ಸನಾತನ ಧರ್ಮ ನಂಬುವವರು ಹಿಂದುತ್ವ ದೂರಮಾಡಿ; ಹಿಂದೂ ವಾಯ್ಸಸ್ ಫಾರ್‌ ಪೀಸ್ ಸಂಘಟನೆ ಮನವಿ

Date:

"ಹಿಂದುತ್ವವಾದವು ನಿಜವಾಗಿಯೂ ಇಂದು ಸನಾತನ ಧರ್ಮಕ್ಕೆ ಅಂಟಿರುವ ಕೋವಿಡ್‌ನಂತಹ ವ್ಯಾಧಿಯಾಗಿದೆ" ಎಂದಿದೆ ಸಂಘಟನೆ

“ಸನಾತನ ಧರ್ಮದಲ್ಲಿ ನಂಬಿಕೆ ಉಳ್ಳವರು ಮೊದಲು ಹಿಂದುತ್ವವನ್ನು ದೂರಮಾಡಿ” ಎಂದು ಹಿಂದೂ ವಾಯ್ಸಸ್ ಫಾರ್‌ ಪೀಸ್ ಸಂಘಟನೆ ತಿಳಿಸಿದೆ.

ಹಿಂದೂಗಳ ಪರವಾಗಿ ಅಖಿಲ ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಈ ಸಂಘಟನೆಯು, “ಸನಾತನ ಧರ್ಮದ ನಿರ್ಮೂಲನೆ ವಿವಾದ” ಸಂಬಂಧ ಪತ್ರಿಕಾ ಹೇಳಿಕೆ ನೀಡಿದೆ.

’ಹಿಂದುತ್ವ’ ಎಂಬುದು ಶತಪ್ರತಿಶತ ಒಂದು ವಿಭಜನೀಯ ರಾಜಕೀಯ ಸಿದ್ಧಾಂತವೇ ಹೊರತು, ಧರ್ಮದೊಂದಿಗೆ ತೃಣ ಸಮಾನವಾದ ಸಂಬಂಧವನ್ನೂ ಹೊಂದಿರುವಂತಹದ್ದಲ್ಲ. ಸನಾತನ ಧರ್ಮದ ಯಾವುದೇ ಶೃತಿ, ಸ್ಮೃತಿ, ಪುರಾಣಗಳಲ್ಲಿ ಹಿಂದುತ್ವದ ಲವಲೇಶದ ಉಲ್ಲೇಖವೂ ಸಿಗದು ಹಾಗೂ ಅದರ ದ್ವೇಷಾಧಾರಿತ ವಿಭಜನೀಯ ವಾದಗಳು ಧರ್ಮಾಧಾರಿತವಾದ್ದಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಲಪಂಥೀಯ ರಾಷ್ಟ್ರವಾದಿ ಸಂಘಟನೆಯಾಗಿರುವ ಆರ್‌ಎಸ್‌ಎಸ್‌ ಹಾಗೂ ಅದರ ಕೈಗೂಸಾದ ಬಿಜೆಪಿಯ ಸಿದ್ಧಾಂತವಾಗಿರುವ ಈ ಹಿಂದುತ್ವವಾದವು ನಿಜವಾಗಿಯೂ ಇಂದು ಸನಾತನ ಧರ್ಮಕ್ಕೆ ಅಂಟಿರುವ ಕೋವಿಡ್‌ನಂತಹ ವ್ಯಾಧಿಯಾಗಿದೆ. ಹೇಗೆ ಕೋವಿಡ್‌ಗೆ ತ್ವರಿತಗತಿಯಲ್ಲಿ ಔಷಧವನ್ನು ಕಂಡು ಹಿಡಿದು ನಿಯಂತ್ರಿಸಲಾಗಿತ್ತೋ ಹಾಗೆಯೇ ಧರ್ಮನಿಷ್ಠ ಹಿಂದೂಗಳು ಇಂದು ಹಿಂದುತ್ವನ್ನು ಶಮನಗೊಳಿಸಬೇಕಿದೆ ಎಂದು ಅಭಿಪ್ರಾಯ ತಾಳಿದೆ.

ಹಿಂದೂ ವಾಯ್ಸಸ್ ಫಾರ್‌ ಪೀಸ್ ಸಂಘಟನೆಯ ಪತ್ರಿಕಾ ಹೇಳಿಕೆಯ ಪೂರ್ಣಪಠ್ಯ

’ಸನಾತನ’ ಈ ವಿಶೇಷಣದ ಮೂಲವು ’ಸನಾತ್‌’  ಇಂದ ಉದ್ಭವಿಸುತ್ತದೆ. ’ಸನತ್‌’ ಎಂದರೆ ’ಎಂದಿಗೂ ಇರುವಂಥದ್ದು’,’ ‘ಅಳಿಸಲಾಗದ್ದು’. ’ಧರ್ಮ’- ಈ ಪದದ ಬಗ್ಗೆ ಕಡಿಮೆ ಬರೆದಷ್ಟೂ ಒಳ್ಳೆಯದು. ಪ್ರಸ್ತುತ ಸನ್ನಿವೇಶಕ್ಕೆ ’ಧರ್ಮ’ವೆಂದರೆ ಆಂಗ್ಲ ಭಾಷೆಯ ಒಂದು ಸಮನಾರ್ಥಕ ಪದವಾದ ’ರಿಲಿಜಿಯನ್’ ಎಂತಲೇ ಭಾವಿಸೋಣ.

ಈ ಅರ್ಥಗಳ ಸಮೀಕರಣದಲ್ಲಿ, ಅಂದರೆ ಉದಯನಿಧಿ ಸ್ಟಾಲಿನ್ ಅವರು ಪ್ರಾಯಶಃ ಭಾವಿಸಿಕೊಂಡಂತೆ, ನಮಗೆ ಸಿಗುವುದು- ’ಎಂದಿಗೂ ಅಳಿಯದ, ಅಳಿಸಲಾಗದಂತಹ ಧರ್ಮ ಅರ್ಥಾತ್‌ ರಿಲಿಜಿಯನ್’ ಅಳಿಯಬೇಕೆ?- ಎಂಬ ಪ್ರಶ್ನೆ.

ಪೆರಿಯಾರ್‌, ಕರುಣಾನಿಧಿ, ಡಿಎಂಕೆ ಪರಂಪರೆಯ ಕುಡಿಯಾದ ಉದಯನಿಧಿ ಸ್ಟಾಲಿನ್‌ ಅವರ ನಿಲುವಾಗಿರುವ “ಸನಾತನ ಧರ್ಮವು ಡೆಂಘಿ, ಮಲೇರಿಯಾ, ಕೋವಿಡ್‌ನಂತೆ ಅಳಿಯಬೇಕು” ಎಂಬುದು ಸ್ಟಾಲಿನ್ ಅವರ ಐತಿಹಾಸಿಕ ಹಿನ್ನೆಲೆಯಿಂದ ಅರ್ಥ ಮಾಡಿಕೊಂಡರೆ ಸಹಜವೆನಿಸುವುದಷ್ಟೇ. ಪೆರಿಯಾರ್‌ ಅವರ ವೈಚಾರಿಕತೆಗೆ ಹೋಲಿಸಿದರೆ ಉದಯನಿಧಿಯವರ ಅಭಿಪ್ರಾಯ ಸೌಮ್ಯವೆಂದೇ ಹೇಳಬಹುದು.

ಉದಯನಿಧಿಯವರು ಸನಾತನ ಧರ್ಮವನ್ನು ಡೆಂಘಿ, ಮಲೇರಿಯಾ, ಕೋವಿಡ್‌ ಮಹಾ ವ್ಯಾಧಿಗಳಿಗೆ ಹೋಲಿಸಿರುವುದು ವಿಚಾರಯೋಗ್ಯ. ಸನಾತನ ಧರ್ಮದ ಪ್ರಕರಣ ಗ್ರಂಥಗಳಲ್ಲಿ ಒಂದಾದ ವಿವೇಕ ಚೂಡಾಮಣಿಯಲ್ಲಿ ’ಘೋರ ಧರ್ಮ’ಗಳ ಉಲ್ಲೇಖವಿದೆ. ಹೇಗೆ ’ಸನಾತನ’ ಎಂಬುದು ಧರ್ಮಕ್ಕೆ ಒಂದು ವಿಶೇಷಣವೋ ಹಾಗೆಯೇ ಘೋರ- ಎಂಬುದಕ್ಕೆ ’ದುಷ್ಟ’, ’ದೂರವಿರಿಸಬೇಕಾದ್ದು’ ಎಂಬ ಅರ್ಥಬರುವ ವಿಶೇಷಣವನ್ನೂ ವಿವೇಕಚೂಡಾಮಣಿಯಲ್ಲಿ ಧರ್ಮಕ್ಕೆ ಉಲ್ಲೇಖಿಸಲಾಗಿದೆ. ಯಾವ ಸಂದರ್ಭದಲ್ಲಿ ಇದನ್ನು ಹೇಳಲಾಗಿದೆ ಎಂಬುದು ಪ್ರಸ್ತುತ.

