ರಾಯಚೂರು | ಗೂಗಲ್ ಬ್ಯಾರೇಜ್‌ನಿಂದ ನೀರು ಒದಗಿಸಿ; ರೈತ ಸಂಘದ ಒತ್ತಾಯ

Date:

ತುಂಗಭದ್ರ ಎಡದಂಡೆ ಮತ್ತು ನಾರಾಯಣಪುರು ಬಲದಂಡೆ ಕಾಲುವೆ ಕೊನೆಭಾಗದ ರೈತರಿಗೆ ನೀರು ಬರದೆ ರೈತರು ಆರ್ಥಿಕ ಸಂಕಷ್ಟ ಗುರಿಯಾಗುವಂತಾಗಿದ್ದು, ಗೂಗಲ್ ಬ್ಯಾರೇಜ್‌ನಿಂದ ಕೊನೆಭಾಗಕ್ಕೆ ನೀರು ಒದಗಿಸಲು ಸರ್ಕಾರ ಮುಂದಾಗ ಬೇಕು ಇಲ್ಲವಾದಲ್ಲಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.

- Advertisement -

ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಕರ್ನಾಟಕರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ತುಂಗಭದ್ರ ಎಡದಂಡೆ ಕಾಲುವೆ ಮಾನವಿಯಿಂದ ರಾಯಚೂರು ತಾಲೂಕಿನವರೆಗೆ ನೀರೇ ಬರುತ್ತಿಲ್ಲ. ಅದೇ ಸ್ಥಿತಿ ನಾರಾಯಣಪುರು ಬಲದಂಡೆ ಕಾಲುವೆಯಲ್ಲಿಯೂ ಪ್ರಾರಂಭವಾಗಿದೆ. ಗೂಗಲ್ ಬ್ಯಾರೇಜ್‌ನಿಂದ ತುಂಗಭದ್ರ ಎಡದಂಡೆ ಕಾಲುವೆ ಹಾಗೂ ನಾರಾಯಣಪುರು ಬಲದಂಡೆಗೆ ಕಾಲುವೆ ನೀರು ಹರಿಸಿ ರೈತರಿಗೆ ನೆರವಾಗಿ, ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಜಾನುವಾರುಗಳಿಗೆ ನೀರು ಕೊಡಲು ಕೆರೆಗಳನ್ನು ಭರ್ತಿ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

“ಪವಿತ್ರ ಸ್ಥಳಗಳ ಮೇಲೆ ದಾಳಿ” ಹೆಸರಿನಲ್ಲಿ ಸೌದಿ ಅರೇಬಿಯಾ...

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯವು ಅತ್ಯಂತ ಸಂಕೀರ್ಣ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಯೆಮೆನ್‌ನ ಹೌತಿ ಪಡೆಗಳು (ಅನ್ಸಾರ್ ಅಲ್ಲಾ) ಉಡಾವಣೆ ಮಾಡುತ್ತಿರುವ ಕ್ಷಿಪಣಿಗಳು ಹಾಗೂ ಡ್ರೋನ್‌ಗಳು...

ಹೂಥಿಗಳು ಯಾರು? ಅವರು ಮೆಕ್ಕಾವನ್ನೇ ಗುರಿಯಾಗಿಸಿದ್ದರೇ?

ಇರಾನ್‌ನ ‘ಪ್ರತಿರೋಧ ಅಕ್ಷ’ದ ಪ್ರಮುಖ ಭಾಗವಾಗಿರುವ ಹೂಥಿಗಳು ಈಗ ಇಸ್ರೇಲ್, ಸೌದಿ ಅರೇಬಿಯಾ ಮತ್ತು ಕೆಂಪು ಸಮುದ್ರದ ಭದ್ರತಾ ಸಮೀಕರಣಗಳ ಕೇಂದ್ರದಲ್ಲಿ ನಿಂತಿದ್ದಾರೆ. ಮೆಕ್ಕಾವನ್ನೇ ಗುರಿಯಾಗಿಸಿ ಡ್ರೋನ್ ಕಳುಹಿಸಲಾಗಿದೆ ಎಂಬ ಸೌದಿ ಆರೋಪದ...

ಬಾಗಲಕೋಟೆ | ಆಲಮಟ್ಟಿ ಒಳಹರಿವು ಶೂನ್ಯ: ಬಾಗಿನ ಅರ್ಪಣೆಗೆ...

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಆಲಮಟ್ಟಿ ಜಲಾಶಯದ ಒಳಹರಿವು ಶೂನ್ಯಕ್ಕೆ ತಲುಪಿದೆ. ಜಲಾಶಯ ಭರ್ತಿಯಾಗಿ ಈಗ ನೀರಿನ ಮಟ್ಟ ಇಳಿಕೆಯಾಗುತ್ತಿದ್ದರೂ, ಇದುವರೆಗೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸದಿರುವುದು ಬಾಗಲಕೋಟೆ ಜಿಲ್ಲೆಯ...

