ಯಾದಗಿರಿ | ಲಘುವಾಹನ ನಿಲುಗಡೆಗೆ ಸ್ಥಳ ನೀಡುವಂತೆ ಒತ್ತಾಯ

Date:

ಯಾದಗಿರಿ ಜಿಲ್ಲೆಯಾಗಿ 13 ವರ್ಷಗಳಿ ಕಳೆದರೂ ಈವರೆಗೆ ಸಾಕಷ್ಟು ಹೋರಾಟ ನಡೆಸಿ, ಮನವಿ ಸಲ್ಲಿಸಿದ್ದರೂ, ಪತ್ರಿಕೆ ಟಿವಿ ಮಾಧ್ಯಮದಲ್ಲಿ ಸುದ್ದಿಯಾದರೂ ಕೂಡ ಈವರೆಗೆ ಲಘುವಾಹನ ಚಾಲಕರಿಗೆ ಒಂದು ಟ್ಯಾಕ್ಸಿ ಸ್ಟ್ಯಾಂಡ್ ಒದಗಿಸಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್‌ ಕೆ ಮುದ್ನಾಳ್‌ ಆರೋಪಿಸಿದರು.

- Advertisement -

ಯಾದಗಿರಿ ನಗರದ ಲಘು ವಾಹನ ನಿಲುಗಡೆ ಸ್ಥಳ ಒದಗಿಸಿಕೊಡುವಂತೆ ಗಿರಿನಾಡು ಕಾರು ಚಾಲಕರ ಸಂಘದ ಕಾರ್ಯಕರ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರರಿಗೆ ಮತ್ತು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

“ಲಘು ವಾಹನ ಚಾಲಕರು ಇಂದಿಗೂ ರಸ್ತೆ ಬದಿಯಲ್ಲಿಯೇ ನಿಂತು ತಮ್ಮ ವ್ಯವಹಾರ ಮಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ತೆರಿಗೆ ಕಟ್ಟುವಲ್ಲಿ ಚಾಲಕರು ಮತ್ತು ಮಾಲೀಕರು ಮೊದಲ ಸ್ಥಾನದಲ್ಲಿದ್ದಾರೆ. ಏಕೆಂದರೆ ತೆರಿಗೆ ಪಾವತಿಸಿದ ನಂತರವೇ ವಾಹನವನ್ನು ರಸ್ತೆಗೆ ಇಳಿಸಲಾಗುತ್ತದೆ. ಇನ್ಷೂರೆನ್ಸ್ ಪಾವತಿ ಮಾಡಿದ ಮೇಲೆಯೇ ವಾಹನ ಬಳಕೆ ಆರಂಭವಾಗುತ್ತದೆ. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಮುಂಗಡವಾಗಿಯೇ ತೆರಿಗೆ ಪಾವತಿಸುವ ಇಂತಹ ವಾಹನ ಮಾಲೀಕರು ಮತ್ತು ಚಾಲಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯಾದಾಗಿನಿಂದ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರ ನಿರ್ಲಕ್ಷ್ಯದಿಂದ ಜಿಲ್ಲೆಯ ಅಭಿವೃದ್ಧಿಯಾಗಿಲ್ಲ. ಈಗ ಸ್ವತಃ ಜಿಲ್ಲೆಯವರೇ ಸಚಿವರಾಗಿದ್ದೀರಿ. ಆದ್ದರಿಂದ ಜಿಲ್ಲೆಯ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಸಚಿವರಿಗೆ ಮನವಿ ಮಾಡಿದರು.

ಸಚಿವ ದರ್ಶನಾಪೂರ ಅವರು ಮಾತನಾಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಸೂಚಿಸಿದರು. ವಾಹನ ನಿಲುಗಡೆ ಸ್ಥಳದಲ್ಲಿ ಮೂಲ ಸೌಕರ್ಯಗಳಾದ ಕೊಳವೆಬಾವಿ, ಶೆಡ್ ನಿರ್ಮಾಣ, ಶೌಚಾಲಯ ವ್ಯವಸ್ಥೆ ಮಾಡಿಕೊಡಲು ಸೂಚಿಸುವುದಾಗಿ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ನಿಮಿತ್ತ 395 ಹೆಚ್ಚುವರಿ ಪೌರಕಾರ್ಮಿಕರ ನೇಮಕ: ಎಂಸಿಸಿ

ಈ ಸಂದರ್ಭದಲ್ಲಿ ಗಿರಿನಾಡು ಕಾರು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಸಣ್ಣಗೌಡ ಇಟಗಿ, ಉಪಾಧ್ಯಕ್ಷ ಶಿವ ಶರಣಪ್ಪ ನಾರಣಪೇಟ್, ಖಜಾಂಚಿ ಸಾಬಯ್ಯ ಗುತ್ತೇದಾರ್, ಸದಸ್ಯರುಗಳಾದ ಶರಣು ಜೋತ, ಅಶೋಕ್ ಸಜ್ಜನ್, ವೆಂಕಟರೆಡ್ಡಿ ನಾಯ್ಕಲ್, ರಸಿದ್ ಪಾಷಾ, ಬಾಬಾ ಸಲೀಂ, ಶೇಕ್, ಸಂತೋಷ್ ರಾಥೋಡ್, ಬಾಬಾ ಪಟೇಲ್, ಸಾಬೀರ್, ಬಂದಪ್ಪ ಅಕ್ಕಿ, ಸಿದ್ದು ಉಮೇಶ್, ಸದಾಶಿವ ವಿಶ್ವನಾಥ್ ನವೀನ್, ಅಕ್ರಂ, ಜಮಲ್, ರಫೀಕ್, ಮೈನುದ್ದಿನ್, ಶರಣು ಹೊಸಮನಿ, ಅಪ್ಸರ್, ಬೀರಪ್ಪ, ಮಹೇಶ್ ಹೊಸಮನಿ, ದಿಲೀಪ್, ಅಜಿತ್, ನೈಮ್, ಬನಶಂಕರ್, ವಿಶ್ವಸ್ವಾಮಿ, ವಿಜಯಕುಮಾರ್, ಕಾಡಪ್ಪ, ವೀರೇಶ್ ಗೌಡ, ಮೌಲ, ಗೌಸ್, ರಿಯಾಜ್, ದೇವರಾಜ್ ಕುಮನೂರ್, ಷಡಕ್ಷಯ ಸ್ವಾಮಿ, ಅಯ್ಯಣ್ಣ, ಮೈಬೂಬ್, ಭೀಮು ಪೂಜಾರಿ, ತಾಯಪ್ಪ ಕೊಹಿಲೂರ್ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಸೆ.16ರಂದು ‘ಕಲ್ಯಾಣದಲ್ಲಿ ಕ್ಷೀರ ಕ್ರಾಂತಿ’

ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರ ಸ್ಮರಣಾರ್ಥ ಜೈ ಸೀತಾರಾಮ ರೈತ...

ಯಾದಗಿರಿ | ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸೆ.17ರಂದು ಸಂಕಲ್ಪ ಸಮಾವೇಶ

ಕಲ್ಯಾಣ ಕರ್ನಾಟಕದಲ್ಲಿ ಮುಂದುವರಿದಿರುವ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಸಂವಿಧಾನದ ಕಲಂ...

ಯಾದಗಿರಿ | ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಭಕ್ತರ ಮೇಲೆ ಹಲ್ಲೆ: 14 ಜನರ ವಿರುದ್ಧ ಪ್ರಕರಣ ದಾಖಲು

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಭಕ್ತರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ...