ಹಿಂದೂ ಧರ್ಮದ ಪ್ರಮುಖ ದೇವರುಗಳಲ್ಲಿ ಗಣೇಶನೂ ಒಂದು ದೇವರು. ಭಾರತದಲ್ಲಿ ಬಹಳ ಜನರು ಪೂಜಿಸುವ ದೇವರು. ಗಣೇಶ ಚೌತಿಯ ದಿನ ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಹಬ್ಬವನ್ನು ಪ್ರತಿವರ್ಷದಂತೆ ನಮ್ಮೂರಿನ ಹಿರಿಯರು, ಯುವಕರೊಂದಿಗೆ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿಯ ಅಧ್ಯಕ್ಷ ರಮೇಶ ಉಮಚಗಿ ಹೇಳಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಹಿಂದೂ ಮಹಾಸಭಾ ಗಣಪತಿ ಸೇವಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. “ಹಬ್ಬದ ವೇಳೆ ಅನ್ನ ಸಂತರ್ಪಣೆ, ಹಲವು ರೀತಿಯ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಎಲ್ಲರೂ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ; ಸೆ.25ರವರೆಗೆ ವಿಸ್ತರಣೆ
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರುಗಳಾದ ಶಿವಪ್ಪ ರಗಟಿಯವರು, ಅಮರಪ್ಪ ಗುಡಗುಂಟಿ, ಎನ್ ಎಚ್ ಹಡಪದ, ಗುಡ್ಡಪ್ಪ ಹಡಪದ, ನಿಂಗಪ್ಪ ಸೂರಣಗಿ, ರಮೇಶ್ ಈಳಿಗೇರ, ಹನುಮಂತಪ್ಪ ಜಿಗಳೂರ, ಮಾಂತೇಶ ಉಮಚಗಿ, ದುಂಡಪ್ಪ ಬಾಗಲದ, ಬಸವಣ್ಣೆಪ್ಪ ಬಾಣದ ಸೇರಿದಂತೆ ಯುವಜನರು, ಸಂಘದ ಪದಾಧಿಕಾರಿಗಳು ಇದ್ದರು.