ವಿದ್ಯುತ್ ಖಾಸಗೀಕರಣದಿಂದ ವಿದ್ಯುತ್ ದರ ಅನಿಯಂತ್ರಿತವಾಗಿ ಏರಿಕೆ ಆಗಲಿದೆ. ಕೂಡಲೇ ರೈಲ್ವೆ ಮತ್ತು ವಿದ್ಯುತ್ ಖಾಸಗೀಕರಣ ನೀತಿಗಳನ್ನು ಕೈಬಿಡಬೇಕೆಂದು ಒತ್ತಾಯಿಸಿ ಸಿಐಟಿಯು ಪ್ರತಿಭಟನೆ ನಡೆಸಿದೆ.
ಖಾಸಗೀಕರಣದಿಂದಾಗಿ ಪ್ರೀಪೇಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಮೊಬೈಲ್ ಫೋನ್‌ಗಳಿಗೆ ರೀಚಾರ್ಜ್ ಮಾಡಿದಾಲದೇ ಕೆಲಸಕ್ಕೆ ಬರುವುದು. ಪಂಪ್‌ಸೆಟ್ ಗ್ರಾಹಕರು ಹಣ ಪಾವತಿಸಿದಾಗಲೇ ವಿದ್ಯುತ್ ಸಿಗುವುದು. ಆ ಹಣ ಮುಗಿದ ತಕ್ಷಣ ಸಂಪರ್ಕ ನಿಲ್ಲುವುದು. ಇವೆಲ್ಲವುಗಳನ್ನು ಸುಸೂತ್ರವಾಗಿ ನಡೆಸಲು ಪ್ರತ್ಯೇಕ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು.
ಬಡ ಬಳೆಕೆದಾರರು ಬಿಲ್ ಕಟ್ಟದೇ ಇದ್ದಾಗ ಅವರಿಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತ ಮಾಡುವುದು, ಬಿಲ್ ಕಟ್ಟಲೇಬೇಕೆಂದು ಹಿಂಸೆ ನೀಡುವುದು, ಇಂತಹ ಜನವಿರೋಧಿ ನೀತಿಗಳನ್ನು ವಿದ್ಯುತ್ ಖಾಸಗೀಕರಣ ನೀತಿಯಲ್ಲಿ ಅಳವಡಿಸಲು ತಮ್ಮ ಸರ್ಕಾರ ಮುಂದಾಗಿರುವುದು ಜನವಿರೋಧಿ ನೀತಿಯಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷೆ, ಎಚ್.ಪದ್ಮಾ, ಕಾರ್ಯದರ್ಶಿ ಡಿ.ಎಸ್. ಶರಣಬಸವ, ಖಜಾಂಚಿ ಶಬ್ಬೀರ್ ಜಾಲಹಳ್ಳಿ ಗೋಕುರಮ್ಮ, ಶರಣಮ್ಮ ಸೇರಿದಂತೆ ಅನೇಕರು ಇದ್ದರು.