ಮೊಬೈಲ್ ಕಳುವಾದಾಗ ಹೀಗೆ ಮಾಡಿ ಎಂದ ಬೆಂಗಳೂರು ನಗರ ಪೊಲೀಸ್‌

Date:

Advertisements

ನಮ್ಮ ಮೊಬೈಲ್ ಕಳುವಾದಾಗ ಅದರಲ್ಲಿರುವ ಫೋಟೋ, ದಾಖಲಾತಿಗಳು ಸೇರಿದಂತೆ ಇನ್ನಿತರ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಇದನ್ನು ತಪ್ಪಿಸಲು ಬೆಂಗಳೂರು ನಗರ ಪೊಲೀಸ್‌ ಇಲಾಖೆ ಜನರಿಗೆ ಉಪಾಯವೊಂದು ತಿಳಿಸಿದೆ. ಅದೇನೆಂದರೆ, ಮೊಬೈಲ್‌ ಅನ್ನು ಬ್ಲಾಕ್‌ ಮಾಡಲು ಕರ್ನಾಟಕ ಪೊಲೀಸ್‌ ಇಲಾಖೆಯ ಆ್ಯಪ್ ಸಹಾಯ ಮಾಡಲಿದೆ.

ಕರ್ನಾಟಕ ಪೊಲೀಸ್‌ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್‌ ಆ್ಯಪ್(KSP Application) ಕಳುವಾದ ಮೊಬೈಲ್ ಅನ್ನು ಬ್ಲಾಕ್ ಮಾಡಲು ಸಹಾಯ ಮಾಡಲಿದೆ.

ನಿಮ್ಮ ಮೊಬೈಲ್ ಕಳೆದುಹೋದಾಗ ನಿಮ್ಮ ಬಳಿ ಇನ್ನೊಂದು ಮೊಬೈಲ್ ಇದ್ದರೆ ಅಥವಾ ಕುಟುಂಬದವರ ಮೊಬೈಲ್ ಅಥವಾ ಸ್ನೇಹಿತರ ಮೊಬೈಲ್‌ನಲ್ಲಿ ಕೆಎಸ್‌ಪಿ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿಕ್ಕೊಳ್ಳಬೇಕು. ನಂತರ ಅದರಲ್ಲಿ ಈ ನಂಬರ್ ಅಥವಾ ಈ ಮೊಬೈಲ್ ಬ್ಲಾಕ್‌ ಮಾಡಿ ಎಂದು ದೂರು ದಾಖಲಿಸಬಹುದು.

Advertisements

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಇಲಾಖೆ ಎಕ್ಸ್‌ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆಎಸ್‌ಪಿ ಅಪ್ಲಿಕೇಶನ್‌ನಲ್ಲಿ ಯಾವ ರೀತಿ ದೂರು ದಾಖಲಿಸಬಹುದು ಎಂಬ ವಿಧಾನಗಳ ಮೂಲಕ ತಿಳಿಸಿದೆ.

