ಬೆಂಗಳೂರು | ಜನರನ್ನು ವಂಚಿಸಲು ಬಳಸುತ್ತಿದ್ದ 15,000 ಸಿಮ್ ಕಾರ್ಡ್‌ ಬ್ಲಾಕ್ ಮಾಡಿದ ಪೊಲೀಸರು

Date:

Advertisements

ಸೈಬರ್ ಕ್ರೈಮ್ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಮೂರು ವಾರಗಳಲ್ಲಿ ವಂಚಕರು ಬೆಂಗಳೂರಿನ ನಿವಾಸಿಗಳನ್ನು ವಂಚಿಸಲು ಬಳಸುತ್ತಿದ್ದ 15,000 ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ನಗರ ಪೊಲೀಸರು ಗುರುತಿಸಿ ಬ್ಲಾಕ್ ಮಾಡಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಗರದಲ್ಲಿ ಸೈಬರ್ ಕ್ರೈಮ್ ಘಟನೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಆಗಸ್ಟ್ 16 ರಂದು ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಕ್ರಮದ ಭಾಗವಾಗಿ ಪೊಲೀಸರು ಆ.16 ರಿಂದ ಸೆ.7 ರವರೆಗೆ 15,378 ಸಿಮ್ ಕಾರ್ಡ್‌ಗಳನ್ನು ಗುರುತಿಸಿ ಬ್ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಿಮ್ ಕಾರ್ಡ್‌ಗಳಲ್ಲಿ ಹೆಚ್ಚಿನವು ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಂಚಕರು ಬೆಂಗಳೂರಿನ ನಿವಾಸಿಗಳನ್ನು ನಾನಾ ವಿಧಾನಗಳ ಮೂಲಕ ವಂಚಿಸಲು ಬಳಸುತ್ತಿದ್ದರು.

Advertisements

“ಈ ವರ್ಷದ ಜನವರಿಯಿಂದ ಸೈಬರ್ ಕ್ರೈಮ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚನೆಗೆ ಒಳಗಾದವರಿಂದ ಈಗಾಗಲೇ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ್ದೇವೆ. ನಾನಾ ವಿಧಾನಗಳ ಮೂಲಕ ವಂಚಕರು ಅವರನ್ನು ಸಂಪರ್ಕಿಸಿ, ವಂಚಿಸಿದ್ದಾರೆ. ವಂಚನೆಗೆ ಒಳಗಾದವರನ್ನು ಗುರುತಿಸಲಾಗಿದೆ. ಈ ಸಂಖ್ಯೆಗಳನ್ನು ಗುರುತಿಸಿ, ಪರಿಶೀಲಿಸಲಾಗಿದೆ. ಅವುಗಳನ್ನು ತಕ್ಷಣವೇ ನಿರ್ಬಂಧಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಉಪ ಪೊಲೀಸ್ ಆಯುಕ್ತ (ಕಮಾಂಡ್ ಸೆಂಟರ್) ರವೀಂದ್ರ ಗಡಾಡಿ ಮಾತನಾಡಿ, “ಒಂದೇ ಸಿಮ್ ಕಾರ್ಡ್ ಬಳಸಿ ಅನೇಕ ಅಮಾಯಕರನ್ನು ವಂಚಿಸಬಹುದು. ಆದ್ದರಿಂದ, ಆ ಸಿಂಗಲ್ ಸಿಮ್ ಕಾರ್ಡ್ ತಕ್ಷಣವೇ ಬ್ಲಾಕ್ ಆಗಿದ್ದರೂ, ಇತರ ಬಲಿಪಶುಗಳನ್ನು ಗುರಿಯಾಗಿಸಲು ಅದೇ ಸಿಮ್ ಅನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆ ಮಧ್ಯೆ ನಿಂತ ಹೆಲಿಕಾಪ್ಟರ್: ಮತ್ತಷ್ಟು ಹೆಚ್ಚಾದ ಸಂಚಾರ ದಟ್ಟಣೆ

“ಈ ರೀತಿಯಾಗಿ ವಂಚನೆಗೆ ಒಳಗಾಗುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ” ಎಂದು ತಿಳಿಸಿದರು.

ವಂಚನೆಯ ಚಟುವಟಿಕೆಗಳಿಗೆ ಬಳಸಲಾದ ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ಗುರುತಿಸಲು ಪೊಲೀಸರು ಹಿಂದಿನ ವರ್ಷಗಳ ಪ್ರಕರಣದ ಫೈಲ್‌ಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅದೇ ಉದ್ದೇಶಕ್ಕಾಗಿ ಇನ್ನೂ ಅದೇ ಸಿಮ್ ಕಾರ್ಡ್‌ಗಳನ್ನು ಬಳಸಿದರೆ ಅವುಗಳನ್ನು ನಿರ್ಬಂಧಿಸಬಹುದು ಎಂದು ತಿಳಿದುಬಂದಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

Download Eedina App Android / iOS

X