ಒಮ್ಮೊಮ್ಮೆ ಗುಲಾಮಿತನ ಅನ್ನಿಸಿಬಿಡುತ್ತದೆ: ಬಿಜೆಪಿ ಸಂಸದ ಕರಡಿ ಸಂಗಣ್ಣ ಅಸಮಾಧಾನ

Date:

ಸ್ವಪಕ್ಷದ ಬಗ್ಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅಸಮಾಧಾನ ಹೊರಹಾಕಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ನ್ಯಾಯಾಲಯ ಕಟ್ಟಡ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ”ಬಿಜೆಪಿ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಸಿ. ಪಾಟೀಲ್, ಸಚಿವ ಗೋವಿಂದ ಕಾರಜೋಳ ಅವರಿದ್ದಾಗಲೂ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿಸಲು ಆಗಲಿಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೆಹಲಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯ: ನ.10ರವರೆಗೆ ಪ್ರಾಥಮಿಕ ಶಾಲೆ ಮುಚ್ಚಲು ಸರ್ಕಾರ ಆದೇಶ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ನಾನು ಅಂದು ನನ್ನ ಸ್ವಾಭಿಮಾನಕ್ಕೆ‌ ಧಕ್ಕೆಯಾಗಿ ಹೊರಬರಬೇಕೆಂದಿದ್ದೆ. ಆದರೆ ಪಕ್ಷದ ಚೌಕಟ್ಟಿನಲ್ಲಿ ಇರಬೇಕಿದ್ದರಿಂದ ಅಲ್ಲೇ ಇದ್ದೆ. ಒಮ್ಮೊಮ್ಮೆ ಗುಲಾಮಿತನ ಎಂದು ಅನ್ನಿಸಿಬಿಡುತ್ತದೆ. ನಮ್ಮ ಜಿಲ್ಲೆಯಲ್ಲಿ ನನ್ನನ್ನೂ ಸೇರಿದಂತೆ ಒಬ್ಬರೂ ಡೈನಾಮಿಕ್​ ಲೀಡರ್ ಇಲ್ಲದೇ ಇರುವುದು ಜಿಲ್ಲೆಯ ಅಭಿವೃದ್ದಿಗೆ‌ ಹಿನ್ನಡೆ ಆಗಲು ಕಾರಣ” ಎಂದು ಅವರು ಹೇಳಿದ್ದಾರೆ.

ಇನ್ನು ಸಂಗಣ್ಣ ಕರಡಿ ಅವರ ಈ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅವರು ಈ ಹಿಂದೆ ”ಹಾಲಿ ಸಂಸದರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಇಲ್ಲ” ಎಂದು ಹೇಳಿದ್ದ ಸ್ವಪಕ್ಷದ ಶಾಸಕ ಯತ್ನಾಳ್‌ ವಿರುದ್ಧವೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸಂಸದರಿಗೆ ಪಕ್ಷದ ಗರ್ಭಗುಡಿಯ ದರ್ಶನ ಆಗಿಲ್ಲಾನಿಸುತ್ತದೆ,,,ಅಲ್ಲಿ ಜನರ ಕಷ್ಠಗಳ ಬಗ್ಗೆ, ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ,,,ಮಾತಾಡಬಾರದು,, ಹಿಂದೂ ಮುಸ್ಲಿಂ, ಲವ್ ಜಿಹಾದ್, ಹಲಾಲ್ ಜಟಕಾ, ಇಸ್ರೇಲ್, ಪಾಕಿಸ್ತಾನ ಜಪ ಮಾಡಬೇಕು,,, ರಾಜ್ಯದ ಜನರಿಗೆ ಬೇಕಾದದ್ದನ್ನು ಏನು ಕೇಳಬಾರದು,, ಪ್ರಶ್ನೆ ಮಾಡಬಾರದು,,,,ಈ ಗುಟ್ಟು ಯತ್ನಾಳ್ ಗೆ ಗೊತ್ತಾಯಿತು ಬೆಳಗಿನಿಂದ ಸಂಜೆಯವರೆಗೆ ಪುರೋಹಿತರನ್ನು ಮೆಚ್ಚಿಸಲು ಸ್ವಾಭಿಮಾನ ಬಿಟ್ಟು ಸರ್ಕ್ಸಸ್ ಮಾಡುವರು,,, ಇಂಥಾ ಜನಪ್ರತಿನಿಧಿಗಳು ರಾಜ್ಯಕ್ಕೆ ಬೇಕಾ,,, ಜನರು ಗಂಭೀರವಾಗಿ ವಿಚಾರಿಸಬೇಕಾದ ಸಮಯ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ | 31 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ

ಹೈದರಾಬಾದ್‌ನಲ್ಲಿ 31 ವರ್ಷದ ವ್ಯಕ್ತಿಯನ್ನು ಅಪರಿಚಿತ ವ್ಯಕ್ತಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ....

ಬ್ಯಾಂಕ್‌ಗಳಿಗೆ 20 ಸಾವಿರ ಕೋಟಿ ರೂ. ವಂಚನೆ: ಏಮ್‌ಟೆಕ್ ಗ್ರೂಪ್ ಕಚೇರಿಗಳ ಮೇಲೆ ಇ.ಡಿ ದಾಳಿ

.ಡಿಸಾಲ ಪಡೆದು ಬ್ಯಾಂಕ್‌ಗಳಿಗೆ ಇಪ್ಪತ್ತು ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು...

ಭಾರತದ ಭವಿಷ್ಯಕ್ಕೆ ಮೋದಿ ಸರ್ಕಾರದ ‘ಕೊಳ್ಳಿ’

ಭಾರತದ ಭವಿಷ್ಯದ ವೈದ್ಯರ ಆಯ್ಕೆಯನ್ನು ನಿಯಂತ್ರಿಸುವ ಮೂಲಕ ಮೋದಿ ಆಡಳಿತವು ತನ್ನ...

ನೀಟ್ ಅಕ್ರಮ: ಹೈಕೋರ್ಟ್ ವಿಚಾರಣೆಗಳಿಗೆ ಸುಪ್ರೀಂ ತಡೆ, ಕೌನ್ಸೆಲಿಂಗ್ ಪ್ರಕ್ರಿಯೆ ಮುಂದುವರಿಕೆ

ನೀಟ್ ಪರೀಕ್ಷೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ವಿಚಾರಣೆಗಳನ್ನು ವರ್ಗಾಯಿಸಬೇಕೆಂದು...