  • ಮೊದಲಿಗೆ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಗೂಗಲ್‌ ಪ್ಲೇ ಸ್ಟೋರ್‌ನಿಂದ ಕೆಎಸ್‌ಪಿ ಅಪ್ಲಿಕೇಶನ್ (KSP Application) ಡೌನ್​ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕು.
  • ಮೊಬೈಲ್‌ ದೂರನ್ನು ಇ-ಲಾಸ್ಟ್‌ (E-Lost) ನಲ್ಲಿ ವರದಿ ಮಾಡಲು ಕೆಎಸ್‌ಪಿ ಅಪ್ಲಿಕೇಶನ್ ಅನ್ನು ಓಪನ್‌ ಮಾಡಿ, ಅಲ್ಲಿರುವ ಇ-ಲಾಸ್ಟ್‌(E-Lost) ವರದಿ ಆಪ್ಶನ್ (option) ಅನ್ನು ಆಯ್ಕೆ ಮಾಡಿಕೊಳ್ಳಿ.
  • ಈಗ E-Lost ವರದಿಯನ್ನು ನೋಂದಾಯಿಸಿ, ಆಪ್ಶನ್‌ ಅನ್ನು ಆಯ್ಕೆ ಮಾಡಿರಿ.
  • ನಂತರ ನಿಮ್ಮ ಹೆಸರು, ವಿಳಾಸ, ಜಿಲ್ಲೆ, ಮೊಬೈಲ್‌ ನಂಬರ್‌ ಹಾಗೂ ಸಾಧ್ಯವಾದರೆ ಇ-ಮೇಲ್‌ ಐಡಿ ನೋಂದಾಯಿಸಿರಿ. ನಂತರ ಮುಂದಿನ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮ್ಮ ಮೊಬೈಲ್‌ನ ಬಿಲ್‌ ಇದ್ದರೆ ಅದನ್ನು ಅಪ್‌ಲೋಡ್‌ ಮಾಡಿ ನಂತರ select article option ಅನ್ನು ಆಯ್ಕೆ ಮಾಡಿ.
  • ಇದಾದ ಬಳಿಕ ಮೊಬೈಲ್‌ ಆಪ್ಶನ್‌ ಆಯ್ಕೆ ಮಾಡಿಕೊಳ್ಳಿ.
  • ನಂತರ ಮೊಬೈಲ್‌ ಮಾಹಿತಿಯನ್ನು ನೋಂದಾಯಿಸಿ. ಬಳಿಕ, ಆಡ್‌ (Add) ಆಪ್ಶನ್‌ ಅನ್ನು ಆಯ್ಕೆ ಮಾಡಿಕೊಳ್ಳಿರಿ
  • ಮೊಬೈಲ್‌ ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು ಹಾಗೂ ಕಳೆದು ಹೋದ ಬಗೆಯ ಬಗ್ಗೆ ಮಾಹಿತಿ ನೋಂದಾಯಿಸಿ ಸಬ್ಮಿಟ್ ಆಪ್ಶನ್ (submit option) ಆಯ್ಕೆ ಮಾಡಿ.
  • ಕೊನೆಯಲ್ಲಿ ರಶೀದಿ ಸಿಗಲಿದೆ. ಅದನ್ನು ಡೌನ್‌ ಲೋನ್‌ ಮಾಡಿ ಇಟ್ಟುಕೊಳ್ಳಿರಿ.

ಬೆಂಗಳೂರು ನಗರ ಪೊಲೀಸ್ ಇಲಾಖೆ ಮಾಡಿದ ಟ್ವೀಟ್‌ಗೆ ಹಲವು ಜನ ಪ್ರತಿಕ್ರಿಯೆ ನೀಡಿದ್ದು, “ನನ್ನ 2 ಫೋನ್‌ಗಳನ್ನು ಕಳೆದುಕೊಂಡಿದ್ದೇನೆ. ಕೆಎಸ್‌ಪಿ ಅಪ್ಲಿಕೇಶನ್‌ನಲ್ಲಿ ನಿಖರವಾದ ದಿನಾಂಕ, ಸಮಯ ಮತ್ತು ಬಿಲ್‌ನೊಂದಿಗೆ ನಾನು ವರದಿ ಮಾಡಿದ್ದೇನೆ. ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಆದರೆ, ನನಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಲಭ್ಯವಿಲ್ಲ” ಎಂದು ಎಕ್ಸ್‌ ಬಳಕೆದಾರ ಪ್ರವೀಣ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣೇಶ ವಿಸರ್ಜನೆ ಮೆರವಣಿಗೆ; ಅ.1 ರವರೆಗೆ ಮದ್ಯ ಮಾರಾಟ ನಿಷೇಧ

ಮತ್ತೋರ್ವ ಎಕ್ಸ್‌ ಬಳಕೆದಾರ ಅಸದ್‌ ಖಾನ್ ಎಂಬುವವರು, “ಕಳೆದ 2 ತಿಂಗಳ ಹಿಂದೆ ಮೈಸೂರು ಬಳಿ ನನ್ನ ಫೋನ್ ಕಳುವಾಗಿತ್ತು. ನಾನು ಕೆಎಸ್‌ಪಿ ಮತ್ತು ನಂತರ ಸಿಇಐಆರ್‌ನಲ್ಲಿ ದೂರು ಸಲ್ಲಿಸಿದ್ದೆ. ನನಗೆ ಮಂಡ್ಯ ಪೊಲೀಸರಿಂದ ಕರೆ ಬಂದಿತು. ಅವರು ನನಗೆ ನನ್ನ ಫೋನ್ ಅನ್ನು ಹುಡುಕಿ ಕೊಟ್ಟರು. ಪೊಲೀಸರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X