ಡಂಭಾಚಾರ, ಅಂದರೆ ಸ್ವಃತ ಲಾಭಕ್ಕೆ ಮಾಡುವ ಬಾಹ್ಯ ಆಚರಣೆಗಳು- ಇದನ್ನು ರಾಜಸಿಕ ಹಾಗೂ ಘೋರ ಎಂದೇ ಹೇಳಲಾಗಿದೆ. ಇದರಿಂದ ದೂರವಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಧರ್ಮದ ಹೆಸರಲ್ಲಿ ನಡೆಯುತ್ತ ಬಂದಿರುವ ಅನೇಕ ಆಚರಣೆಗಳು ಉದಾಹರಣೆಗೆ- ಅಸ್ಪೃಶ್ಯತೆ, ಜಾತಿ ತಾರತಮ್ಯ, ಮಡಿವಂತಿಕೆ ಇತ್ಯಾದಿಗಳು ಡಂಭಾಚಾರಗಳೇ ಹೊರತು ಧರ್ಮ ಸಮ್ಮತವಾದುವುಗಳಲ್ಲ.

ಹಾಗೆಂದ ಮಾತ್ರಕ್ಕೆ ಸನಾತನ ಧರ್ಮದಲ್ಲಿ ಪ್ರಾಮಾಣಿಕ ನಿಷ್ಠೆಯುಳ್ಳವರು- “ನಮ್ಮ ಧರ್ಮದಲ್ಲಿ ಈ ಆಚರಣೆಗಳನ್ನು ಮಾಡಬಾರದು ಎಂದು ಬಾಯಲ್ಲಿ ಹೇಳಿ ಸುಮ್ಮನೆ ಕೂರಲು ಅವಕಾಶವಿಲ್ಲ”. ಈ ಸಂದರ್ಭದಲ್ಲಿ ಉದಯನಿಧಿಯವರ ಅಭಿಪ್ರಾಯ ಅತ್ಯಂತ ಮಹತ್ವವುಳ್ಳದ್ದಾಗಿ ತೋರುತ್ತದೆ.

ನಮ್ಮ ಧರ್ಮದಲ್ಲಿಯೇ ಡಂಭಾಚಾರಗಳನ್ನು ಮಾಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ, ಇಂದಿಗೂ ಏಕೆ ಈ ಆಚರಣೆಗಳು ನಮ್ಮ ಸಮಾಜದಲ್ಲಿ ಜೀವಂತವಾಗಿವೆ ಎಂಬುದು ಅತ್ಯಂತ ಸಹಜವಾಗಿ ಏಳುವ ಹಾಗೂ ಏಳಬೇಕಾದ ಪ್ರಶ್ನೆ.

