ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಅವರ ಬ್ಯಾಟಿಂಗ್ ಅಬ್ಬರದೊಂದಿಗೆ ಐಸಿಸಿ ಏಕದಿನ ವಿಶ್ವಕಪ್ 2023ರ 18ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ತಂಡವನ್ನು 62 ರನ್ಗಳಿಂದ ಸೋಲಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.
ಉದ್ಯಾನ ನಗರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 368 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ಅಂತಿಮ15 ಓವರ್ಗಳಲ್ಲಿ ಕುಸಿತ ಕಂಡು 45.3 ಓವರ್ಗಳಲ್ಲಿ 305 ರನ್ಗಳಿಗೆ ಆಲೌಟ್ ಆಗಿ ಸೋಲಿಗೆ ಶರಣಾಯಿತು.
ಕೊನೆಯ ಬೌಲರ್ಗಳನ್ನು ಹೊರತುಪಡಿಸಿದರೆ ಮಧ್ಯಮ ಕ್ರಮಾಂಕದವರೆಗೂ ಎಲ್ಲ ಬ್ಯಾಟ್ಸಮನ್ಗಳು ಗುರಿಯನ್ನು ತಲುಪಲು ಸಾಕಷ್ಟು ಪ್ರಯತ್ನ ಮಾಡಿದರು.
ಅಬ್ದುಲ್ಲಾ ಶಫೀಕ್ (64) ,ಇಮಾಮ್-ಉಲ್-ಹಕ್(70) ,ಮೊಹಮ್ಮದ್ ರಿಜ್ವಾನ್(46),ಸೌದ್ ಶಕೀಲ್(30),ಇಫ್ತಿಕರ್ ಅಹಮದ್(26) ಅವರ ಹೋರಾಟ ಪಾಕಿಸ್ತಾನಕ್ಕೆ ಗೆಲುವಿನ ಭರವಸೆ ನೀಡಿತ್ತು. ಇಫ್ತಿಕರ್ ಅಹಮದ್, ಝಂಪಾ ಬೌಲಿಂಗ್ನಲ್ಲಿ ಔಟಾದ ನಂತರ ಪಂದ್ಯದ ಗತಿ ಬದಲಾಯಿತು.
53/4 ವಿಕೆಟ್ ಪಡೆದ ಆಡಂ ಝಂಪಾ, ಮಾರ್ಕಸ್ ಸ್ಟೊಯಿನಿಸ್ 40/2 ಹಾಗೂ ಪ್ಯಾಟ್ ಕಮ್ಮಿನ್ಸ್ 62/2 ವಿಕೆಟ್ ಪಡೆದು ಪಾಕಿಸ್ತಾನದ ಪತನಕ್ಕೆ ಕಾರಣರಾದರು.
ಈ ಸುದ್ದಿ ಓದಿದ್ದೀರಾ? ಭಾರತ ಗೆಲ್ಲಲು ಬೇಕಿದ್ದು 26, ಕೊಹ್ಲಿ ಶತಕಕ್ಕೂ ಬೇಕಿತ್ತು 26: ಸತ್ಯ ಬಿಚ್ಚಿಟ್ಟ ಕೆ ಎಲ್ ರಾಹುಲ್
ಬ್ಯಾಟ್ಸ್ಮನ್ಗಳ ಸ್ವರ್ಗವೆಂದೇ ಕರೆಸಿಕೊಳ್ಳುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರನ್ಗಳ ಮಳೆ ಹರಿಯಿತು. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಪಾಕಿಸ್ತಾನ ಬೌಲರ್ಗಳಿಗೆ ನೀರಿಳಿಸಿದರು.
An explosive partnership of 259 runs between David Warner and Mitchell Marsh was Australia's highest-ever ICC Men's Cricket World Cup stand for the first wicket 💪#CWC23 | #AUSvPAK pic.twitter.com/OjkFdEXzlp
— ICC Cricket World Cup (@cricketworldcup) October 20, 2023
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾಕ್ಕೆ ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ಮತ್ತು ಮಾರ್ಷ್ ದಾಖಲೆಗಳ ಶತಕ ಸಿಡಿಸಿದರು. ಇವರ ವಿಶ್ವದಾಖಲೆಯ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ಗಳ ಬೃಹತ್ ಮೊತ್ತ ಪೇರಿಸಿತು.
