ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್ 2023ರ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 137 ರನ್‌ಗಳ ಅಂತರದಲ್ಲಿ ಜಯಗಳಿಸಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ 7ನೇ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 365 ರನ್‌ಗಳ ಭಾರೀ ಮೊತ್ತದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 48.2 ಓವರ್‌ಗಳಲ್ಲಿ ಆಲೌಟ್ ಆಯಿತು. ಅಫ್ಘಾನಿಸ್ತಾನ್ ವಿರುದ್ಧ ಗೆಲುವು ಸಾಧಿಸಿದ್ದ ಬಾಂಗ್ಲಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.
ಬಾಂಗ್ಲಾ ಪರ ಆರಂಭಿಕ ಆಟಗಾರ ಲಿಂಟನ್ ದಾಸ್ 76 (66 ಎಸೆತ, 7 ಬೌಂಡರಿ, 2 ಸಿಕ್ಸರ್), ವಿಕೆಟ್ ಕೀಪರ್ ಮುಶ್ಬಿಕರ್ ರಹೀಮ್ (51) ಹಾಗೂ ತೌಹಿದ್ ಹೃದಯೋನ್ (39) ರನ್ ಗಳಿಸಿದ್ದು ಬಿಟ್ಟರೆ ಉಳಿತ ಆಟಗಾರರರಿಂದ ಹೆಚ್ಚು ಪ್ರತಿರೋಧ ಬರಲಿಲ್ಲ.
England step up in Dharamsala to garner their first #CWC23 win ⚡#ENGvBAN 📝: https://t.co/5YbMGSEr8G pic.twitter.com/oL2N4fiViz
— ICC Cricket World Cup (@cricketworldcup) October 10, 2023
ಇಂಗ್ಲೆಂಡ್ ಪರ ರೀಸ್ ಟೋಪ್ಲಿ 43/4, ಕ್ರಿಸ್ ವೋಕ್ಸ್ 49/2 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬಾಂಗ್ಲಾದೆಶ ತಂಡದ ನಾಯಕ ಶಕೀಬ್ ಅಲ್ ಹಸನ್ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕ ಆಟಗಾರ ಡೇವಿಡ್ ಮಲನ್ ಸ್ಪೋಟಕ 140, ಜೋ ರೂಟ್ 82, ಜಾನಿ ಬೈರ್ಸ್ಟೋವ್ 52 ರನ್‌ಗಳ ನೆರವಿನಿಂದ 50 ಓವರ್‌ಗಳಲ್ಲಿ ಆಂಗ್ಲ ಪಡೆ 9 ವಿಕೆಟ್ ನಷ್ಟಕ್ಕೆ 364 ರನ್ ಪೇರಿಸಿತು.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿ ಆಸ್ಟ್ರೇಲಿಯಾ ದಾಖಲೆ ಹಿಂದಿಕ್ಕಿದ ದಕ್ಷಿಣ ಆಫ್ರಿಕಾ
ಡೇವಿಡ್ ಮಲಾನ್ ಸ್ಪೋಟಕ ಆಟ
ಇಂಗ್ಲೆಂಡ್‌ಗೆ ಆರಂಭಿಕರಾದ ಜಾನಿ ಬೈರ್‌ಸ್ಟೋ ಮತ್ತು ಡೇವಿಡ್ ಮಲಾನ್ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಮುರಿಯದ ಮೊದಲ ವಿಕೆಟ್‌ಗೆ 115 ರನ್‌ಗಳನ್ನು ಬಾರಿಸಿದರು. 52 ರನ್ ಗಳಿಸಿದ್ದ ಬೈರ್‌ಸ್ಟೋ ಅವರನ್ನು ಬಾಂಗ್ಲಾ ನಾಯಕ ಹಸನ್ ಪೆವಿಲಿಯನ್‌ಗೆ ಕಳಿಸಿದರು. ನಂತರ ಮಲಾನ್ ಅಬ್ಬರವನ್ನು ತಡೆಯಲು ಸಾಧ್ಯವಾಗಿಲ್ಲ. ಜೋ ರೂಟ್ ಅವರೊಂದಿಗೆ ಬ್ಯಾಟಿಂಗ್ ಮುಂದುವರೆಸಿದ ಮಲಾನ್ ಆಕರ್ಷಕ ಶತಕ ಬಾರಿಸಿದರು. 107 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಅಮೋಘ ಸಿಕ್ಸರ್‌ಗಳು ಸೇರಿದಂತೆ 140 ರನ್ ಗಳಿಸಿ ಮೆಹದಿ ಹಸನ್ ಅವರಿಗೆ ವಿಕೆಟ್ ಒಪ್ಪಿಸಿದರು.
🚨1️⃣4️⃣0️⃣
The highest ODI score EVER on this ground! 👏
A special knock, Mala 🎉 #EnglandCricket | #CWC23 pic.twitter.com/kKqDFGEQsn
— England Cricket (@englandcricket) October 10, 2023
ಜೋ ರೂಟ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇಂಗ್ಲೆಂಡ್ 300ರ ಗಡಿ ದಾಟಲು ಕಾರಣರಾದರು. ರೂಟ್ 68 ಎಸೆತಗಳಿಂದ 8 ಬೌಂಡರಿ 1 ಸಿಕ್ಸರ್ ಸೇರಿ 82 ರನ್ ಪೇರಿಸಿ ಶೋರಿಫುಲ್ ಇಸ್ಲಾಂ ಅವರ ಎಸೆತದಲ್ಲಿ ಔಟಾದರು.
ಬಾಂಗ್ಲಾದೇಶದ ಪರ ಮೆಹದಿ ಹಸನ್ 71/4, ಶೋರಿಫುಲ್ ಇಸ್ಲಾಂ 75/3 ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳಾದರು.