ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ತುರುವೇಕೆರೆ ಪೊಲೀಸರ ಕಿರುಕುಳದಿಂದಲೇ ಸಾವು ಸಂಭವಿಸಿದೆ ಎಂದು ಮೃತರ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಅ.23ರಂದು ವಿಠಲದೇವರಹಳ್ಳಿ ಬಳಿ ಇಸ್ಪಿಟ್ ಜೂಜಾಟದ ಅಡ್ಡೆಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಾಲ್ವರನ್ನ ವಶಕ್ಕೆ ಪಡೆದು, ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಾಗ ಕುಮಾರ್ ಆಚಾರ್ ಮೃತಪಟ್ಟಿದ್ದರು. ಪೊಲೀಸರೇ ಕುಮಾರ್ ಆಚಾರ್ ಸಾವಿಗೆ ಕಾರಣ ಎಂದು ಸಂಬಂಧಿಕರು ಹಾಗೂ ಮಾಜಿ ಶಾಸಕ ಮಸಾಲೆ ಜಯರಾಮ್ ಆರೋಪಿಸಿದ್ದಾರೆ.
ಕುಮಾರ್ ಆಚಾರ್ನ ಸಾವನ್ನು ಸಹಜ ಸಾವು ಎಂದು ಪೊಲೀಸರು ದಾಖಲಿಸಿದ್ದಾರೆ. ಸಾವಿಗೆ ನ್ಯಾಯ ಒದಗಿಸಿ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.