ಯಾದಗಿರಿ | ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ

Date:

Advertisements

ಕಿತ್ತೂರಿನ ವೀರರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರಾಗಿದ್ದಾರೆ. ಚೆನ್ನಮ್ಮ ಅವರ ಶೌರ್ಯ ಪರಾಕ್ರಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅತ್ಯವಶ್ಯಕವಾಗಿದೆ ಎಂದು ಹುಣಸಗಿ ತಹಶೀಲ್ದಾರ್ ಬಸಲಿಂಗಪ್ಪ ನೈಕೋಡಿ ಹೇಳಿದರು.‌

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

“ಚನ್ನಮ್ಮಾಜಿ 1778ರ ಅಕ್ಟೋಬರ್ 23ರಂದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಲಿಂಗಾಯತ ಸಮುದಾಯದಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಕೌಟುಂಬಿಕ ಸಂಪ್ರದಾಯದಂತೆ ಕತ್ತಿವರಸೆ, ಬಿಲ್ಲುಗಾರಿಕೆ ಮತ್ತು ಕುದುರೆ ಸವಾರಿಯಲ್ಲಿ ತರಬೇತಿ ಪಡೆದಿದ್ದರು” ಎಂದು ತಿಳಿಸಿದರು.

Advertisements

“ಕಿತ್ತೂರು ಚೆನ್ನಮ್ಮ ತನ್ನ 15ನೇ ವಯಸ್ಸಿನಲ್ಲೇ ರಾಜಾ ಮಲ್ಲಸರ್ಜ ಎಂಬ ದೇಸಾಯಿ ಮನೆತನದವರನ್ನು ವಿವಾಹವಾದರು. ನಂತರ ಕಿತ್ತೂರಿನ ರಾಣಿ (ರಾಣಿ) ಕಿತ್ತೂರು ರಾಣಿ ಚನ್ನಮ್ಮ ಎಂಬ ಕರೆಯಲ್ಪಡುವ ಅವರು ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಆಡಳಿತಗಾರರಲ್ಲಿ ಒಬ್ಬರೆಂದು ಪ್ರಶಂಸಿಸಲ್ಪಟ್ಟಿರುವ ಚನ್ನಮ್ಮಾಜಿ ಅವರ ಶೌರ್ಯ ಪರಾಕ್ರಮಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅತ್ಯವಶ್ಯಕವಾಗಿದೆ” ಎಂದು ಹೇಳಿದರು.

ತಾಳಿಕೋಟಿ ನಿವೃತ್ತ ಉಪನ್ಯಾಸ ಮಲ್ಲಿಕಾರ್ಜುನ ಹಿರೇಮಠ ಅವರು ಮಾತನಾಡಿ, “ಮೊದಲ ಯುದ್ಧದಲ್ಲಿ ಸೋತ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1824ರ ದಂಗೆಗೆ ಪ್ರಸಿದ್ಧರಾದ ಕಿತ್ತೂರಿನ ಚನ್ನಮ್ಮಾಜಿ ಸಾಧನೆಯು ಅವಳನ್ನು ಕರ್ನಾಟಕ ಸಂಸ್ಕೃತಿಯಲ್ಲಿ ಜಾನಪದ ನಾಯಕಿಯಾಗಿ ಮತ್ತು ಸ್ವಾತಂತ್ರ್ಯ ಚಳವಳಿಯ ಪ್ರಧಾನ ಸಂಕೇತವಾಗಿ ಪರಿವರ್ತಿಸಿತು. ಅಲ್ಲದೇ ಚನ್ನಮ್ಮಳು ನಮ್ಮಲ್ಲಿನ ಒಳಸಂಚಿನಿಂದ ಬ್ರಿಟಿಷರ ಕೈ ವಶವಾದಳು” ಎಂದರು.

