ಚಿತ್ರದುರ್ಗ | ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಕುಂಚಿಟಿಗರ ಆಗ್ರಹ

Date:

ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಕೈತಪ್ಪಿ ಹೋಗಿದ್ದು, ಕಳೆದ 27 ವರ್ಷಗಳಿಂದ ಕುಂಚಿಟಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ ಎಂದು ಶಿರಾ ಕುಂಚಿಟಿಗರ ಸಂಘದ ಆರ್.ವಿ ಪುಟ್ಟಕಾಮಣ್ಣ ಹೇಳಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬುರಜಿನರೊಪ್ಪ ರಕ್ಷಾಗಣಪತಿ ದೇವಸ್ಥಾನದ ಹತ್ತಿರ ಕುಂಚಿಟಿಗರ ಎರಡನೇ ದಿನದ ಪಾದಯಾತ್ರೆಗೆ ರಾಷ್ಟ್ರೀಯ ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಎಚ್ ಪಿ ಗುರುನಾಥ್ ಚಾಲನೆ ನೀಡಿದ ಬಳಿಕ ಆರ್ ವಿ ಪುಟ್ಟಕಾಮಣ್ಣ ಅವರು ಮಾತನಾಡಿದರು.

“ಕುಂಚಿಟಿಗರು ಮಧ್ಯ ಕರ್ನಾಟಕದ ಬಹುತೇಕ ಹಳ್ಳಿಗಾಡಿನ ಕುಗ್ರಾಮಗಳಲ್ಲಿ ನೆಲೆಸಿ ಕೃಷಿ, ಕೂಲಿ, ಪಶುಸಂಗೋಪನೆ, ಹೈನುಗಾರಿಕೆ ಮಾಡಿಕೊಂಡು ಮಳೆಯಾಶ್ರಿತ ವ್ಯವಸಾಯ ಮಾಡಿಕೊಂಡು ಬುಡಕಟ್ಟು ಸಂಸ್ಕೃತಿಯ ಆಚರಣೆ ಮಾಡುತ್ತಾರೆ” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯಾದ್ಯಂತ ಹರಿದು ಹಂಚಿ ಹೋಗಿರುವ ಕುಂಚಿಟಿಗರು ಪ್ರಾದೇಶಿಕ ಭಾಷೆಗಳ ವ್ಯತ್ಯಾಸ ಮತ್ತು ಸ್ಥಳೀಯ ಪಟ್ಟಭದ್ರರ ಪ್ರಭಾವಕ್ಕೆ ಮಣಿದು ಕುಂಚಿಟಿಗ ಜಾತಿಯ ಜೊತೆಗೆ ಕುಂಚವಕ್ಕಲ್, ಕಮಾಟಿ, ನಾಮದಾರಿ, ಲಿಂಗಾಯಿತ, ಒಕ್ಕಲಿಗ ಅಂತ ಸೇರಿಸಿಕೊಂಡು ಜಾತಿ ಪಟ್ಟಿಯಲ್ಲಿ ಅಸ್ತಿತ್ವದಲ್ಲಿಲ್ಲದ ಹೆಸರಿನಲ್ಲಿ ಜಾತಿ ಸಿಂಧುತ್ವ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಕೆಲ ಪಟ್ಟಭದ್ರರು ಕುಂಚಿಟಿಗ ಜಾತಿಯನ್ನು ಉಪಜಾತಿ ಎಂದು ಕರೆದು ಜೀತಪದ್ದತಿ ಮರು ಸ್ಥಾಪಿಸುವ ಹುನ್ನಾರ ಮಾಡುತ್ತಿದ್ದಾರೆ. ಸ್ವಾಭಿಮಾನಿ ಕುಂಚಿಟಿಗರು ಇದನ್ನು ಸಹಿಸುವುದಿಲ್ಲ” ಎಂದರು.

ಕುಂಚಿಟಿಗರ ರಾಜ್ಯ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿರಮೇಶ್ ಮಾತನಾಡಿ, “ಕುಂಚಿಟಿಗರ ಏಕೀಕರಣ ಮತ್ತು ಧೃವೀಕರಣ ಹೋರಾಟದ ಮುಂದುವರಿದ ಭಾಗವಾಗಿ ಇದೀಗ ಕುಲ ಬೆಡಗುಗಳ ಆಧಾರ ಮತ್ತು “ಮರಳಿ ಬಾ ಕುಂಚಿಟಿಗ” ಜನಾಂದೋಲನ, ಅಂತರಾಜ್ಯ ಕುಂಚಿಟಿಗರ ಭಾವೈಕ್ಯತಾ ಪ್ರವಾಸ, ಕುಲದೈವ ಯಾತ್ರೆ ಕಾರ್ಯಕ್ರಮದಡಿ ಕುಂಚಿಟಿಗರು ಒಂದುಗೂಡುತ್ತಿದ್ಧಾರೆ” ಎಂದು ಹೇಳಿದರು.

