ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನ ನಡುವಿನ ಪಾಕ್ ತಂಡ ಹೀನಾಯ ಸೋಲು ಕಂಡಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಎರಡು ಗೆಲುವುಗಳನ್ನು ಕಂಡಿದ್ದ ಪಾಕ್ ತಂಡ, ಬಳಿಕ ಸತತ ಮೂರು ಸೋಲುಗಳನ್ನು ಕಂಡಿದೆ. ಪಾಕ್ ತಂಡ ಆಡಿದ ಮೊದಲ ಪಂದ್ಯದಲ್ಲಿ ನೆದರ್‌ಲೆಂಡ್ ಮತ್ತು ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತ್ತು. ಆ ಬಳಿಕ, ಭಾರತ ಮತ್ತು ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ಸೋಲುಂಡಿತ್ತು. ಇದೀಗ, ಅಫ್ಘಾನ್ ವಿರುದ್ಧವೂ ಸೋತಿದೆ.
ಆ ಮೂಲಕ ಅಂಕ ಪಟ್ಟಿಯಲ್ಲಿ 4 ಅಂಕ ಗಳೊಂದಿಗೆ 5ನೇ ಸ್ಥಾನದಲ್ಲಿದೆ. ರನ್ ರೇಟ್ ಆಧಾರದಲ್ಲಿ 5ನೇ ಸ್ಥಾನದಲ್ಲಿ ಉಳಿದಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 283 ರನ್‌ಗಳನ್ನು ಕಲೆ ಹಾಕಿತ್ತು. ನಿರಾಯಾಸವಾಗಿ ರನ್‌ಗಳ ಬೆನ್ನತ್ತಿದ ಅಫ್ಘಾನ್ ತಂಡ 49 ಓವರ್‌ಗಳಲ್ಲಿ 286 ರನ್‌ಗಳನ್ನು ಕಲೆ ಹಾಕಿ8 ವಿಕೆಟ್‌ಗಳೊಂದಿಗೆ ಗೆಲುವು ಸಾಧಿಸಿದೆ.
ಅಫ್ಘಾನ್ ತಂಡ ಓಪನರ್ ಬ್ಯಾಟ್ಸ್‌ಮನ್ ರಹ್ಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಜೊತೆಯಾಟದಲ್ಲಿ 130 ರನ್‌ಗಳನ್ನು ಕಲೆ ಹಾಕಿದರು. ಗುರ್ಬಾಝ್ ಅವರು 53 ಎಸೆತಗಳಿಗೆ 9 ಬೌಂಡರಿ, ಒಂದು ಸಿಕ್ಸರ್ ಜೊತೆಗೆ 65 ರನ್‌ಗಳಿಸಿ ವಿಕೆಟ್ ನೀಡಿದರು. ಝದ್ರಾನ್ ಅವರು 113 ಎಸೆಗಳಲ್ಲಿ 10 ಬೌಂಡರಿ ಸಿಡಿಸಿ 87 ರನ್ ಗಳಿಸಿ ಔಟ್ ಆದರು.
ಜೊತೆಗೆ, ರಹ್ಮತ್ ಶಾ 77, ನಾಯಕ ಹಸ್ಮತುಲ್ಲಾ ಶಾಹಿದಿ 48 ರನ್ ಗಳಿಸಿದರು. 2 ವಿಕೆಟ್‌ಗಳ ನಷ್ಟದೊಂದಿಗೆ 286 ರನ್‌ಗಳಿಸಿ ಅಫ್ಘಾನ್ ವಿಜಯ ಪತಾಕೆ ಹಾರಿಸಿತು.
ಟಾಸ್ ಗೆದ್ದು ಪಾಕಿಸ್ತಾನ ತಂಡ ನಾಯಕ ಬಾಬರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇಮಾಮುಲ್ ಹಕ್ 22 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 17 ರನ್ ಗಳಿಸಿದರೆ ಔಟಾದರೆ, ಅಬ್ದುಲ್ಲಾ ಶಫೀಕ್ ಅವರು 75 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿಗಳೊಂದಿಗೆ 58 ರನ್ ಗಳಿಸಿ ವಿಕೆಟ್ ಇತ್ತರು.
ತಂಡದ ನಾಯಕ ಬಾಬರ್ ಅವರು ಬಾಲ್ಕು ಬೌಂಡರಿ, ಒಂದು ಸಿಕ್ಸ್ ಬಾರಿಸಿ 74 ರನ್ ಗಳಿಸಿ ಔಟಾದರು. ಒಂದು ಸಿಕ್ಸರ್ ಬಾರಿಸಿದ ನೂರ್ ಅಹ್ಮದ್ 8 ರನ್ ಗಳಿಸಿ ನಿರ್ಗಮಿಸಿದರು. ಶಕೀಲ್ 25, ಇಫ್ತಿಕಾರ್ 40, ಶಾದಾಬ್ ಖಾನ್ 40, ಶಾಹಿನ್ ಅಫ್ರಿದಿ 3 ರನ್ ಗಳಿಸಿದರು.