(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಕಮಲಾಕರ ಕಡವೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಡವೆ ಎಂಬ ಗ್ರಾಮದವರು. ಓದಿದ್ದೆಲ್ಲ ಮೈಸೂರು ಮತ್ತು ಪುಣೆಯಲ್ಲಿ. ನೆಲೆ ಕಂಡುಕೊಂಡಿದ್ದು ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ.
ಇಂಗ್ಲಿಷ್ ಅಧ್ಯಾಪಕರಾದ ಕಮಲಾಕರ ಕಡವೆ ಅವರಿಗೆ ಕವಿತೆಗಳ ಮೇಲೆ ಅಪಾರ ಪ್ರೀತಿ. ಹಾಗಾಗಿಯೇ, ಬೇರೆ-ಬೇರೆ ಭಾಷೆಗಳಿಂದ ಕನ್ನಡಕ್ಕೆ ದಿನಕ್ಕೊಂದು ಕವಿತೆ ಅನುವಾದಿಸುವ ನಿರ್ಧಾರ ಮಾಡಿ, ಇದುವರೆಗೆ 600ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಾಗೆಯೇ, ಕನ್ನಡದ ಪ್ರಮುಖ ಕವಿತೆಗಳನ್ನು ಇಂಗ್ಲಿಷ್ಗೆ ಕೂಡ ಅನುವಾದ ಮಾಡಿದ್ದಾರೆ.
ಈ ಅನುವಾದದ ಹುಕಿ, ಅನುವಾದಕರ ಸಾಲಿನಲ್ಲಿ ಇವರಿಗೆ ಅತ್ಯಂತ ವಿಶಿಷ್ಟ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಸಾಕಷ್ಟು ಮಂದಿ ಭಾಷಾ ಅಧ್ಯಾಪಕರಿಗೆ ಸ್ಫೂರ್ತಿಯನ್ನೂ ಕೊಟ್ಟಿದೆ. ಹೀಗೆ, ಕರ್ನಾಟಕದಿಂದ 845 ಕಿಲೋಮೀಟರ್ ದೂರವಿದ್ದುಕೊಂಡೇ ಸದ್ದಿಲ್ಲದೆ ಕನ್ನಡದ ಕೆಲಸ ಮಾಡುತ್ತಿರುವ ಕಮಲಾಕರ ಕಡವೆ ಅವರೊಂದಿಗಿನ ಮಾತುಕತೆ ಇಲ್ಲಿದೆ – ನಿಮಗಾಗಿ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