ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಕೋಮು ದ್ವೇಷ; ಅ.11ರಂದು ಪ್ರತಿಭಟನಾ ಜಾಥಾ

Date:

Advertisements

ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೋಮುವಾದಿ, ಜಾತಿವಾದಿ ಆರ್‌ಎಸ್‌ಎಸ್‌ ಮತ್ತು ಎಬಿವಿಪಿ ಸಂಘಟನೆಗಳು ಸಮಾಜ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾಜಮುಖಿ ಮೌಲ್ಯಗಳನ್ನು ಕಲಿಸುವ ಮೂಲಕ ಶಿಕ್ಷಣ ನೀಡುವ ವಿಶ್ವವಿದ್ಯಾಲಯದ ಸದುದ್ದೇಶವನ್ನೇ ಮಣ್ಣುಪಾಲು ಮಾಡುತ್ತಿವೆ. ಅವರಿಗೆ ಪೂರಕವಾಗಿ ಕೆಲವು ಜಾತಿವಾದಿ, ಕೋಮುವಾದಿ ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಲಭೂತವಾದದ ವಿಷವನ್ನು ಬಿತ್ತುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಬೇಕು ಎಂದು ಎಂದು ಒತ್ತಾಯಿಸಿ ಅಕ್ಟೋಬರ್ 11ರಂದು ಪ್ರತಿಭಟನಾ ಜಾಥಾ ನಡೆಸುತ್ತೇವೆ ಎಂದು ‘ಕೋಮುವಾದ ಅಳಿಸಿ ಕೇಂದ್ರೀಯ ವಿವಿ ಉಳಿಸಿ’ ಆಂದೋಲನದ ಮುಖಂಡರು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿನ ಕೋಮುವಾದಿ ಚಟುವಟಿಕೆಗಳನ್ನು ಖಂಡಿಸಿ ಆಂದೋಲನದ ಮುಖಂಡರು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಡಾ. ಡಿ.ಜಿ ಸಾಗರ, “ವಿಶ್ವವಿದ್ಯಾಲಯಕ್ಕೆ ವ್ಯಾಸಂಗ ಮಾಡಲು ಬರುವ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಬದಲಾಗಿ ಅವರ ಮನಸ್ಸಿನಲ್ಲಿ ಜಾತಿವಾದ, ಕೋಮುವಾದ, ಧರ್ಮಾಂಧತೆಯ ವಿಷವನ್ನು ಬಿತ್ತಲಾಗುತ್ತಿದೆ. ವಿದ್ಯಾರ್ಥಿಗಳನ್ನು ಧರ್ಮಾಂಧ ಜಾತಿವಾದಿ, ಕೋಮುವಾದಿ, ಸಮಾಜ ಕಂಟಕರನ್ನಾಗಿ ರೂಪಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

“ಕಲ್ಯಾಣ ಕರ್ನಾಟಕ ಭಾಗದ ಜನರ ಸಾಮುದಾಯಿಕ ಸಮಸ್ಯೆಗಳಿಗೆ ಸಂಶೋಧನೆಯ ಮೂಲಕ ಪರಿಹಾರವನ್ನು ಸೂಚಿಸುವುದಕ್ಕೆ ಬದಲಾಗಿ, ವಿಶ್ವವಿದ್ಯಾಲಯವನ್ನು ಕೋಮುವಾದಿಗಳ ಪ್ರಯೋಗ ಶಾಲೆಯನ್ನಾಗಿ ರೂಪಿಸಲು ಹೊರಟಿರುವುದು ಬೌದ್ಧಿಕ ದಾರಿದ್ರತನವಾಗಿದೆ. ಜನಸಾಮಾನ್ಯರ ತೆರಿಗೆ ಹಣದ ಋಣಪ್ರಜ್ಞೆಯ ಕನಿಷ್ಠ ವಿವೇಕವೂ ಇಲ್ಲದ ವಿಶ್ವವಿದ್ಯಾಲಯದ ಕೆಲವು ಜಾತಿವಾದಿ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದೆ ಸಮಾಜಕ್ಕೆ ದ್ರೋಹ ಎಸಗುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