“ಚನ್ನಮ್ಮಾಜಿಯನ್ನು ಸೆರೆವಾಸದಿಂದ ಬಿಡಿಸಲು ಸಾಕಷ್ಟು ವೀರಯೋಧರು ಪಣತೊಟ್ಟರು. ಬಹುತೇಕ ವೀರರು ತಮ್ಮ ಪ್ರಾಣವನ್ನೇ ಬಲಿದಾನ ಮಾಡುವುದರ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅಂತಹ ಮಹಾನ್ ಪುರುಷರ ಸಾಲಿನಲ್ಲಿ ನಮ್ಮ ವೀರರಾಣಿ ಕಿತ್ತೂರಿನ ಚನ್ನಮ್ಮ ಕೂಡಾ ಒಬ್ಬರು. ಅವರ ಹೋರಾಟದ ಫಲವಾಗಿಯೂ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಹಾಗಾಗಿ ಅವರ ಈ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ” ಎಂದು ಸ್ಮರಿಸಿದರು.

“ಸ್ವಾತಂತ್ರ್ಯದ ಕಿಚ್ವಿನ ಬಗ್ಗೆ ಮತ್ತು ನಮ್ಮ ನಾಡಿನ ಸಂಸ್ಕೃತಿಯ ಬಗ್ಗೆ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿಸುವ ಕಾರ್ಯವಾಗಬೇಕು” ಎಂದು ಹೇಳಿದರು.

ಪಟ್ಟಣದಲ್ಲಿ ಅದ್ಧೂರಿಯಾಗಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ ಅವರ 200ನೇ ಜಯಂತಿಯನ್ನು ತಾಲೂಕು ಆಡಳಿತ ಹಾಗೂ ಪಟ್ಟಣದ ವೀರಶೈವ ಲಿಂಗಾಯತ ಸಮಾಜದಿಂದ ಅದ್ಧೂರಿಯಾಗಿ ಆಚರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಚನ್ನಮ್ಮಾಜಿ ವೃತ್ತ, ಬಸ್ ನಿಲ್ದಾಣ, ಮುಖ್ಯ ಬೀದಿ, ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿವರೆಗೆ ತೆರೆದ ವಾಹನದಲ್ಲಿ ಚನ್ನಮ್ಮಾಜಿ ಅವರ ಭಾವಚಿತ್ರದೊಂದಿಗೆ ಕುದುರೆ ಕುಣಿತ, ತಮಟೆಯೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.

ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ನೂತನ ಜಿಲ್ಲೆಗೆ ರಾಣಿ ಚೆನ್ನಮ್ಮನ ಹೆಸರಿಡಲು ಒತ್ತಾಯ

‌ಉಪನೊಂದಣಾಧಿಕಾರಿ ಸಿಪಿಐ ಸಚಿನ್ ಚಲವಾದಿ ಹಾಗೂ ಕಿಶನ ಚವ್ಹಾಣ, ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳಾದ ಸಿದ್ದಣ್ಣ ಮಲಗಲದಿನ್ನಿ, ಬಸವರಾಜ ಮಲಗಲದಿನ್ನಿ, ಶರಣು ದಂಡಿನ, ಚಂದ್ರಶೇಖರ ದಂಡಿನ, ಸಿದ್ರಾಮಪ್ಪ ಮುದಗಲ್, ಬಸವರಾಜ ಮೇಲಿನಮನಿ, ವಿರೇಶ ಬಿ ಚಿಂಚೋಳಿ, ಹೊನ್ನಕೇಶವ ದೇಸಾಯಿ, ರವಿ ಮಲಗಲದಿನ್ನಿ, ಅಮೃತ ದೇಸಾಯಿ, ಅಮರನಾಥ ದೇಸಾಯಿ, ವಿರೇಶ, ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಕಿತ್ತೂರು ರಾಣಿ ಚನ್ನಮ್ಮಳ ಅಭಿಮಾನಿಗಳು ಮತ್ತು ಇತರರು ಇದ್ದರು.

ಸಿಟಿಜನ್ ಜರ್ನಲಿಸ್ಟ್ ಬಾಪೂಗೌಡ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X