ಉದಯನಿಧಿಯವರು ಮೂರು ಮಹಾ ವ್ಯಾಧಿಗಳನ್ನು ಉದಾಹರಿಸಿದ್ದಾರೆ. ಅವುಗಳೆಂದರೆ ಡೆಂಘಿ, ಮಲೇರಿಯಾ ಹಾಗೂ ಕೋವಿಡ್‌. ಇವುಗಳಲ್ಲಿ ಎರಡು ಪ್ರಾಚೀನವಾದರೂ ಇಂದಿಗೂ ಜೀವಂತವಾಗಿವೆ. ಕೋವಿಡ್ ನೂತನವಾಗಿದ್ದು, ಅಷ್ಟೇ ಭಯಾನಕ ವ್ಯಾಧಿಯೂ ಆಗಿದೆ. ಅದೇ ರೀತಿಯಲ್ಲಿ ಸನಾತನ ಧರ್ಮಕ್ಕೆ ಅಂಟಿರುವ ಡಂಭಾಚಾರಗಳ ವ್ಯಾಧಿಗಳಲ್ಲಿ ಕೆಲವು ಪ್ರಾಚೀನವೂ ಕೆಲವು ಪರಿವರ್ತನೆಗೊಂಡು ಆಧುನಿಕ ಕಾಲಕ್ಕೆ ಹೊಂದಿಕೊಂಡಿರುವಂತಹವೂ ಆಗಿವೆ. ಅಸ್ಪೃಶ್ಯತೆ, ಜಾತಿವಾದ, ಮಡಿವಂತಿಕೆಗಳು ಪ್ರಾಚೀನ ಡಂಭಾಚಾರಗಳಾದರೆ, ಶಿಕ್ಷಣ, ಉದ್ಯೋಗಗಳಲ್ಲಿ ಜಾತಿ ಆಧಾರಿತ ತಾರತಮ್ಯ ಮಾಡುವುದು ಅದರ ಪರಿವರ್ತಿತ ರೂಪವಾಗಿದೆ.

ಈ ಎಲ್ಲ ಡಂಭಾಚಾರಗಳ ಪೈಕಿ ಸನಾತನ ಧರ್ಮದಲ್ಲಿ ನಿಷ್ಠೆ ಉಳ್ಳವರು ಮೊದಲು ದೂರ ಮಾಡಬೇಕಾಗಿರುವುದು ’ಹಿಂದುತ್ವ’ ಎಂಬ ವ್ಯಾಧಿಯನ್ನು.

’ಹಿಂದುತ್ವ’ ಎಂಬುದು ಶತಪ್ರತಿಶತ ಒಂದು ವಿಭಜನೀಯ ರಾಜಕೀಯ ಸಿದ್ಧಾಂತವೇ ಹೊರತು, ಧರ್ಮದೊಂದಿಗೆ ತೃಣ ಸಮಾನವಾದ ಸಂಬಂಧವನ್ನೂ ಹೊಂದಿರುವಂತಹದ್ದಲ್ಲ. ಸನಾತನ ಧರ್ಮದ ಯಾವುದೇ ಶೃತಿ, ಸ್ಮೃತಿ, ಪುರಾಣಗಳಲ್ಲಿ ಹಿಂದುತ್ವದ ಲವಲೇಶದ ಉಲ್ಲೇಖವೂ ಸಿಗದು ಹಾಗೂ ಅದರ ದ್ವೇಷಾಧಾರಿತ ವಿಭಜನೀಯ ವಾದಗಳು ಧರ್ಮಾಧಾರಿತವಾದುದ್ದಲ್ಲ.

ಬಲಪಂಥೀಯ ರಾಷ್ಟ್ರವಾದಿ ಸಂಘಟನೆಯಾಗಿರುವ ಆರ್‌ಎಸ್‌ಎಸ್‌ ಹಾಗೂ ಅದರ ಕೈಗೂಸಾದ ಬಿಜೆಪಿಯ ಸಿದ್ಧಾಂತವಾಗಿರುವ ಈ ಹಿಂದುತ್ವವಾದವು ನಿಜವಾಗಿಯೂ ಇಂದು ಸನಾತನ ಧರ್ಮಕ್ಕೆ ಅಂಟಿರುವ ಕೋವಿಡ್‌ನಂತಹ ವ್ಯಾಧಿಯಾಗಿದೆ. ಹೇಗೆ ಕೋವಿಡ್‌ಗೆ ತ್ವರಿತಗತಿಯಲ್ಲಿ ಔಷಧವನ್ನು ಕಂಡು ಹಿಡಿದು ನಿಯಂತ್ರಿಸಲಾಗಿತ್ತೋ ಹಾಗೆಯೇ ಧರ್ಮನಿಷ್ಠ ಹಿಂದೂಗಳು ಇಂದು ಹಿಂದುತ್ವನ್ನು ಶಮನಗೊಳಿಸಬೇಕಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಜಾತಿಶ್ರೇಷ್ಠತೆಯ ವ್ಯಸನ- ‘ಸನಾತನ’ ಮನಸ್ಥಿತಿಯ ವ್ಯಾಧಿ

