾನ ನಿಲ್ದಾಣದ ಕಾಮಗಾರಿಗೆ ನೀಡಿದೆ. 2022-23 ನೇ ಸಾಲಿನಲ್ಲಿ 6.22 ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಒಟ್ಟು 28.96 ಕೋಟಿ ರೂ. ಅನುದಾನವನ್ನು ನೀಡಲಾಗಿದೆ” ಎಂದರು.

ಎಸ್‌ಸಿಪಿ, ಟಿಎಸ್‌ಪಿ ಅನುದಾನ ನೀಡಿದ ಕುರಿತು 2023 ಜನವರಿ 28ರಂದು ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ, ಟಿಎಸ್‌ಪಿ ಕೋಶಕ್ಕೆ ದೂರು ನೀಡಿದೆ. ಈ ಕುರಿತು ಇದೇ ಆಗಸ್ಟ್‌ 10ರಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ತನಿಖೆಗೆ ಆದೇಶಿಸಿದೆ” ಎಂದು ತಿಳಿಸಿದರು.

Advertisements

“ವಿಮಾನ ನಿಲ್ದಾಣದ ಕಾಮಗಾರಿಗೆ ಇನ್ನು 23 ಎಕರೆ 24 ಗುಂಟೆ ಜಮೀನು ಭೂ ಸ್ವಾಧೀನ ಪ್ರಕ್ರಿಯೆ ನಡೆಯದೇ ನೆನೆಗುದಿಗೆ ಬಿದ್ದಿದೆ. 2022 ನವೆಂಬರ್‌ನಲ್ಲಿ ಭೂ ಸ್ವಾಧೀನ ಮತ್ತು ಪುನರ್ವಸತಿಗಾಗಿ 13 ಕೋಟಿ ರೂ. ಅನುದಾನ ನೀಡಿದೆ. ಭೂ ಸ್ವಾಧೀನ ಮಾಡಲು ಜಿಲ್ಲಾಡಳಿತ ಮೌನವಹಿಸಿದೆ. ಭೂ ಸ್ವಾಧೀನ ಪ್ರಕ್ರಿಯೆ ಇದ್ದರೂ ತರಾತುರಿಯಲ್ಲಿ 2023 ಫೆಬ್ರವರಿ 16ರಂದು ಲೋಕೋಪಯೋಗಿ ಇಲಾಖೆಯಿಂದ 143 ಕೋಟಿ ರೂ.ನ ಟೆಂಡರ್ ಕರೆದು ಕೇವಲ 8 ದಿನಗಳ ಕಾಲಾವಕಾಶ ನೀಡಲಾಗಿತ್ತು. ಲೋಕೊಪಯೋಗಿ ಇಲಾಖೆಯು 14 ಕೋಟಿ ರೂ. ಕಾಮಗಾರಿ ಟೆಂಡರ್‌ನಲ್ಲಿ 16 ದಿನಗಳ ಕಾಲಾವಕಾಶ ನೀಡಿದ್ದು, ಅಕ್ರಮಕ್ಕೆ ಸಾಕ್ಷಿಯಾಗಿದೆ” ಎಂದರು.

“ವಿಮಾನ ನಿಲ್ದಾಣದ ಕಾಮಗಾರಿಯನ್ನು ಕೆಎಂವಿ ಪ್ರೊಜೆಕ್ಟ್ ಲಿಮಿಟೆಡ್ ಕಂಪನಿಗೆ ನೀಡಲಾಗಿದೆ. ಶೇ.4.99ರಷ್ಟು ಹೆಚ್ಚುವರಿ ಲಾಭಾಂಶಕ್ಕೆ ಟೆಂಡರ್ ಗುತ್ತಿಗೆ ನೀಡಿ ಅಕ್ರಮ ಎಸಗಿದೆ” ಎಂದು ದೂರಿದರು.

“ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆರ್ಥಿಕ ಇಲಾಖೆಯ ಸುತ್ತೋಲೆಯಂತೆ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಅಂದಾಜು ಮೊತ್ತದ ಮೇಲೆ ಶೇ.5ಕ್ಕಿಂತ ಹೆಚ್ಚಿನ ಲಾಭಾಂಶವುಳ್ಳ ಟೆಂಡರ್ ಯಾವುದೇ ಕಾರಣಕ್ಕೂ ಅಂಗೀಕರಸತಕ್ಕದ್ದಲ್ಲವೆಂದು ತಿಳಿಸಿದೆ. ಅಂಗೀಕರಿಸಲು ಕಾರಣ ನೀಡಿ ಉನ್ನತ ಪ್ರಾಧಿಕಾರ ಅನುಮೋದನೆ ಪಡೆದು ಅಂಗೀಕರಿಸಬೇಕು. ಇಲ್ಲಿಯೂ ಅಕ್ರಮಕ್ಕೆ ದಾರಿ ಮಾಡಿಕೊಟ್ಟಿದೆ” ಎಂದು ಆರೋಪಿಸಿದರು.

“ವಿಮಾನ ನಿಲ್ದಾಣದ ಕಾಮಗಾರಿ ಆರಂಭಕ್ಕೂ ಮುಂಚೆ ಟೆಂಡರ್ ನಿಯಮಗಳ ಪ್ರಕಾರ ಸ್ಥಳದಲ್ಲಿ ಕಾಂಕ್ರಿಟ್ ಬ್ಯಾಚ್ ಮಿಕ್ಸ್ ಪ್ಲಾಂಟ್, ಹಾಟ್ ಮಿಕ್ಸ್ ಪ್ಲ್ಯಾಂಟ್ ಅಳವಡಿಸಬೇಕು. ಈ ಮೊದಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿಯಿಂದ ಸಿಎಫ್‌ಒ ಪ್ರಮಾಣ ಪತ್ರ ಪಡೆಯಬೇಕು. ಆದರೇ ಪ್ರಮಾಣ ಪತ್ರ ಪಡೆದಿಲ್ಲದಿರುವುದು ನಿಯಮ ಬಾಹಿರವಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | 84.82 ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆಗೆ ಶೀಘ್ರ ಚಾಲನೆ: ಶಾಸಕ ಪ್ರಭು ಚವ್ಹಾಣ 

“ಈ ಅಕ್ರಮಗಳಲ್ಲಿ ಭಾಗಿಯಾದ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಕೆಟಿಪಿಪಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಿಗೆ ದೂರು ನೀಡಲಾಗುವುದು” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರುಗಳಾದ ಚಂದ್ರಶೇಖರ, ಅಯ್ಯಪ್ಪ, ಹಾಗೂ ಜಗದೀಶ, ನಾಗರಾಜ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನವಜಾತ ಶಿಶುವನ್ನು ರಸ್ತೆ ಬದಿ ಬಿಟ್ಟು ಹೋದ ಪೋಷಕರು!

ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಕಲ್ಲೂರು ರಸ್ತೆಯ ಬಳಿಯಲ್ಲಿ ಇಂದು ಹೃದಯವಿದ್ರಾವಕ...

ರಾಯಚೂರು | ಗ್ರಾಮವನ್ನು ಪಟ್ಟಣ ಪಂಚಾಯತ್ ಮೇಲ್ದರ್ಜೆಗೆ ಏರಿಸಬಾರದು : ಗ್ರಾಮಸ್ಥರ ಪ್ರತಿಭಟನೆ

ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಬಾರದು ಎಂದು ರಾಜ್ಯ...

ರಾಯಚೂರು | ಶೀಲಹಳ್ಳಿ ಸೇತುವೆ ಮುಳುಗಡೆ : ನಾಲ್ಕು ಗ್ರಾಮಕ್ಕೆ ಸಂಪರ್ಕ ಕಡಿತ

ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಳುಗಿದ್ದು,...

ರಾಯಚೂರು | ನಿರಂತರ ಮಳೆ : ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ

ಜಿಲ್ಲೆಯಲ್ಲಿ ನಿರಂತರ ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೂರ್ಯಕಾಂತಿ ಬೆಳೆಗಾರರ...

Download Eedina App Android / iOS

X