ಬೆಂಗಳೂರಿನಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗಲು ಪರದಾಡಿದ್ದು, 20 ನಿಮಿಷ ತಡವಾಗಿ ಇಳಿದಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ವಿಮಾನ ನಿಲ್ದಾಣ ಉದ್ಘಾಟನಯಾದ ಬಳಿಕ ಅಕ್ಟೋಬರ್ 8ರಂದು ಬೆಂಗಳೂರಿನಿಂದ ಬಂದಿದ್ದ ವಿಮಾನವೊಂದು ಲ್ಯಾಂಡ್ ಆಗದೇ ಬೆಂಗಳೂರಿಗೆ ವಾಪಸ್ ಆಗಿತ್ತು. ಬಳಿಕ, ಇಂದು (ಗುರುವಾರ) ಮತ್ತೊಂದು ವಿಮಾನವು ಬೆಂಗಳೂರಿನ ಶಿವಮೊಗ್ಗಗೆ ಬಂದಿದ್ದು, ಹವಮಾನ ವೈಪರಿತ್ಯದಿಂದಾಗಿ 20 ನಿಮಿಷ ತಡವಾಗಿ ಲ್ಯಾಂಡ್ ಆಗಿದೆ.
ಇಂದು ಬೆಳಿಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಟ್ಟಿದ್ದ ವಿಮಾನ ಬೆಳಗ್ಗೆ 11:05 ಗಂಟೆಗೆ ಶಿವಮೊಗ್ಗ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ಅಡೆತಡೆಗಳಿಂದಾಗಿ 20 ನಿಮಿಷ ತಡವಾಗಿ ಇಳಿದಿದೆ.
ಮೋಡ ಕವಿದ ವಾತಾವರಣವಿದ್ದ ಕಾರಣ ವಿಸಿಬಲಿಟಿ ಇಲ್ಲದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಇದೇ ವಿಮಾದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಿವಮೊಗ್ಗಗ್ಗೆ ತೆರಳಿದ್ದಾರೆ.