Advertisements

“ಪ್ರೊ . ಬಟ್ಟು ಸತ್ಯನಾರಾಯಣ ಅವರು ವಿಶ್ವವಿದ್ಯಾಲಯಕ್ಕೆ ಕುಲಪತಿಗಳಾಗಿ ನೇಮಕವಾದ ಮೇಲೆ ಇಡೀ ವಿಶ್ವವಿದ್ಯಾಲಯದ ಶೈಕ್ಷಣಿಕ ವಾತಾವರಣವು ಕೋಮುವಾದೀಕರಣಕ್ಕೆ ಒಳಗಾಗಿದೆ. ಆರ್‌ಎಸ್‌ಎಸ್‌, ಎಬಿವಿಪಿಗಳಂತಹ ಕೋಮುವಾದಿ ಸಂಘಟನೆಗಳಿಗೆ ಸಹಕಾರ ನೀಡುವ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರಿಗೆ ಮಾತ್ರ ಉಳಿಗಾಲ ಎಂಬಂತಾಗಿದೆ. ಕೋಮುವಾದವನ್ನು ವಿರೋಧಿಸುವವರು ವಿಶ್ವವಿದ್ಯಾಲಯ ತೊರೆಯಬೇಕು ಎಂಬ ಭಯದ ವಾತಾವರಣವನ್ನು ನಿರ್ಮಿಸಲಾಗಿದೆ. ಸರ್ವಜನಾಂಗ ಶಾಂತಿಯ ತೋಟದಂತೆ, ಬಹುತ್ವ ಭಾರತದ ಮೌಲ್ಯಾಧಾರಿತ ವಾತಾವರಣದಲ್ಲಿ ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯುವುದಕ್ಕೆ ಬದಲಾಗಿ, ಭಯದಲ್ಲಿ ಬದುಕಬೇಕಾಗಿದೆ” ಎಂದು ಹೇಳಿದ್ದಾರೆ.

“ಪ್ರೊ. ಬಟು ಸತ್ಯನಾರಾಯಣ ಅವರು ಕುಲಪತಿಯಾಗಿ ಬಂದ ಮೇಲೆ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಮೊಟ್ಟಮೊದಲಿಗೆ ರಾಮನವಮಿ, ಸರಸ್ವತಿ ಪೂಜೆ, ಹೋಮ ಹವನ, ಗಣೇಶ ಉತ್ಸವಗಳು ಆರಂಭವಾಗಿವೆ. ದೇಶದ ಬೇರೆಬೇರೆ ರಾಜ್ಯಗಳಿಂದ ಬಂದ ಎಲ್ಲ ಜಾತಿ, ಧರ್ಮ, ಭಾಷೆ, ಸಮುದಾಯದ ವಿದ್ಯಾರ್ಥಿಗಳು ಭ್ರಾತೃತ್ವದಿಂದ ವಿದ್ಯೆ ಕಲಿಯುವ ಸಾಮರಸ್ಯದ ವಾತಾವರಣವನ್ನು ಹಾಳು ಮಾಡಿ, ಇಡೀ ವಿಶ್ವವಿದ್ಯಾಲಯವನ್ನು ದ್ವೇಷದ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ. ವಿದ್ಯಾರ್ಥಿಗಳ ನಡುವಿನ ಸ್ನೇಹ ಭಾವವನ್ನು ನಾಶ ಮಾಡಿ, ಅವರ ನಡುವೆ ಕೋಮುವಾದಿ ದ್ವೇಷವನ್ನು ಬಿತ್ತಿರುವುದಕ್ಕೆ ವಿಶ್ವವಿದ್ಯಾಲಯದಲ್ಲಿ ಕಳೆದ ಎರಡು ವರ್ಷಗಳ ಈಚೆಗೆ ನಡೆದಿರುವ ಕೆಲವು ವಿದ್ಯಾರ್ಥಿ ವಿರೋಧಿ ಘಟನೆಗಳೇ ನಿದರ್ಶನವಾಗಿವೆ” ಎಂದು ಅವರು ತಿಳಿಸಿದ್ದಾರೆ.

“ವಿಶ್ವವಿದ್ಯಾಲಯದಲ್ಲಿ ಕೋಮುವಾದ ಬಿತ್ತುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 11ರಂದು ಕಲಬುರಗಿಯ ಅಂಬೇಡ್ಕರ್ ಪ್ರತಿಮೆ ಮೈದಾನ ಕಡಗಂಚಿಯಿಂದ ಕೇಂದ್ರೀಯ ವಿಶ್ವವಿದ್ಯಾಲಯವರೆಗೆ ಬೃಹತ್ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಕೇಂದ್ರೀಯ ವಿಶ್ವವಿದ್ಯಾಲಯ ಮುತ್ತಿಗೆ ಹಾಕುತ್ತೇವೆ” ಎಂದು ಅವರು ಹೇಳಿದ್ದಾರೆ.

ಪತ್ರಿಕೆ ಗೋಷ್ಠಿಯಲ್ಲಿ ಡಾ. ಡಿ.ಜಿ.ಸಾಗರ, ಪ್ರೋ.ಆರ್. ಕೆ ಹುಡುಗಿ, ಲಚ್ಚಪ್ಪ ಜಮಾದಾರ್,ಮೀನಾಕ್ಷಿ ಬಳಿ, ಮಹಾಂತೇಶ ಎಸ್. ಕೌಲಾಗಿ, ಮಾರುತಿ ಗೋಖಲೆ,ಸುರೇಶ ಹಾದಿಮನಿ,ಅಶ್ವಿನಿ ಮದನಕ್, ಅಬ್ದುಲ್ ಖಾದರ್, ಲಕ್ಷ್ಮೀಕಾಂತ ಹುಬಳಿ ಇನ್ನಿತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X