10 ರನ್ ಗಳಿಸಿದ್ದಾಗ ಜೀವದಾನ ಪಡೆದ ವಾರ್ನರ್ ಮಿಚೆಲ್ ಮಾರ್ಷ್ ಜೊತೆ ಸೇರಿ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಕೇವಲ 85 ಎಸೆತಗಳಲ್ಲಿ ಶತಕ ಸಿಡಿಸಿದರು. ಏಕದಿನ ಕ್ರಿಕೆಟ್ನಲ್ಲಿ 21ನೇ ಶತಕ ಹಾಗೂ ವಿಶ್ವಕಪ್ನಲ್ಲಿ 5ನೇ ಶತಕ ಸಿಡಿಸಿ ರಿಕಿ ಪಾಂಟಿಂಗ್ ದಾಖಲೆ ಮುರಿದರು.
ಅಂತಿಮವಾಗಿ ವಾರ್ನರ್, 124 ಎಸೆತಗಳಲ್ಲಿ 14 ಬೌಂಡರಿ, 9 ಸಿಕ್ಸರ್ ಸಹಿತ 163 ರನ್ ಗಳಿಸಿ ಹ್ಯಾರಿಸ್ ರೌಫ್ಗೆ ವಿಕೆಟ್ ಒಪ್ಪಿಸಿದರು.
ವಾರ್ನರ್ಗೆ ಅದ್ಭುತವಾಗಿ ಜೊತೆ ನೀಡಿದ ಮಿಚೆಲ್ ಮಾರ್ಷ್ ಕೂಡ ಅತಿ ಕಡಿಮೆ ಎಸೆತಗಳಲ್ಲಿ 100 ದಾಟಿದರು. ಪಾಕ್ ಬೌಲರ್ಗಳಿಗೆ ಬೆಂಡೆತ್ತಿದ ಮಾರ್ಷ್, ಏಕದಿನ ಕ್ರಿಕೆಟ್ನಲ್ಲಿ ತಮ್ಮ 2ನೇ ಏಕದಿನ ಶತಕ ಸಿಡಿಸಿ ಮಿಂಚಿದರು. ತಮ್ಮ 32ನೇ ಜನ್ಮ ದಿನವೇ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 108 ಎಸೆತಗಳಲ್ಲಿ 10 ಬೌಂಡರಿ, 9 ಸಿಕ್ಸರ್ಗಳ ಸಹಿತ 121 ರನ್ ಬಾರಿಸಿ ಶಾಹೀನ್ ಬೌಲಿಂಗ್ನಲ್ಲಿ ಔಟಾದರು.
ಈ ಜೋಡಿ ಮೊದಲ ವಿಕೆಟ್ಗೆ 203 ಎಸೆತಗಳಲ್ಲಿ 259 ರನ್ ಗಳಿಸಿತು. ಇದು ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಪರ ಮೊದಲ ವಿಕೆಟ್ಗೆ ದಾಖಲಾದ ಅಧಿಕ ರನ್ಗಳ ಆರಂಭಿಕ ಜೊತೆಯಾಟವಾಗಿದೆ.
ಇವರಿಬ್ಬರು ಔಟಾದ ನಂತರ ಆಸ್ಟ್ರೇಲಿಯಾ ಕುಸಿತ ಕಂಡಿತು. ಉಳಿದ ಆಟಗಾರರಿಂದ ಬಂದಿದ್ದು 58 ರನ್ಗಳು ಮಾತ್ರ. ಅಂತಿಮವಾಗಿ ಆಸೀಸ್ ಪಡೆ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು.
ಪಾಕ್ ಪರ ಶಾಹೀನ್ ಶಾ ಆಫ್ರಿದಿ 54/5 ಹಾಗೂ ಹಾರಿಸ್ ರೌಫ್ 83/3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ಗಳೆನಿಸಿದರು.