ಪಾಕಿಸ್ತಾನದ ವಿರುದ್ಧ ಇಂದು ನಡೆದ ಏಷ್ಯಾ ಕಪ್ ಸೂಪರ್- 4 ಹಂತದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಎರಡು ವಿಕೆಟ್ಗಳಿಂದ ರೋಚಕವಾಗಿ ಗೆದ್ದು, ಫೈನಲ್ ಪ್ರವೇಶಿಸಿದೆ.
ಮಳೆಬಾಧಿತ ಈ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಎರಡು ವಿಕೆಟ್ಗಳಿಂದ (ಡಕ್ ವರ್ತ್ ಲೂಯಿಸ್ ವಿಧಾನ) ಪಾಕಿಸ್ತಾನವನ್ನು ಸೋಲಿಸುವ ಮೂಲಕ 2023ರ ಏಷ್ಯಾ ಕಪ್ ಫೈನಲ್ ತಲುಪಿತು.
ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಏಷ್ಯಾಕಪ್ ಇತಿಹಾಸದಲ್ಲಿ ಎಂಟನೇ ಬಾರಿಗೆ ಭಾರತ-ಶ್ರೀಲಂಕಾ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿದೆ.