ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಶ್ವಕಪ್ನಲ್ಲಿ ಪ್ರಮುಖ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ವೇಗವಾಗಿ 1,000 ರನ್ಗಳನ್ನು ಗಳಿಸಿದ ದಾಖಲೆ ಈಗ ವಾರ್ನರ್ ಪಾಲಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ಭಾರತದ ವಿರುದ್ಧದ ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಮುರಿದಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ಎಸೆತವನ್ನು ಬೌಂಡರಿಗೆ ಬಾರಿಸುವ ಮೂಲಕ ಡೇವಿಡ್ ವಾರ್ನರ್ ಏಕದಿನ ವಿಶ್ವಕಪ್ನಲ್ಲಿ 1000 ರನ್ಗಳ ಮೈಲಿಗಲ್ಲು ದಾಟಿದ್ದಾರೆ. ಈ ಸಾಧನೆಗಾಗಿ ವಾರ್ನರ್ ಕೇವಲ 19 ಇನ್ನಿಂಗ್ಸ್ಗಳನ್ನು ಮಾತ್ರವೇ ಬಳಸಿಕೊಂಡಿದ್ದಾರೆ. ಆ ಮೂಲಕ ಸಚಿನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
Fastest to reach 1,000 runs in the ICC Cricket World Cup (innings):
David Warner – 19*.
Sachin Tendulkar – 20.
AB De Villiers – 20. pic.twitter.com/fquppR6Gce
— Mufaddal Vohra (@mufaddal_vohra) October 8, 2023
ಸಚಿನ್ ತೆಂಡೂಲ್ಕರ್ ಹಾಗೂ ಎಬಿ ಡಿವಿಲಿಯರ್ಸ್ ಅವರು 20 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ಈಗ ಈ ದಾಖಲೆಯನ್ನು ಮುರಿದಂತಾಗಿದೆ. ಈ ಸಾಧನೆ ಮಾಡಲು ಈ ಪಂದ್ಯದಲ್ಲಿ ವಾರ್ನರ್ಗೆ 8 ರನ್ಗಳ ಅಗತ್ಯವಿತ್ತು. ಅದನ್ನು ಇಂದಿನ ಪಂದ್ಯದಲ್ಲಿ ಸಾಧಿಸಿದ್ದಾರೆ.
ಈ ಬಾರಿಯ ವಿಶ್ವಕಪ್ ಟೂರ್ನಿಗೂ ಮುನ್ನ ವಾರ್ನರ್ ತಮ್ಮ ಲಯಕ್ಕೆ ಮರಳಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದ್ದಾರೆ. ಇನ್ನು ಈ ಪಂದ್ಯದಲ್ಲಿಯೂ ವಾರ್ನರ್ ಆಸ್ಟ್ರೇಲಿಯಾಗೆ ಉತ್ತಮ ಆರಂಭವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಆರಂಭಿಕ ಆಟಗಾರ ಮಿಚೆಲ್ ಮಾರ್ಶ್ ತಂಡ 5 ರನ್ಗಳಿಸಿದ್ದಾಗ ವಿಕೆಟ್ ಕಳೆದುಕೊಂಡಿದ್ದರೂ ಸ್ಮಿತ್ ಜೊತೆಗೆ ಸೇರಿಕೊಂಡು ಅರ್ಧ ಶತಕದ ಜೊತೆಯಾಟವನ್ನು ನೀಡಿದರು.
52 ಎಸೆತಗಳನ್ನು ಎದುರಿಸಿದ ವಾರ್ನರ್ 41 ರನ್ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ಕುಲ್ದೀಪ್ ಯಾದವ್ ಅವರ ಬೌಲಿಂಗ್ನಲ್ಲಿ ಅವರಿಗೇ ಕ್ಯಾಚ್ ನೀಡಿ ವಾರ್ನರ್ ನಿರ್ಗಮಿಸಿದರು.
Kuldeep Yadav cleans up Glenn Maxwell.
Indian spinners destroying the Australian batting at Chepauk! pic.twitter.com/H3EVZaXIAM
— Mufaddal Vohra (@mufaddal_vohra) October 8, 2023
7 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ
ಸದ್ಯ ಆಸ್ಟ್ರೇಲಿಯಾ ತಂಡವು 140 ರನ್ ಗಳಿಸಿದ್ದು, ಪ್ರಮುಖ ಏಳು ವಿಕೆಟ್ಗಳನ್ನು ಕಳೆದುಕೊಂಡಿದೆ.
ಆಸಿಸ್ ಬ್ಯಾಟರ್ಗಳು ಭಾರತದ ಸ್ಪಿನ್ ಮೋಡಿಗೆ ಉತ್ತರಿಸಲು ಪರದಾಡುತ್ತಿದ್ದು, 37 ಓವರ್ ವೇಳೆ 7 ವಿಕೆಟ್ಗಳನ್ನು ಕಳೆದುಕೊಂಡಿದೆ.
Ravi Ashwin gets a wicket now.
A great return to the World Cup for Ash – Australia on the floor. 7 wickets down now. pic.twitter.com/BUDvyM50KH
— Mufaddal Vohra (@mufaddal_vohra) October 8, 2023
ಭಾರತದ ಸ್ಪಿನ್ನರ್ಗಳಾದ ರವೀಂದ್ರ ಜಡೇಜಾ 3, ಕುಲ್ದೀಪ್ ಯಾದವ್ 2 ಹಾಗೂ ಆರ್ ಅಶ್ವಿನ್ 1 ವಿಕೆಟ್ ಪಡೆದುಕೊಂಡರೆ, ಮಿಚೆಲ್ ಮಾರ್ಷ್ ವಿಕೆಟ್ ಅನ್ನು ಜಸ್ಪ್ರೀತ್ ಬುಮ್ರಾ ಪಡೆದುಕೊಂಡರು.
ಬ್ಯಾಟಿಂಗ್ನಲ್ಲಿ ಆಸಿಸ್ ಪರ ಡೇವಿಡ್ ವಾರ್ನರ್ 41, ಸ್ಟೀವ್ ಸ್ಮಿತ್ 46, ಲಾಬೂಶೈನ್ 27, ಗ್ಲೆನ್ ಮ್ಯಾಕ್ಸ್ವೆಲ್ 15, ಕ್ಯಾಮರೂನ್ ಗ್ರೀನ್ 8 ರನ್ ಗಳಿಸಿದರೆ, ಮಿಚೆಲ್ ಮಾರ್ಷ್ ಹಾಗೂ ಅಲೆಕ್ಸ್ ಕ್ಯಾರಿ ಶೂನ್ಯ ಸುತ್ತಿದರು.