ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ ಕಾರಣ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 10 ರವರೆಗೆ ಮುಚ್ಚುವಂತೆ ನವದೆಹಲಿ ಸರ್ಕಾರ ಆದೇಶಿಸಿದೆ.
ದೆಹಲಿ ಶಿಕ್ಷಣ ಸಚಿವ ಮತ್ತು ಎಎಪಿ ನಾಯಕಿ ಅತಿಶಿ ಇಂದು (ನ.5) ಟ್ವೀಟ್ ಮೂಲಕ ಘೋಷಣೆ ಮಾಡಿದ್ದಾರೆ.
“ತರಗತಿ 6 ರಿಂದ 12ನೇ ರವರೆಗಿನ ಶಾಲೆಗಳಿಗೆ ಆನ್‌ಲೈನ್ ತರಗತಿಗಳಿಗೆ ಬದಲಾಯಿಸುವ ಆಯ್ಕೆಯನ್ನು ನೀಡಲಾಗುತ್ತಿದೆ” ಎಂದು ಅತಿಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ದೆಹಲಿ ಸರ್ಕಾರವು ಎಲ್ಲ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನವೆಂಬರ್ 2 ರವರೆಗೆ ಮುಚ್ಚಲು ಆದೇಶಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮಾಲಿನ್ಯ ಮಟ್ಟಗಳು ಹದಗೆಡುತ್ತಿರುವ ಕಾರಣ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಘೋಷಿಸಿದ್ದಾರೆ.
ಶುಕ್ರವಾರದಂದು(ನ.3) ದೆಹಲಿಯ ಗಾಳಿಯ ಗುಣಮಟ್ಟವು ‘ತೀವ್ರ’ ಮಟ್ಟಕ್ಕೆ ಇಳಿದಿದೆ ಮತ್ತು ಅಂದಿನಿಂದ ಯಾವುದೇ ಸುಧಾರಣೆಯ ಲಕ್ಷಣವನ್ನು ತೋರಿಸಿಲ್ಲ. ಇಂದು(ಭಾನುವಾರ) ಬೆಳಗ್ಗೆ 7 ಗಂಟೆಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 460 ಅನ್ನು ದಾಖಲಿಸಿದೆ. ಶನಿವಾರ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 415 ರಷ್ಟಿತ್ತು.
ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಭಾಗವಾಗಿರುವ ದೆಹಲಿಯ ನೆರೆಯ ನಗರಗಳಾದ ನೋಯ್ಡಾ ಮತ್ತು ಗುರುಗ್ರಾಮ್ ಕೂಡ ಶುಕ್ರವಾರದಿಂದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ‘ತೀವ್ರ’ ಮಟ್ಟಕ್ಕೆ ಏರಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ: ದಲಿತ ಮಹಿಳೆಯ ಅತ್ಯಾಚಾರವೆಸಗಿ, ತುಂಡುತುಂಡಾಗಿ ಕತ್ತರಿಸಿ ಭೀಕರ ಹತ್ಯೆ
ನವದೆಹಲಿ ಪರಿಸರ ಸಚಿವ ಗೋಪಾಲ್ ರೈ, “ನಿರ್ಮಾಣ ಕಾರ್ಯಗಳು ಮತ್ತು ವಾಹನಗಳು ದೆಹಲಿಯೊಳಗೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು, ಮಾಲಿನ್ಯವನ್ನು ಉಂಟುಮಾಡುವ ಬಿಎಸ್ 3 ಪೆಟ್ರೋಲ್ ಮತ್ತು ಬಿಎಸ್ 4 ಡೀಸೆಲ್ ವಾಹನಗಳ ಮೇಲೆ ನಿಷೇಧವನ್ನು ಜಾರಿಗೊಳಿಸುವುದು ಸೇರಿದಂತೆ ಕಸ ಮತ್ತು ಜೈವಿಕ ವಸ್ತುಗಳನ್ನು ಸಹ ನಿಯಂತ್ರಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
As pollution levels continue to remain high, primary schools in Delhi will stay closed till 10th November.
For Grade 6-12, schools are being given the option of shifting to online classes.
— Atishi (@AtishiAAP) November 5, 2023
“ಜನರು ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಎನ್‌ಸಿಆರ್‌ನಲ್ಲೂ ಗ್ರಾಪಂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಾವು ಕೇಂದ್ರ ಪರಿಸರ ಸಚಿವರಿಗೆ ಮನವಿ ಮಾಡಿದ್ದೇವೆ. ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ದೆಹಲಿ ಮತ್ತು ಎನ್‌ಸಿಆರ್ ಒಳಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ನಮ್ಮ ಪ್ರಯತ್ನವಾಗಿದೆ” ರೈ ಹೇಳಿದ್ದಾರೆ.
ಪಿಎಂ 2.5ನ ಸರಾಸರಿ ಮಟ್ಟ ಒಂದು ಘನ ಮೀಟರ್‌ಗೆ 5 ಮೈಕ್ರೋ ಗ್ರಾಮ್‌ಗಳಿಷ್ಟಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳುತ್ತದೆ. ಆದರೆ, ದೆಹಲಿಯಲ್ಲಿ ಪಿಎಂ 2.5 ಪ್ರಮಾಣ ಸರಾಸರಿ ಮಿತಿಗಿಂತ 80–100 ಪಟ್ಟು ಹೆಚ್ಚಾಗಿದೆ.
ದೆಹಲಿಯಲ್ಲಿ ಮಾಲಿನ್ಯಕಾರಕ ‘ಪಿಎಂ 2.5’ನ ಮಟ್ಟವು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿರುವ ಸರಾಸರಿ ಮಿತಿಗಿಂತ 80ಪಟ್ಟು ಹೆಚ್ಚಾಗಿದೆ.