ಕೊಪ್ಪಳ, ಗಂಗಾವತಿಯಿಂದ ಹಿಡಿದು ಸಿಂಧನೂರುವರೆಗೆ ಎಡದಂಡೆ ಕಾಲುವೆ ನೀರು ಯಥೇಚ್ಚವಾಗಿ ಹರಿಯುತ್ತಿದೆ. ಮಾನವಿಯಿಂದ ಮಾತ್ರ ನೀರು ಬರುತ್ತಿಲ್ಲ. ನಿತ್ಯವೂ ರೈತರು ಪ್ರತಿಭಟನೆ ಮಾಡುವಂತಾಗಿದೆ. ಗೂಗಲ್ ಬ್ಯಾರೇಜ್‌ನಿಂದ ನೀರು ಹರಿಸಿದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತದಂತಾಗುತ್ತದೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಘೋಷಣೆಯ ನಂತರವೂ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಮುಂಗಾರು ಮತ್ತು ಹಿಂಗಾರು ಬೆಳೆ ಕಳೆದು ಹೋಗಿದ್ದರಿಂದ ಪ್ರತ್ಯೇಕವಾಗಿ ಎರಡು ಹಂಗಾಮಿನ ಬೆಳೆ ನಷ್ಟ ಪರಿಹಾರ ರೈತರಿಗೆ ಬಿಡುಗಡೆ ಮಾಡಬೇಕು. ಗುಂಜಳ್ಳಿ ಕೆರೆ ಸೇರಿದಂತೆ ರಾಯಚೂರು ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಅವಕಾಶವಿದ್ದು ಭರ್ತಿ ಮಾಡಬೇಕೆಂದರು.

ರೈತ ಮುಖಂಡ ಅಬ್ದುಲ್ ಮಜೀದ್ ಮಾತನಾಡಿ ತುಂಗಭದ್ರ ಮತ್ತು ಕೃಷ್ಣ ನದಿಗಳಲ್ಲಿ ನೀರು ಹರಿದು ಹೋಗುತ್ತಿದೆ. ರೈತರಿಗೆ ದೊರೆಯುತ್ತಿಲ್ಲ. ಸರ್ಕಾರಗಳು ವ್ಯರ್ಥವಾಗಿ ಹರಿಯುವ ನೀರು ಬಳಸಲು ಕೆರೆ ತುಂಬುವದು, ಕುಡಿಯುವ ನೀರಿನ ಸಣ್ಣ ಕೆರೆಗಳನ್ನು ಭರ್ತಿ ಮಾಡಬೇಕೆಂದರು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿಯ ಬದಲು ನ್ಯಾಯಬೆಲೆ ಅಂಗಡಿಗಳಲ್ಲಿ ಮೂರು ಕೆಜಿ ಮಾತ್ರ ನೀಡಲಾಗುತ್ತಿದೆ. ಇನ್ನೂ ಪಡಿತರದ ಬದಲು ಅಕ್ಕಿ ನೀಡುವಲ್ಲಿಯೂ ಕೆಲವರಿಗೆ ಇಂದಿಗೂ ಹಣವೂ ಬರುತ್ತಿಲ್ಲ. ಗೃಹ ಲಕ್ಷ್ಮೀ ಯೋಜನೆಯಡಿ ಅನೇಕ ಮಹಿಳೆಯರಿಗೆ ಹಣವೂ ಬರುತ್ತಿಲ್ಲ. ಬರಗಾಲ ಇರುವದರಿಂದ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದರು. ಈ ಸಂದರ್ಭದಲ್ಲಿ ನರಸಿಂಗರಾಜ ಕುಲಕರ್ಣಿ,  ಅಕ್ಕಮಹಾದೇವಿ, ರಮೇಶ, ವೀರೇಶ, ದೇವಪ್ಪ ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಬೇಳೂರು ಗ್ರಾಪಂ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಧಾಳಿ

ಕಟ್ಟಡ ಪರವಾನಿಗೆ ನೀಡುವಲ್ಲಿ ವಿಳಂಬ ಹಾಗೂ ಪಂಚಾಯತ್ ಆಡಳಿತಕ್ಕೆ ಸಂಬಂಧಿಸಿದ ವಿವಿಧ...

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹತ್ತು ಹೊಸ ಯೋಜನೆಗಳ ಘೋಷಣೆ

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ ಸಿಎಂ‌ ಡಿ ಕೆ ಶಿವಕುಮಾರ್...

ಭಟ್ಕಳ | ಗಣಪತಿ ವಿಸರ್ಜನೆ ವೇಳೆ ಮಸೀದಿ ಕಿಟಕಿ ಗಾಜು ಒಡೆದು, ಗೊಜ್ಜು ತೂರಾಟ ಆರೋಪ: ದೂರು–ಪ್ರತಿದೂರು ದಾಖಲು

ಭಟ್ಕಳದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯ ಕಿಟಕಿ ಗಾಜನ್ನು ಕಲ್ಲಿನಿಂದ...