ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಭಾರತದ ಮಹಿಳಾ ಹಾಕಿ ತಂಡ ಜಪಾನ್ ತಂಡವನ್ನು 4-0 ಗೋಲುಗಳಿಂದ ಸೋಲಿಸುವ ಮೂಲಕ ಎರಡನೇ ಬಾರಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.
ಭಾನುವಾರ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳೆಯರ ಹಾಕಿ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಸಂಗೀತಾ ಕುಮಾರಿ (17ನೇ ನಿಮಿಷ), ನೇಹಾ (46ನೇ ನಿಮಿಷ), ಲಾರೆಮ್ಸಿಯಾಮಿ (57ನೇ ನಿಮಿಷ) ಮತ್ತು ವಂದನಾ ಕಟಾರಿಯಾ (60ನೇ ನಿಮಿಷ) ಅವರ ಗೋಲುಗಳ ನೆರವಿನಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಭಾರತ ತಂಡ ತನ್ನದಾಗಿಸಿಕೊಂಡಿತು.
17ನೇ ನಿಮಿಷದಲ್ಲಿ ಸಂಗೀತಾ ಅದ್ಭುತ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಒಂದು ಗೋಲಿನಿಂದ ಹಿಂದೆ ಬಿದ್ದ ಜಪಾನ್ ತನ್ನ ಆಟವನ್ನು ತೀವ್ರಗೊಳಿಸಿ 22ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಆದರೆ ಭಾರತೀಯ ನಾಯಕಿ ವಿಡಿಯೋ ರೆಫರಲ್ ತೆಗೆದುಕೊಂಡರು. ಆಗ ರೆಫ್ರಿ ಅವರು ಗೋಲ್ ಫೌಲ್ ಎಂದು ಘೋಷಿಸಿದರು.
ನೇಹಾ 46ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಎರಡನೇ ಗೋಲು ತಂದುಕೊಟ್ಟರು. 52ನೇ ನಿಮಿಷದಲ್ಲಿ ಜಪಾನ್‌ಗೆ ಗೋಲು ಗಳಿಸುವ ಅವಕಾಶ ಸಿಕ್ಕಿದರು ಭಾರತದ ಗೋಲ್‌ಕೀಪರ್ ಸವಿತಾ ಪುನಿಯಾ ಅವರು ಎದುರಾಳಿ ತಂಡ ಗಳಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.
It's GOLD for #WomenInBlue 🙌🥇🇮🇳#HockeyIndia #IndiaKaGame #JWACT2023 pic.twitter.com/TyHgoHigaC
— Hockey India (@TheHockeyIndia) November 5, 2023
ಈ ಸುದ್ದಿ ಓದಿದ್ದೀರಾ? ಅಮಾಯಕ ಕಂದಮ್ಮಗಳು ಸಾಯುತ್ತಿವೆ, ಜಗತ್ತು ಮೌನವಾಗಿದೆ: ಕ್ರಿಕೆಟಿಗ ಇರ್ಫಾನ್ ಪಠಾಣ್ ನೋವಿನ ನುಡಿ
57ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಮೂಲಕ ಮೂರನೇ ಗೋಲು ದಾಖಲಿಸಿತು. 60ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ 4-0 ಅಂತರದ ಜಯ ತಂದುಕೊಟ್ಟರು.
ಭಾರತದ ದೀಪ್ ಗ್ರೇಸ್ ಎಕ್ಕಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾದರೆ, ಜಾರ್ಖಂಡ್‌ನ ಸಂಗೀತಾ ಕುಮಾರಿ ರೈಸಿಂಗ್ ಸ್ಟಾರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಚಾಂಪಿಯನ್ ಆದ ಭಾರತ ತಂಡದ ಸದಸ್ಯರಿಗೆ ತಲಾ 3 ಲಕ್ಷ ರೂ. ಮತ್ತು ನೆರವು ಸಿಬ್ಬಂದಿಗೆ ತಲಾ 1.5 ರೂ. ಲಕ್ಷ ಬಹುಮಾನವನ್ನು ಭಾರತದ ಹಾಕಿ ಸಂಸ್ಥೆ ಘೋಷಿಸಿದೆ.
ಚೀನಾಗೆ ಕಂಚು
ದಕ್ಷಿಣ ಕೊರಿಯಾ ತಂಡದವರ ಸ್ಫೂರ್ತಿಯುತ ಸವಾಲನ್ನು ಮೀರಿ ನಿಂತ ಚೀನಾ ತಂಡ ಟೂರ್ನಿಯಲ್ಲಿ ಕಂಚು ಜಯಿಸಿತು. ತೀವ್ರ ಪೈಪೋಟಿಯಲ್ಲಿ ಕೊರಿಯಾವನ್ನು 2-1 ಗೋಲುಗಳಿಂದ ಮಣಿಸಿದ ಚೀನಾ, ತೃತೀಯ ಸ್ಥಾನ ಗಳಿಸಿತು.
Heartiest congratulations to the Women’s Hockey Team for lifting the Asian Champions Trophy!#AsianChampionsTrophy
— Anil Kumble (@anilkumble1074) November 5, 2023
ಅನಿಲ್ ಕುಂಬ್ಳೆ ಶ್ಲಾಘನೆ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ವನಿತೆಯರ ತಂಡವನ್ನು ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಶ್ಲಾಘಿಸಿದ್ದಾರೆ.