ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್ ಹೊಸ ಫೀಚರ್ ಪ್ರಕಟಿಸಲು ಮುಂದಾಗುತ್ತಿದೆ. ಇನ್ನು ಮುಂದೆ ವಾಟ್ಸಪ್‌ನಲ್ಲಿ ಏಕಕಾಲದಲ್ಲಿ ಎರಡು ಮೊಬೈಲ್ ನಂಬರ್‌ಗಳ ಅಕೌಂಟ್ ಬಳಸಿ ಸಂಹವನ ನಡೆಸಬಹುದು.
ಈ ಮೊದಲು ಎರಡು ನಂಬರ್ ಅಕೌಂಟ್ ಬಳಸಬೇಕಾದರೆ ಎರಡು ಮೊಬೈಲ್‌ಗಳನ್ನು ಇಟ್ಟುಕೊಳ್ಳಬೇಕಿತ್ತು ಅಥವಾ ಇನ್ನೊಂದು ನಂಬರ್‌ಗೆ ಲಾಗೌಟ್ ಮಾಡಿ ಬದಲಿಸಿಕೊಳ್ಳಬೇಕಿತ್ತು. ಈ ರೀತಿ ಮಾಡಿದರೆ ಮೊದಲು ಬಳಸುವ ಹಾಲಿ ನಂಬರ್‌ನ ಅಕೌಂಟ್ ಸಂಪರ್ಕ ಕೈತಪ್ಪುತ್ತಿತ್ತು. ಇನ್ನು ಮುಂದೆ ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸಾಪ್ ನಂಬರ್ ಇಟ್ಟುಕೊಂಡು ಏಕಕಾಲದಲ್ಲಿ ಬಳಸಲು ಸಾಧ್ಯವಾಗುತ್ತದೆ.
ಈ ಹೊಸ ವೈಶಿಷ್ಟ್ಯವುಳ್ಳ ಫೀಚರ್ ಪರಿಚಯಿಸುವುದಾಗಿ ಸ್ವತಃ ಮೆಟಾ ಸಿಇಓ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ. ಜುಕರ್‌ಬರ್ಗ್ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ವಾಟ್ಸಾಪ್‌ನಲ್ಲಿ ಎರಡು ಅಕೌಂಟ್‌ಗಳ ನಡುವೆ ಬದಲಾಯಿಸಿಕೊಳ್ಳಿ. ಶೀಘ್ರದಲ್ಲೇ ನೀವು ಅಪ್ಲಿಕೇಶನ್‌ನಲ್ಲಿ ಒಂದು ಫೋನ್‌ನಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಹೊಂದಲು ಸಾಧ್ಯವಾಗುತ್ತದೆ” ಎಂದು ತಿಳಿಸಿದ್ದಾರೆ.
ಈ ವಿನೂತನ ಆಯ್ಕೆಯಿಂದ ಒಂದು ಮೊಬೈಲ್‌ನಲ್ಲಿ ಎರಡು ಸಿಮ್ ಹೊಂದಿರುವ ಸ್ಮಾರ್ಟ್ ಫೋನ್ ಬಳಕೆದಾರರು ಇನ್ನೊಂದು ವಾಟ್ಸಾಪ್ ಅಕೌಂಟ್ ಬಳಕೆಗೆ ಬೇರೆ ಪೋನ್ ಬಳಸುವ ಅಗತ್ಯವಿರುವುದಿಲ್ಲ.
https://www.facebook.com/zuck/posts/10115317875092321?ref=embed_post
ಎರಡು ಅಕೌಂಟ್ ಬಳಸುವುದು ಹೇಗೆ?
ವಾಟ್ಸಾಪ್‌ನಲ್ಲಿ ಏಕಕಾಲದಲ್ಲಿ ಎರಡು ಅಕೌಂಟ್‌ಗಳ ನಂಬರ್‌ಗಳನ್ನು ಹೊಂದುವುದು ಸರಳ ಪ್ರಕ್ರಿಯೆಯಾಗಿದೆ.
ಮೊದಲಿಗೆ, ‘ಸೆಟ್ಟಿಂಗ್ಸ್’ಗೆ ಹೋಗಬೇಕು. ‘ಸೆಟ್ಟಿಂಗ್‌ಗಳು’ ಅಡಿಯಲ್ಲಿ, ನಿಮ್ಮ ಹೆಸರಿನ ಮುಂದೆ ಸಣ್ಣ ಬಾಣದ ಗುರುತಿರುತ್ತದೆ. ಅದನ್ನು ಸ್ಪರ್ಶಿಸಿದರೆ ‘Add Account’ ಆಯ್ಕೆ ಬರುತ್ತದೆ. ನಂತರ, ‘Add Account’ ನಲ್ಲಿ ನಿಮ್ಮ ಫೋನ್ ನಂಬರ್ ನಮೂದಿಸಿದರೆ ವೆರಿಫೈ ಕೋಡ್ ನಿಮ್ಮ ಸಂಖ್ಯೆಗೆ ಬರುತ್ತದೆ. ಅದನ್ನು ನಮೂದಿಸಿದ ನಂತರ ಎರಡೂ ನಂಬರ್ ಚಾಲ್ತಿಗೊಳ್ಳುತ್ತದೆ.
ಈ ಸುದ್ದಿ ಓದಿದ್ದೀರಾ? ಅನ್‌ವೆರಿಫೈಡ್ ಟ್ವಿಟರ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಪೋಸ್ಟ್, ಲೈಕ್, ರೀಟ್ವಿಟ್ಗೂ ಇನ್ಮುಂದೆ ಹಣ ಪಾವತಿಸಬೇಕು !
ಎರಡೂ ನಂಬರ್‌ಗಳಲ್ಲಿ ನಿಮಗೆ ಬೇಕಾದ ನಂಬರ್ ಅಕೌಂಟ್ ಆಯ್ಕೆ ಮಾಡಿಕೊಳ್ಳಲು ಕೆಳಗೆ ಎರಡು ನಂಬರ್‌ಗಳ ಆಯ್ಕೆಯಿರುತ್ತದೆ. ನಿಮಗೆ ಬೇಕಾದಾಗ ಯಾವುದು ಬೇಕೋ ಅದನ್ನು ಬಳಸಬಹುದು. ಈ ರೀತಿಯ ಸೌಲಭ್ಯ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಈಗಾಗಲೇ ಲಭ್ಯವಿದೆ.
ಮತ್ತೊಂದು ಸೂಚನೆಯಂದರೆ ಈ ನೂತನ ಸೌಲಭ್ಯವು ಕೆಲವು ದಿನಗಳಲ್ಲಿ ಸೇರ್ಪಡೆಯಾಗಲಿದೆ. ಅಪ್‌ಡೇಟ್ ಮೂಲಕ ಹೊಸ ಸೌಲಭ್ಯ ಪಡೆದುಕೊಳ್ಳಬಹುದು.
Give me a chance