ಹುಬ್ಬಳ್ಳಿಯ ಭುವನೇಶ್ವರಿ ನಗರದಲ್ಲಿ ದಲಿತರು ವಾಸಿಸುವ ಪ್ರದೇಶದಲ್ಲಿ ಉಡುಪಿಯ ಪೇಜಾವರ ಮಠದ ಮುಖ್ಯಸ್ಥ ವಿಶ್ವಪ್ರಸನ್ನತೀರ್ಥ ಅವರು ಪಾದಯಾತ್ರೆ ನಡೆಸಿದ್ದಾರೆ. ವಿಶ್ವ ಹಿಂದು ಪರಿಷತ್ ಮುಖಂಡ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಭೇಟಿ ನೀಡಿದ್ದಾರೆ.
ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ವಿಶ್ವಪ್ರಸನ್ನತೀರ್ಥ ಅವರು, “ನಾವು ಸನಾತನ ಧರ್ಮೀಯರು. ನಮ್ಮ ಆದರ್ಶ ಪುರುಷ ರಾಮ. ಸತತ ಹೋರಾಟದ ಫಲವಾಗಿ ರಾಮಮಂದಿನ ನಿರ್ಮಾಣವಾಗುತ್ತಿದೆ. ಸುಖ, ಸಂತೋಷಕ್ಕೆ ರಾಮನ ಆರಾಧನೆ ಮಾಡೋಣ” ಎಂದು ಹೇಳಿದ್ದಾರೆ.
“ಅಯೋಧ್ಯೆ ರಾಮಮಂದಿರದಲ್ಲಿ ಇತರ ದೇವಸ್ಥಾನಗಳಂತೆ ಸೇವೆಯ ಪಟ್ಟಿ ಇರುವುದಿಲ್ಲ. ಭಕ್ತರೂ ತಮ್ಮ ಇಷ್ಟಾನುಸಾರ ಕಾಣಿಕೆಗಳನ್ನು ಕಾಣಿಕೆ ಡಬ್ಬಿಗೆ ಹಾಕಬಹುದು” ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ದಲಿತರ ಓಲೈಕೆಗೆ ಮುಂದಾಗಿದೆ. ಅದೇ ಉದ್ದೇಶದಿಂದ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಿ ಪೇಜಾವರರು ದಲಿತರ ವಸತಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.