ಮೆಕ್ಸಿಕೊದಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್‌ ದೀಪಕ್ ಬಾಕ್ಸರ್ ಬಂಧನ

Date:

Advertisements
  • ಮೆಕ್ಸಿಕೊದಿಂದ ಇಸ್ತಾಂಬುಲ್ ಮೂಲಕ ದೀಪಕ್ ಬಾಕ್ಸರ್ ದೆಹಲಿಗೆ
  • ದೀಪಕ್ ಹುಡುಕಿಕೊಟ್ಟವರಿಗೆ ₹3 ಲಕ್ಷ ಘೋಷಿಸಿದ್ದ ಪೊಲೀಸ್

ಕುಖ್ಯಾತ ಹಾಗೂ ಪೊಲೀಸರಿಗೆ ಬೇಕಾಗಿದ್ದ ಗ್ಯಾಂಗ್‌ಸ್ಟರ್‌ ದೀಪಕ್ ಬಾಕ್ಸರ್‌ನನ್ನು ಮೆಕ್ಸಿಕೊದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬುಧವಾರ (ಏಪ್ರಿಲ್ 5) ದೆಹಲಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸಹಾಯದಿಂದ ಇಬ್ಬರು ಸದಸ್ಯರ ದೆಹಲಿ ಪೊಲೀಸರ ವಿಶೇಷ ತಂಡ ದೀಪಕ್‌ನನ್ನು ಮೆಕ್ಸಿಕೊದಲ್ಲಿ ಬಂಧಿಸಿದೆ.

ಬಳಿಕ ಆತನನ್ನು ಬುಧವಾರ ಬೆಳಿಗ್ಗೆ ಮೆಕ್ಸಿಕೊದಿಂದ ಇಸ್ತಾಂಬುಲ್ ಮೂಲಕ ಬೆಳಿಗ್ಗೆ 6 ಗಂಟೆ ಹೊತ್ತಿಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು ಎಂದು ಪೊಲೀಸರು ಹೇಳಿದರು.

Advertisements

ಉತ್ತರ ದೆಹಲಿಯಲ್ಲಿ ಉದ್ಯಮಿಯೊಬ್ಬರ ಹತ್ಯೆ ಆರೋಪ ಹಾಗೂ ಆತನ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿ ಪೊಲೀಸರು ಆತನನ್ನು ವಿಚಾರಣೆ ನಡೆಸಿದರು.

ದೀಪಕ್ ಬಾಕ್ಸರ್ ಬಂಧನಕ್ಕಾಗಿ ಎಫ್‌ಬಿಐ ಸೇರಿದಂತೆ ಮೆಕ್ಸಿಕೊದ ಪೊಲೀಸರು ನಮಗೆ ಸಹಾಯ ಮಾಡಿದ್ದಾರೆ ಎಂದು ವಿಶೇಷ ಪೊಲೀಸ್ ಆಯುಕ್ತ (ಸಿಪಿ) ಧಲಿವಾಲ್ ಅವರು ಕಾರ್ಯಾಚರಣೆ ಕುರಿತು ಮಾಹಿತಿ ಹಂಚಿಕೊಂಡರು.

“ದೆಹಲಿ – ಎನ್‌ಸಿಆರ್‌ ವ್ಯಾಪ್ತಿಯಲ್ಲಿ ದೀಪಕ್ ಬಾಕ್ಸರ್ ಕುಖ್ಯಾತ ಗ್ಯಾಂಗ್‌ಸ್ಟರ್ ಆಗಿ ಹೆಸರು ಮಾಡಿದ್ದಾನೆ. ಆತನಿಗಾಗಿ ದೆಹಲಿಯ ವಿಶೇಷ ತಂಡ ಹಲವು ತಿಂಗಳಿಂದ ಹುಡುಕಾಟ ನಡೆಸಿತ್ತು” ಎಂದು ಧಲಿವಾಲ್ ಮಾಹಿತಿ ನೀಡಿದರು.

ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತನಾಗಿದ್ದ ಗ್ಯಾಂಗ್‌ಸ್ಟರ್‌ ದೀಪಕ್‌ ಮೆಕ್ಸಿಕೊ ಮೂಲಕ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದನು.

ಸಿಕ್ಕಿಬೀಳುವ ಮೊದಲು ಅಲ್ಲಿಂದ ದೆಹಲಿ ಮತ್ತು ನೆರೆಯ ರಾಜ್ಯಗಳಲ್ಲಿ ತನ್ನ ಸಂಘಟಿತ ಅಪರಾಧ ತಂಡವನ್ನು ಮುನ್ನಡೆಸಲು ಯೋಜಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಪೊಲೀಸರು ಭಾರತದ ಹೊರಗೆ ಗ್ಯಾಂಗ್‌ಸ್ಟರ್‌ನನ್ನು ಬಂಧಿಸಿರುವುದು ಇದೇ ಮೊದಲು. ದೀಪಕ್‌ನನ್ನು ಹುಡುಕಿಕೊಟ್ಟವರಿಗೆ ಪೊಲೀಸರು ₹3 ಲಕ್ಷ ಬಹುಮಾನ ಘೋಷಿಸಿದ್ದರು.

ಈ ಸುದ್ದಿ ಓದಿದ್ದೀರಾ? ಎನ್‌ಸಿಇಆರ್‌ಟಿ ಪರಿಷ್ಕೃತ ಪಠ್ಯ | ಮೊಘಲರು, ಜಾತಿ ವ್ಯವಸ್ಥೆ ಮುಂತಾದ ಐತಿಹಾಸಿಕ ಸಂಗತಿಗಳು ಕಡಿತ

2021ರಲ್ಲಿ ಜಿತೇಂದ್ರ ಗೋಗಿ ಹತ್ಯೆಯ ನಂತರ, ದೀಪಕ್, ‘ಗೋಗಿ ಗ್ಯಾಂಗ್’ ಅನ್ನು ಪ್ರಾರಂಭಿಸಿದ್ದ. ರೋಹಿಣಿ ನ್ಯಾಯಾಲಯದ ಆವರಣದಲ್ಲಿ ಜಿತೇಂದ್ರ ಗೋಗಿ ಅವರನ್ನು ಹತ್ಯೆ ಮಾಡಲಾಗಿತ್ತು.

ಕಳೆದ ಐದು ವರ್ಷಗಳಲ್ಲಿ ಕೊಲೆ ಮತ್ತು ಸುಲಿಗೆ ಸೇರಿದಂತೆ 10 ಪ್ರಮುಖ ಗಂಭೀರ ಪ್ರಕರಣಗಳಲ್ಲಿ ಗ್ಯಾಂಗ್‌ಸ್ಟರ್‌ ದೀಪಕ್‌ ಬಾಕ್ಸರ್‌ ಭಾರತಕ್ಕೆ ಬೇಕಾಗಿದ್ದಾನೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಬಿಐ ಅಧಿಕಾರಿಗಳಂತೆ ನಟಿಸಿ 2.3 ಕೋಟಿ ರೂ. ದೋಚಿದ್ದ ಗ್ಯಾಂಗ್: ಇಬ್ಬರ ಬಂಧನ

ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳಂತೆ ನಟಿಸಿ ಉದ್ಯಮಿಯೊಬ್ಬರ ಕಚೇರಿಯಿಂದ ಗ್ಯಾಂಗ್...

ಬೀದಿ ನಾಯಿಗಳಿಗೆ ಲಸಿಕೆ ಹಾಕಿದ ನಂತರ ಅದೇ ಸ್ಥಳಕ್ಕೆ ತಂದು ಬಿಡಬೇಕು: ಸುಪ್ರೀಂ ಕೋರ್ಟ್‌

ಬೀದಿ ನಾಯಿಗಳಿಗೆ ಸಂಬಂಧಿಸಿದ್ದಂತೆ ಆಗಸ್ಟ್ 11ರ ಆದೇಶವನ್ನು ಮಾರ್ಪಡಿಸಿದ ಸುಪ್ರೀಂ...

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X