ಇಸ್ರೇಲ್ ಕೆಂಗಣ್ಣಿಗೆ ಗುರಿಯಾದ ‘ಅಲ್‌-ಜಝೀರಾ’ ಸುದ್ದಿ ವಾಹಿನಿ: ಪ್ರಸಾರ ತಡೆಗೆ ಚಿಂತನೆ

Date:

Advertisements

ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷವನ್ನು ನಿರಂತರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುತ್ತಿರುವ ‘ಅಲ್‌-ಜಝೀರಾ’ ಸುದ್ದಿ ವಾಹಿನಿಯ ಪ್ರಸಾರಕ್ಕೆ ತಡೆ ನೀಡಲು ಇಸ್ರೇಲ್ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಆದರೆ ಈ ತೀರ್ಮಾನದ ಬಗ್ಗೆ ಇಸ್ರೇಲ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಅಲ್-ಜಝೀರಾ ಸಹಿತ ಗಾಝಾದ ಅಮಾಯಕ ಜನರ ಮೇಲೆ ಇಸ್ರೇಲ್ ಸುರಿಸುತ್ತಿರುವ ಬಾಂಬ್‌ಗಳ ವಿರುದ್ಧವಾಗಿ ಮಾತನಾಡುತ್ತಿರುವ ಸ್ಥಳೀಯ ಕೆಲವು ಚಾನೆಲ್‌ಗಳ ಪ್ರಸಾರಕ್ಕೂ ತಡೆ ನೀಡಲು ಇಸ್ರೇಲಿನ ಮಾಧ್ಯಮ ಮತ್ತು ಪ್ರಸಾರ ಸಚಿವ ಶ್ಲೋಮೋ ಕರ್ಹಿ ಚಿಂತನೆ ನಡೆಸಿರುವುದಾಗಿ ಇಸ್ರೇಲ್‌ನ ಸ್ಥಳೀಯ ಸುದ್ದಿ ಮೂಲಗಳನ್ನು ಮಾಹಿತಿಗಳನ್ನು ಉಲ್ಲೇಖಿಸಿ ‘ ಮಿಡ್ಲ್ ಈಸ್ಟ್‌ ಐ’ ವರದಿ ಮಾಡಿದೆ.

ಈ ಬಗ್ಗೆ ಚರ್ಚೆ ನಡೆಸಲು ಬುಧವಾರ ಸಂಜೆ ಮಾಧ್ಯಮ ಮತ್ತು ಪ್ರಸಾರ ಸಚಿವ ಶ್ಲೋಮೋ ಕರ್ಹಿ ತುರ್ತು ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ಅಲ್ಲದೇ, ಯುದ್ಧ ಮುಗಿಯುವವರೆಗೆ ಅಲ್ ಜಝೀರಾ ಪ್ರಸಾರವನ್ನು ನಿಷೇಧಿಸುವ ತುರ್ತು ಕಾನೂನನ್ನು ಸಿದ್ಧಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisements

ಕತಾರ್ ಮೂಲದ ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಅಲ್ ಜಝೀರಾ ವಿಶ್ವದ ಹಲವು ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮಂತ ರಾಷ್ಟ್ರವಾದ ಕತಾರ್ ಸರ್ಕಾರವೇ ಹೊತ್ತುಕೊಂಡಿದೆ. ಪ್ಯಾಲೆಸ್ತೀನ್ ಜನರ ಪರ ಧ್ವನಿ ಎತ್ತುತ್ತಿರುವ ಮಾಧ್ಯಮವಾಗಿ ಗುರುತಿಸಿಕೊಂಡಿರುವುದರಿಂದ ‘ಅಲ್-ಜಝೀರಾ’ ಇಸ್ರೇಲ್‌ನ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಕೆಲವೊಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

al jazeera

ಗಾಝಾಕ್ಕೆ ಸಂಪೂರ್ಣ ಮುತ್ತಿಗೆ ಹಾಕುವುದಾಗಿ ಘೋಷಿಸಿದ ಬಳಿಕ ಗಾಝಾದಲ್ಲಿ ಭೂ ಕಾರ್ಯಾಚರಣೆ ನಡೆಸುವ ಸುಳಿವು ನೀಡಿರುವ ಇಸ್ರೇಲ್, ಅಮಾಯಕ ಜನರ ಮಾರಣ ಹೋಮಕ್ಕೆ ಮುಂದಾಗಿದೆ. ಅದು ವಿಶ್ವಕ್ಕೆ ತಿಳಿಯಬಾರದು ಎಂಬ ಕಾರಣಕ್ಕಾಗಿ ಅದು ಅಲ್-ಜಝೀರಾ ಪ್ರಸಾರ ತಡೆಗೆ ಮುಂದಾಗಿದೆ ಎಂದು ಹಲವು ನೆಟ್ಟಿಗರು ಆರೋಪಿಸಿದ್ದಾರೆ.

2022ರ ಮೇನಲ್ಲಿ ಅಲ್-ಜಝೀರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಹತ್ಯೆಯಲ್ಲಿ ಇಸ್ರೇಲ್ ಕೈವಾಡವಿರುವ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪವನ್ನು ಇಸ್ರೇಲ್ ಸೇನೆ ತಳ್ಳಿ ಹಾಕಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಕೆಲವೊಂದು ಸ್ವತಂತ್ರ ಸಂಸ್ಥೆಗಳು, ‘ಇಸ್ರೇಲ್‌ ಸುಳ್ಳು ಹೇಳಿವೆ, ಪತ್ರಕರ್ತೆಯ ಹತ್ಯೆಯಲ್ಲಿ ಪಾತ್ರವಿತ್ತು’ ಎಂದು ಸಾಬೀತುಪಡಿಸಿದ್ದವು.

lal jazeera

ಅಲ್-ಜಝೀರಾ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್

ಕಳೆದ ಶನಿವಾರ ಬೆಳಗ್ಗೆ ಹಮಾಸ್, ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಇಸ್ರೇಲ್ ಯುದ್ಧ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಗಾಝಾಪಟ್ಟಿಗೆ ಪ್ರವೇಶಿಸುವುದಕ್ಕೆ ಹಾಗೂ ತೊರೆಯುವುದಕ್ಕೆ ನಿರ್ಬಂಧ ವಿಧಿಸಿದೆ. ಗಾಝಾಕ್ಕೆ ಸಂಪೂರ್ಣ ಮುತ್ತಿಗೆ ಹಾಕುವುದಾಗಿ ಘೋಷಿಸಿದ ಬಳಿಕ, ನೀರು, ವಿದ್ಯುತ್ ಮತ್ತು ಆಹಾರವನ್ನು ಕಡಿತಗೊಳಿಸಿ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X