ಬಹಳ ಕುತೂಹಲ ಮೂಡಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನದ ನಡುವಿನ ವಿಶ್ವಕಪ್ ಪಂದ್ಯದಲ್ಲಿ, ಡಕ್ ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಾಕಿಸ್ತಾನವು 21 ರನ್‌ಗಳಿಂದ ಜಯಗಳಿಸಿದೆ.
ಗೆಲ್ಲಲು 402 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ಆರಂಭಿಕ ಆಟಗಾರ ಶಫೀಕ್ ಅವರು 6 ರನ್ ಇರುವಾಗಲೇ ಔಟಾಗಿದ್ದರಿಂದ ಆರಂಭಿಕ ಆಘಾತಕ್ಕೊಳಗಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಫಖರ್ ಝಮಾನ್‌ಗೆ ಜೊತೆಯಾದ ನಾಯಕ ಬಾಬರ್ ಆಝಂ ತಾಳ್ಮೆಯ ಆಟವಾಡಿದರೆ, ಫಖರ್ ಝಮಾನ್ ನ್ಯೂಝಿಲ್ಯಾಂಡ್ ಬೌಲರ್‌ಗಳನ್ನು ಯದ್ವಾತದ್ವಾ ಚಚ್ಚಿದರು.
After they conceding 400+ runs with the ball, did you expect Pakistan to bag a win in Bengaluru?
Babar Azam’s side are well ahead on DLS, and take home two points with play called off 👉 https://t.co/adkwhgOKPg #PAKvNZ #CWC23 pic.twitter.com/frLa5BpNpG
— ESPNcricinfo (@ESPNcricinfo) November 4, 2023
ಮೊದಲು ಮಳೆ ಬಂದಾಗ, 21 ಓವರ್‌ಗಳಾಗಿತ್ತು. ಈ ವೇಳೆ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತ್ತು. ಮಳೆ ಬಿಡುವು ನೀಡಿದಾಗ ಪಾಕಿಸ್ತಾನಕ್ಕೆ 41 ಓವರ್‌ಗಳಲ್ಲಿ 342 ರನ್ ಗಳಿಸಬೇಕಿತ್ತು.
ಈ ನಡುವೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಫಖರ್ ಝಮಾನ್ ಭರ್ಜರಿ ಎರಡು ಸಿಕ್ಸ್‌ಗಳ ಮೂಲಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ 25.3 ಓವರ್‌ಗಳಲ್ಲಿ 200 ರನ್ ಗಳಿಸಿತು. ಮಳೆಯ ಕಾರಣ ಡಕ್ ವರ್ಥ್ ಲೂಯಿಸ್ ನಿಯಮ ಅನ್ವಯಿಸುವಾಗ ಪಾಕಿಸ್ತಾನ 21 ರನ್‌ಗಳ ಮುನ್ನಡೆ ಸಾಧಿಸಿತ್ತು.
1️⃣2️⃣6️⃣ not out
8️⃣1️⃣ balls
1️⃣1️⃣ sixes
8️⃣ fours
1️⃣5️⃣5️⃣.5️⃣5️⃣ strike-rateOne of the most special @cricketworldcup knocks you will ever see! Player of the match @FakharZamanLive 🫡#NZvPAK | #CWC23 | #DattKePakistani pic.twitter.com/dO0TIfPidx
— Pakistan Cricket (@TheRealPCB) November 4, 2023
ಮತ್ತೆ ಮಳೆ ಬಂದ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ 21 ರನ್‌ಗಳ ಜಯಗಳಿಸಿದೆ. ಈ ಗೆಲುವಿನ ಮೂಲಕ ಪಾಕಿಸ್ತಾನವು ಸೆಮಿಫೈನಲ್ ಆಸೆಯನ್ನು ಇನ್ನೂ ಜೀವಂತವಾಗಿರಿಸಿದೆ.
New Zealand in this World Cup:
First 4 matches – 4 wins.
Next 4 matches – 4 losses. pic.twitter.com/TFy0xmFtIw
— Mufaddal Vohra (@mufaddal_vohra) November 4, 2023
ಕೇವಲ 81 ಎಸೆತದಲ್ಲಿ ಔಟಾಗದೆ 8 ಬೌಂಡರಿ ಹಾಗೂ 11 ಸಿಕ್ಸ್‌ನ ನೆರವಿನಿಂದ 126 ರನ್ ಚಚ್ಚಿದ ಫಖರ್ ಝಮಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಾಬರ್ ಅಝಮ್ ಕೂಡ ಅತ್ತ್ಯುತ್ತಮ ಆಟವಾಡಿ 63 ಎಸೆತಕ್ಕೆ 66 ರನ್ ಹೊಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ನ್ಯೂಝಿಲ್ಯಾಂಡ್ ಪಾಕಿಸ್ತಾನಕ್ಕೆ 402 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಇಷ್ಟು ದೊಡ್ಡ ಗುರಿ ನೀಡಿದರೂ, ಮಳೆ ಬಂದ ಹಿನ್ನೆಲೆಯಲ್ಲಿ ಡಕ್ ವರ್ಥ್ ಲೂಯಿಸ್ ನಿಯಮ ಅನ್ವಯಿಸಿದ್ದರಿಂದ ಸೋಲನುಭವಿಸಿದ್ದು, ನಿರಾಸೆಗೊಳಗಾದರು. ಈ ಸೋಲಿನ ಮೂಲಕ ನ್ಯೂಝಿಲ್ಯಾಂಡ್ ಕಳೆದ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿದಂತಾಗಿದೆ. ಆದರೂ ಸೆಮಿಫೈನಲ್‌ಗೇರುವ ಅವಕಾಶ ಇನ್ನೂ ಕಾಯ್ದುಕೊಂಡಿದೆ.
ಈವರೆಗಿನ ಅಂಕಪಟ್ಟಿಯಲ್ಲಿ ನ್ಯೂಝಿಲ್ಯಾಂಡ್ 4ನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನವು 5ನೇ ನೇ ಸ್ಥಾನದಲ್ಲಿದೆ.