ಸತತ ಐದು ಪಂದ್ಯಗಳನ್ನು ಗೆದ್ದು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡ ಇಂದು ಇಂಗ್ಲೆಂಡ್ ವಿರುದ್ಧ ಲಖನೌದ ಏಕನಾ ಕ್ರೀಡಾಂಗಣದಲ್ಲಿ ಸೆಣಸಲಿದೆ. ಇಂಗ್ಲೆಂಡ್ ತಂಡ ಆಡಿರುವ 5 ಪಂದ್ಯಗಳಲ್ಲಿ 1ರಲ್ಲಿ ಗೆದ್ದು 4ರಲ್ಲಿ ಸೋತಿದೆ. ತನ್ನ ಸೆಮಿಫೈನಲ್ ಪ್ರವೇಶದ ಆಸೆ ಜೀವಂತವಾಗಿಟ್ಟುಕೊಳ್ಳಬೇಕೆಂದರೆ ಆಂಗ್ಲರಿಗೆ ಇದು ಕೊನೆಯ ಅವಕಾಶವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದರುವ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ ಬ್ಯಾಟಿಂಗ್ ಮಾಡುತ್ತಿದೆ. ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್ ಆಡುತ್ತಿದೆ. ಈ ಪಂದ್ಯದೊಂದಿಗೆ ರೋಹಿತ್ ಶರ್ಮಾ ನಾಯಕನಾಗಿ 100ನೇ ಪಂದ್ಯವಾಡುತ್ತಿದ್ದಾರೆ
ಏಕದಿನ ವಿಶ್ವಕಪ್ ಇತಿಹಾಸ ಗಮನಿಸಿದರೆ ಕಳೆದ 20 ವರ್ಷಗಳಿಂದ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದೇ ಇಲ್ಲ. ಸತತ ಸೋಲಿನಿಂದ ಕಂಗೆಟ್ಟಿರುವ ಜೋಸ್ ಬಟ್ಲರ್ ನೇತೃತ್ವದ ಆಂಗ್ಲ ಪಡೆ ಇಂದು ತಿರುಗುಬಿದ್ದರೂ ಆಶ್ಚರ್ಯವಿಲ್ಲ. ಹಾಗಾಗಿ ಈ ಪಂದ್ಯವು ರೋಚಕವಾಗಿರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.
2003ರ ವಿಶ್ವಕಪ್ನಲ್ಲಿ ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್ ಎದುರು ಗೆಲುವು ಸಾಧಿಸಿತ್ತು. ನಂತರದಲ್ಲಿ ಕ್ರಿಕೆಟ್ ಪಿತಾಮಹರ ಎದುರು ಟೀಂ ಇಂಡಿಯಾ ಗೆಲುವು ಸಾಧಿಸಿಲ್ಲ. ಭಾರತ ಈ ಪಂದ್ಯ ಗೆದ್ದರೆ 2 ದಶಕಗಳ ಸೇಡು ತೀರಿಸಿಕೊಂಡಂತಾಗುತ್ತದೆ.
England have won the toss and elected to field. Both teams remain unchanged. #INDvENG #CWC23 pic.twitter.com/nvE46ZbftI
— Cricbuzz (@cricbuzz) October 29, 2023
ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ಒಟ್ಟು 8 ಬಾರಿ ಪರಸ್ಪರ ಎದುರಾಗಿವೆ. ಎಲ್ಲ ಪಂದ್ಯಗಳಲ್ಲೂ ಇಂಗ್ಲೆಂಡ್ ತಂಡವೇ ಮೇಲುಗೈ ಸಾಧಿಸಿರುವುದು ವಿಶೇಷ. ಭಾರತ 3ರಲ್ಲಿ ಗೆದ್ದಿದ್ದರೆ, 4ರ ಇಂಗ್ಲೆಂಡ್ ತಂಡ ಜಯಿಸಿತ್ತು. 1 ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.
ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೂ 106 ಬಾರಿ ಮುಖಾಮುಖಿಯಾಗಿವೆ. ಭಾರತ 57ರಲ್ಲಿ ಜಯ ಕಂಡಿದ್ದರೆ, ಇಂಗ್ಲೆಂಡ್ 44 ರಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳು ಟೈ ಆದರೆ 3 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಕಂಡಿವೆ.
ಕಿವೀಸ್ ಎದುರು ಐದು ವಿಕೆಟ್ ಗಳಿಸಿದ್ದ ಮೊಹಮ್ಮದ್ ಶಮಿ ಈ ಪಂದ್ಯದಲ್ಲೂ ಆಡುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ ಉತ್ತಮ ಲಯಕ್ಕೆ ಮರಳಿರುವುದು ಉತ್ತಮ ಆರಂಭ ದೊರೆಯಲಿದೆ. ಆದರೆ ಇಂಗ್ಲೆಂಡ್ ಬೌಲರ್‌ಗಳಿಗೆ ವಿರಾಟ್ ಕೊಹ್ಲಿಯನ್ನು ಕಟ್ಟಿಹಾಕುವುದು ನಿಜಕ್ಕೂ ದೊಡ್ಡ ಸವಾಲಾಗಿದೆ
A special TON! 💯
Congratulations to #TeamIndia skipper Rohit Sharma who is all set to play his 1⃣0⃣0⃣th international match as a Captain 👏👏 #TeamIndia | #CWC23 | #MenInBlue | #INDvENG pic.twitter.com/WqX3rDuddk
— BCCI (@BCCI) October 29, 2023
ಶ್ರೇಯಸ್ ಅಯ್ಯರ್, ಕೆ. ಎಲ್. ರಾಹುಲ್ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ತಮ್ಮ ವೈಫಲ್ಯವನ್ನು ಕಳಚಿಕೊಳ್ಳಲು ಉತ್ತಮ ಅವಕಾಶ ಸಿಗಲಿದೆ
ಟೀಂ ಇಂಡಿಯಾ ಬೌಲರ್‌ಗಳ ಪಡೆಯನ್ನು ಎದುರಿಸಲು ನಾಯಕ ಜೋಸ್ ಬಟ್ಲರ್, ಜಾನಿ ಬೆಸ್ಟೊ, ಡೇವಿಡ್ ಮಲಾನ್, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರು ಸಿದ್ಧರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತದ ಮಾಜಿ ಕ್ರಿಕೆಟಿಗ, ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನ
ಪಂದ್ಯವಾಡುವ ಉಭಯ ತಂಡಗಳ 11ರ ಬಳಗ
ಭಾರತ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿಕೆಟ್ ಕೀಪರ್), ಸೂರ್ಯಕುಮಾರ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್.
ಇಂಗ್ಲೆಂಡ್:
ಜೋಸ್ ಬಟ್ಲರ್ (ನಾಯಕ–ವಿಕೆಟ್ ಕೀಪರ್), ಜಾನಿ ಬೈರ್ಸ್ಟೋವ್, ಡೇ ವಿಡ್ ಮಲಾನ್, ಜೋರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಡೇವಿಡ್ ವಿಲಿ, ಆದಿಲ್ ರಶೀದ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಮೋಯಿನ್ ಆಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್.
ಪಂದ್ಯ ಆರಂಭ: ಮಧ್ಯಾಹ್ನ 2 ಗಂಟೆ