“ಕುಂಚಿಟಿಗರು ಶಾಶ್ವತ ನೀರಾವರಿ ಸೌಕರ್ಯವಿಲ್ಲದೆ, ಮಳೆ ನೆರಳಿನ ಬಯಲು ಸೀಮೆಯಲ್ಲಿ ಬಾರದ ಮಳೆ, ಬತ್ತಿದ ಕೆರೆ, ಏರಿದ ಬಡ್ಡಿ, ತೀರದ ಸಾಲ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ನಷ್ಟ, ಬೆಲೆ ಕುಸಿತಗಳಿಂದ ಉತ್ಪಾದನಾ ವೆಚ್ಚ ಕೂಡ ಲಭಿಸದೆ ಕೃಷಿ ಮತ್ತು ಬೆಳೆ ಸಾಲ ತೀರಿಸಲಾಗದೆ ವ್ಯವಸಾಯಕ್ಕೆ ವಿದಾಯ ಹೇಳಿ ನಗರ ಪ್ರದೇಶಗಳಿಗೆ ವಲಸೆ ಹೋಗಿ ಸಣ್ಣ ಪುಟ್ಟ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ” ಎಂದರು.

“ಗ್ರಾಮೀಣ ರೈತಾಪಿ ಮಕ್ಕಳೂ ಕೂಡ ಹಗಲು ರಾತ್ರಿ, ಕಲ್ಲು ಮುಳ್ಳು, ಹಾವು ಚೇಳು ವಿಷ ಜಂತುಗಳ ನಡುವೆ ಜೀವದ ಹಂಗು ತೊರೆದು ವ್ಯವಸಾಯ ಕೆಲಸ ಮಾಡಿಕೊಂಡು, ಸಾರಿಗೆ ಸೌಕರ್ಯವಿಲ್ಲದೆ, ಮೂಲ ಸೌಕರ್ಯವಿಲ್ಲದ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಣ ಪಡೆದು ಕೇಂದ್ರ ಸರ್ಕಾರದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನರಲ್ ಮೆರಿಟ್‌ನಲ್ಲಿ ಸ್ಪರ್ಧೆ ಮಾಡಬೇಕಾಗಿದೆ. ಆದ್ದರಿಂದ ಕುಂಚಿಟಿಗರಿಗೆ
ಗ್ರಾಮೀಣ ಮತ್ತು ನಗರ ತಾರತಮ್ಯ ಮಾಡದೆ ಕೇಂದ್ರ ಒಬಿಸಿ ಮೀಸಲಾತಿ ಕಲ್ಪಿಸಬೇಕು.
ಈಗಾಗಲೆ ಕೇಂದ್ರ ಒಬಿಸಿ ಮೀಸಲಾತಿ ಇಲ್ಲದ ಆರ್ಥಿಕವಾಗಿ ಹಿಂದುಳಿದ ಕುಂಚಿಟಿಗರಿಗೆ ಇಡಬ್ಲ್ಯೂಎಸ್‌ ಮೀಸಲಾತಿ ಇತ್ತೀಚೆಗೆ ಸಿಕ್ಕಿದ್ದು, ಈಗ ಒಕ್ಕಲಿಗರಿಗೆ ಅನುಸರಿಸಿದ ಮಾದರಿಯಲ್ಲಿ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಒಬಿಸಿ ಮೀಸಲಾತಿ ಕಲ್ಪಿಸುವ ಮಾತು ಕೇಳಿಬರುತ್ತಿದೆ. ಯಾವುದೇ ಕಾರಣಕ್ಕೂ ಅಂತಹ ತೀರ್ಮಾನ ಮಾಡಬಾರದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಗದಗ | ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ

ಹಿಂದುಳಿದ ವರ್ಗಗಳ ಪರಮೋಚ್ಚ ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಕುಂಚಿಟಿಗರ ಹಿರಿಯ ಸಂಸದೀಯ ಪಟು ಮುತ್ಸದ್ದಿ ರಾಜಕಾರಣಿ ಟಿ ಬಿ ಜಯಚಂದ್ರ ಅವರು ಯಾವುದೇ ಕಾರಣಕ್ಕೂ ಗ್ರಾಮೀಣ ಮತ್ತು ನಗರ ಕುಂಚಿಟಿಗರೆಂದು ತಾರತಮ್ಯ ಮಾಡದೆ ಸಮಸ್ತ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಕಲ್ಪಿಸಲು ಶಿಫಾರಸು ಮಾಡಬೇಕು” ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಗ್ರಾಮೀಣ ಕುಂಚಿಟಿಗರಿಗೆ ಮಾತ್ರ ಒಬಿಸಿ ಮೀಸಲಾತಿ ಕೊಟ್ಟರೆ ನಗರ ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ಮತ್ತು ಇಡಬ್ಲ್ಯೂಎಸ್‌ ಮೀಸಲಾತಿ ಎರಡೂ ಕೈತಪ್ಪಿ ಹೋಗಿದ್ದು, ಜನರಲ್ ಮೆರಿಟ್‌ನಲ್ಲಿ ಬರುತ್ತಾರೆ. ಮತ್ತೊಮ್ಮೆ ಕುಂಚಿಟಿಗರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯೂರು ತಾಲೂಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿರಂಗನಾಥ್, ಕುಬೇರಪ್ಪ, ಶಶಿಕಲಾ, ಜಯಪ್ರಕಾಶ, ಚಂದ್ರಗಿರಿ, ಅವಿನಾಶ್, ಡಿ.ಹನುಮಂತರಾಯ, ಪವನ್, ವಿಶ್ವನಾಥ ಸೇರಿದಂತೆ ಇತರರು ಇದ್ಧರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...