ಗುಜರಾತ್ | ಹುಟ್ಟಿದ ನಾಲ್ಕೇ ದಿನಕ್ಕೆ ನಾಲ್ಕು ಮಂದಿಗೆ ಜೀವ ದಾನ ಮಾಡಿ ಸತ್ತ ಹಸುಗೂಸು!

Date:

ಹುಟ್ಟಿ ಕೇವಲ ನಾಲ್ಕು ದಿನ ಬದುಕಿದ್ದ ಹಸುಗೂಸೊಂದು ಅಂಗಾಂಗ ದಾನದ ಮೂಲಕ ನಾಲ್ಕು ಮಂದಿಯ ಬಾಳಿಗೆ ಬೆಳಕಾದ ಮನ ಕಲುಕುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.

ಸೂರತ್‌ನ ಡೈಮಂಡ್ ಘಟಕದ ಯೋಜನಾ ವಿಭಾಗದಲ್ಲಿ ಉದ್ಯೋಗಿಯಾಗಿರುವ ಅನೂಪ್ ಠಾಕೂರ್ ಅವರು ತಮ್ಮ ಪತ್ನಿ, ತುಂಬುಗರ್ಭಿಣಿ ವಂದನಾ ಅವರನ್ನು ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು. ಅವರಿಗೆ ಸಿಸೇರಿಯನ್ ಮಾಡಲಾಯಿತು. ವಂದನಾ ಠಾಕೂರ್ ಅವರಿಗೆ ಅಕ್ಟೋಬರ್ 23 ರಂದು ಸಂಜೆ 7. 50 ರ ಸುಮಾರಿಗೆ ಗಂಡು ಮಗು ಜನಿಸಿತು.

ಆದರೆ, ಹುಟ್ಟಿದ ಮಗು ಸಹಜವಾಗಿರಲಿಲ್ಲ. ಮಗುವಿಗೆ ಸಾಮಾನ್ಯ ಹೃದಯ ಬಡಿತದ 15% ಮಾತ್ರ ಇತ್ತು ಮತ್ತು ಅದು ಸರಿಯಾಗಿ ಉಸಿರಾಡುತ್ತಿರಲಿಲ್ಲ. ಮಗು ಹುಟ್ಟಿದಾಗ ಅಳಲಿಲ್ಲ ಮತ್ತು ಅದರ ದೇಹದಲ್ಲಿ ಯಾವುದೇ ಚಲನೆಯೂ ಇರಲಿಲ್ಲ. 48 ಗಂಟೆಗಳ ವೀಕ್ಷಣೆಯ ನಂತರ, ವೈದ್ಯರು ಮಗುವಿನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅನುಪ್ ಮತ್ತು ವಂದನಾ ಠಾಕೂರ್ ಕ್ಲಿಷ್ಟಕರ ಸಂದರ್ಭದಲ್ಲಿ ಅಸಾಧಾರಣವಾದ ನಿರ್ಧಾರವನ್ನು ಕೈಗೊಂಡರು. ತಮ್ಮ ಮಗನ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ ನಂತರ ಅವರು ಮಗನ ಅಂಗಗಳನ್ನು ದಾನ ಮಾಡಲು ನಿರ್ಧರಿಸಿದರು. ಹಸುಗೂಸಿನ ಮೂತ್ರಪಿಂಡಗಳು, ಕಾರ್ನಿಯಾ ಮತ್ತು ಗುಲ್ಮ ಸೇರಿದಂತೆ ಹಲವು ಅಂಗಗಳನ್ನು ಶುಕ್ರವಾರ ರಾತ್ರಿ ಹಸುಗೂಸಿನ ದೇಹದಿಂದ ತೆಗೆದು ನಾಲ್ವರು ರೋಗಿಗಳಿಗೆ ಅಳವಡಿಸಲಾಯತು.

ಹುಟ್ಟಿ ಕೇವಲ 100 ಗಂಟೆ ಬದುಕಿದ್ದ ಹಸುಗೂಸೊಂದು ನಾಲ್ವರಿಗೆ ಜೀವ ದಾನ ಮಾಡಿದ್ದು ಒಂದು ಅಸಾಧಾರಣ ಘಟನೆಯೇ ಸರಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...

ಪಶ್ಚಿಮ ಬಂಗಾಳ| ಬಿಜೆಪಿಯ ಬಿರ್ಭೂಮ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ನಾಮಪತ್ರ ರದ್ದು

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು

ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್...

ಹದಗೆಟ್ಟ ರಸ್ತೆ| 600ಕ್ಕೂ ಹೆಚ್ಚು ತ್ರಿಪುರಾ ಬುಡಕಟ್ಟು ಮತದಾರರಿಂದ ಚುನಾವಣೆ ಬಹಿಷ್ಕಾರ

ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಭಾಗವಾದ ಧಲೈ ಜಿಲ್ಲೆಯ ದೂರದ ಬುಡಕಟ್ಟು...