ಐಸಿಸಿ ವಿಶ್ವಕಪ್ | ಅಫ್ಘಾನ್‌ ವಿರುದ್ಧವೂ ಸೋಲುಂಡ ಪಾಕ್ ತಂಡ

Date:

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನ ನಡುವಿನ ಪಾಕ್‌ ತಂಡ ಹೀನಾಯ ಸೋಲು ಕಂಡಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ತಂಡ 8 ವಿಕೆಟ್‌ಗಳ ಗೆಲುವು ಸಾಧಿಸಿದೆ.

- Advertisement -

ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಗೆಲುವುಗಳನ್ನು ಕಂಡಿದ್ದ ಪಾಕ್‌ ತಂಡ, ಬಳಿಕ ಸತತ ಮೂರು ಸೋಲುಗಳನ್ನು ಕಂಡಿದೆ. ಪಾಕ್‌ ತಂಡ ಆಡಿದ ಮೊದಲ ಪಂದ್ಯದಲ್ಲಿ ನೆದರ್‌ಲೆಂಡ್ ಮತ್ತು ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತ್ತು. ಆ ಬಳಿಕ, ಭಾರತ ಮತ್ತು ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ಸೋಲುಂಡಿತ್ತು. ಇದೀಗ, ಅಫ್ಘಾನ್ ವಿರುದ್ಧವೂ ಸೋತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಆ ಮೂಲಕ ಅಂಕ ಪಟ್ಟಿಯಲ್ಲಿ 4 ಅಂಕ ಗಳೊಂದಿಗೆ 5ನೇ ಸ್ಥಾನದಲ್ಲಿದೆ. ರನ್‌ ರೇಟ್‌ ಆಧಾರದಲ್ಲಿ 5ನೇ ಸ್ಥಾನದಲ್ಲಿ ಉಳಿದಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್‌ ತಂಡ 283 ರನ್‌ಗಳನ್ನು ಕಲೆ ಹಾಕಿತ್ತು. ನಿರಾಯಾಸವಾಗಿ ರನ್‌ಗಳ ಬೆನ್ನತ್ತಿದ ಅಫ್ಘಾನ್‌ ತಂಡ 49 ಓವರ್‌ಗಳಲ್ಲಿ 286 ರನ್‌ಗಳನ್ನು ಕಲೆ ಹಾಕಿ8 ವಿಕೆಟ್‌ಗಳೊಂದಿಗೆ ಗೆಲುವು ಸಾಧಿಸಿದೆ.

ಅಫ್ಘಾನ್‌ ತಂಡ ಓಪನರ್‌ ಬ್ಯಾಟ್ಸ್‌ಮನ್‌ ರಹ್ಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಜೊತೆಯಾಟದಲ್ಲಿ 130 ರನ್‌ಗಳನ್ನು ಕಲೆ ಹಾಕಿದರು. ಗುರ್ಬಾಝ್‌ ಅವರು 53 ಎಸೆತಗಳಿಗೆ 9 ಬೌಂಡರಿ, ಒಂದು ಸಿಕ್ಸರ್‌ ಜೊತೆಗೆ 65 ರನ್‌ಗಳಿಸಿ ವಿಕೆಟ್‌ ನೀಡಿದರು. ಝದ್ರಾನ್‌ ಅವರು 113 ಎಸೆಗಳಲ್ಲಿ 10 ಬೌಂಡರಿ ಸಿಡಿಸಿ 87 ರನ್‌ ಗಳಿಸಿ ಔಟ್‌ ಆದರು.

ಜೊತೆಗೆ, ರಹ್ಮತ್ ಶಾ 77, ನಾಯಕ ಹಸ್ಮತುಲ್ಲಾ ಶಾಹಿದಿ 48 ರನ್‌ ಗಳಿಸಿದರು. 2 ವಿಕೆಟ್‌ಗಳ ನಷ್ಟದೊಂದಿಗೆ 286 ರನ್‌ಗಳಿಸಿ ಅಫ್ಘಾನ್‌ ವಿಜಯ ಪತಾಕೆ ಹಾರಿಸಿತು.

ಟಾಸ್‌ ಗೆದ್ದು ಪಾಕಿಸ್ತಾನ ತಂಡ ನಾಯಕ ಬಾಬರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಇಮಾಮುಲ್‌ ಹಕ್‌ 22 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 17 ರನ್‌ ಗಳಿಸಿದರೆ ಔಟಾದರೆ, ಅಬ್ದುಲ್ಲಾ ಶಫೀಕ್‌ ಅವರು 75 ಎಸೆತಗಳಲ್ಲಿ 2 ಸಿಕ್ಸರ್‌, 4 ಬೌಂಡರಿಗಳೊಂದಿಗೆ 58 ರನ್‌ ಗಳಿಸಿ ವಿಕೆಟ್ ಇತ್ತರು.

ತಂಡದ ನಾಯಕ ಬಾಬರ್ ಅವರು ಬಾಲ್ಕು ಬೌಂಡರಿ, ಒಂದು ಸಿಕ್ಸ್‌ ಬಾರಿಸಿ 74 ರನ್‌ ಗಳಿಸಿ ಔಟಾದರು.  ಒಂದು ಸಿಕ್ಸರ್‌ ಬಾರಿಸಿದ ನೂರ್ ಅಹ್ಮದ್ 8 ರನ್‌ ಗಳಿಸಿ ನಿರ್ಗಮಿಸಿದರು. ಶಕೀಲ್‌ 25, ಇಫ್ತಿಕಾರ್‌ 40, ಶಾದಾಬ್‌ ಖಾನ್‌ 40, ಶಾಹಿನ್‌ ಅಫ್ರಿದಿ 3 ರನ್‌ ಗಳಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...