ಮಹತ್ವದ ಇನ್ನೊಂದು ವಿಚಾರವೆಂದರೆ ಹಿಂದುತ್ವವನ್ನು ಸೋಲಿಸುವ ನೆಪದಲ್ಲಿ, ಸನಾತನ ಧರ್ಮದ ಹೆಸರಿನಲ್ಲಿ ನಡೆಯುತ್ತ ಬಂದಿರುವ ಇತರ ಡಂಭಾಚಾರಗಳನ್ನು ಕಡೆಗಣಿಸಲಾಗದು ಹಾಗೂ ಕಡೆಗಣಿಸಲೂಬಾರದು. ದ್ವೇಷ ರಾಜಕಾರಣವಾದ ಹಿಂದುತ್ವದ ವಿರುದ್ಧ ಹೋರಾಡುತ್ತಲೇ ಸಾಮಾಜಿಕ ಅಸಮಾನತೆಗಳನ್ನು ಹೋಗಲಾಡಿಸುವ ಜವಾಬ್ದಾರಿ ಸನಾತನ ಧರ್ಮದಲ್ಲಿ ಪ್ರಾಮಾಣಿಕ ನಿಷ್ಠೆ ಇರಿಸಿಕೊಂಡಿರುವವರದ್ದಾಗಿದೆ.

ಈ ಹಿನ್ನೆಲೆಯಲ್ಲಿ ಈ ವಿಚಾರಕ್ಕೆ ಆಸ್ಪದ ಮಾಡಿಕೊಟ್ಟ ಉದಯನಿಧಿ ಸ್ಟಾಲಿನ್ ಅವರಿಗೆ ಧರ್ಮನಿಷ್ಠರು ತಮ್ಮ ಧನ್ಯವಾದಗಳನ್ನು ತಿಳಿಸಬೇಕು. ಅವರು ನಿಜವಾಗಿಯೂ ಸಾಮಾಜಿಕ ಕಳಕಳಿ ಇರಿಸಿಕೊಂಡು ಈ ಹೇಳಿಕೆ ನೀಡಿದ್ದಲ್ಲಿ, ಈ ಚರ್ಚೆಯನ್ನು ಹೇಗೆ ನಾವು ಸಕಾರಾತ್ಮಕವಾಗಿ ಮುಂದೊಯ್ಯಬಹುದು ಹಾಗೂ ಅದರಿಂದ ಬರುವ ನಿರ್ಧಾರಗಳನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದರ ದಿಸೆಯಲ್ಲಿ ವಿಚಾರ ಮಾಡಬೇಕು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಜ್ರಿವಾಲ್ ಜಾಮೀನು ವಿಸ್ತರಣೆ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಸ್ತರಣೆ ಅರ್ಜಿಯ...

ಅಂತ್ಯಗೊಳ್ಳುತ್ತಿದೆ ಮೋದಿ-ಶಾ ‘ಬ್ರಾಂಡ್’ ರಾಜಕಾರಣ; ಅದಕ್ಕೆ ಮಹಾರಾಷ್ಟ್ರವೇ ಸಾಕ್ಷಿ

ನರೇಂದ್ರ ಮೋದಿ ಮತ್ತು ಅಮಿತ್ ಶಾ – ಇಬ್ಬರಿಗೂ ದಿನನಿತ್ಯ ಒಂದಲ್ಲೊಂದು...

ಅಸ್ಸಾಂ| ಮನೆಯ ಬಾತ್‌ರೂಮ್‌ನಲ್ಲಿತ್ತು 35 ಹಾವುಗಳು; ವಿಡಿಯೋ ವೈರಲ್

ಅಸ್ಸಾಂನಲ್ಲಿ ನಾಗಾಂವ್ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಮನೆಯೊಂದರ ಬಾತ್‌ರೂಮ್‌ನಲ್ಲಿ ಬರೋಬ್ಬರಿ 35...

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ...