ಮಹಿಷ ದಸರಾ ಆಚರಣೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಆದರೆ, ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದ್ದಾರೆ.
ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆ ಮಾಡಲು ಮಹಿಷ ದಸರಾ ಆಚರಣೆ ಸಮಿತಿ, ದಲಿತ ಸಂಘಟನೆಗಳು ನಿರ್ಧಿಸಿವೆ. ಆದರೆ, ಮಹಿಷ ದಸರಾಗೆ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಿಡಿಸಿದ್ದು, ಅಂದು ಚಾಮುಂಡಿ ಬೆಟ್ಟ ಚಲೋ ನಡೆಸಲು ಮುಂದಾಗಿದ್ದರು. ಆದರೆ, ಪ್ರತಾಪ್ ಸಿಂಹ ನಡೆಯನ್ನು ಮೈಸೂರಿನ ಬಿಜೆಪಿ ಮುಖಂಡರೇ ಖಂಡಿಸಿದ್ದಾರೆ. ಇದೆಲ್ಲದರ ನಡುವೆ, ಎರಡೂ ಕಾರ್ಯಕ್ರಮಗಳಿಗೂ ಪೊಲೀಸರು ಅನುಮತಿ ನಿರಾಕಸಿದ್ದಾರೆ.
ಪೊಲೀಸರ ನಿರ್ಧಾರವನ್ನು ಖಂಡಿಸಿರುವ ಪುರುಷೋತ್ತಮ್, ” ಪೊಲೀಸರು ನಮ್ಮನ್ನು ಕರೆದು ಮಾತನಾಡಬೇಕಿತ್ತು. ಇದೀಗ, ಏಕಾಏಕಿ ಅನುಮತಿ ನಿರಾಕರಿಸಿದ್ದೇವೆ ಎಂದಿದ್ದಾರೆ. ಹತ್ತು ಮಂದಿಗಾದರೂ ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಬೇಕು. ನಾವು ಈ ಹಿಂದೆ ಮಹಿಷ ದಸರಾ ಮಾಡಿದಾಗ ಎಂದಾದರು ಗಲಾಟೆಯಾಗಿತ್ತಾ” ಎಂದು ಪ್ರಶ್ನಿಸಿದ್ದಾರೆ.
“ಲಕ್ಷಾಂತರ ಜನ ಸೇರಿಸಿ ನಡೆಸುವ ರಾಜಕೀಯ ಸಮಾವೇಶಕ್ಕೆ ಪೊಲೀಸ್ ಬಂದೋ ಬಸ್ತ್ ಕೊಡುತ್ತಾರೆ. ಅದೇ ರೀತಿ ನಮ್ಮ ಕಾರ್ಯಕ್ರಮಕ್ಕೂ ರಕ್ಷಣೆ ಕೊಡಿಲಿ. ಸರ್ಕಾರ ಮಹಿಷ ದಸಾರಾ ಮಾಡಬಾರದು ಎಂದು ಹೇಳಿಲ್ಲ. ನಾವು ಮಹಿಷ ದಸರಾ ಆಚರಿಸುತ್ತೇವೆ” ಎಂದು ಹೇಳಿದ್ದಾರೆ.
“ಸಂಸದ ಪ್ರತಾಪ್ ಸಿಂಹ ಅವರು ಆಚರಣೆ ವೇಳೆ ಸಂಘರ್ಷ ಮಾಡುತ್ತೇವೆ ಅಂದಿದ್ದಾರೆ. ಅವರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.