ಸಫಾಯಿ ಕರ್ಮಚಾರಿ (ಮೆಹೇತರ) ಸಮಾಜದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಜಿಲ್ಲೆಯಲ್ಲಿ ಮೇಹೆತರ ಸಮಾಜದವರು ಸ್ವಚ್ಛತೆ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರ ಸಭೆಯಲ್ಲಿ ಸ್ವಚ್ಛತೆಯ ಕಾರ್ಯಗಳಿಗೆ ಈ ಸಮಾಜವನ್ನ ಕಡೆಗಣನೆ ಮಾಡಲಾಗುತ್ತಿದ್ದೆ. ನಗರ ಸಭೆಯಿಂದ ನಿರ್ಮಿಸಿರುವ ಶೌಚಾಲಯಗಳ ಟೆಂಡರ್ ಪಡೆದ ವ್ಯಕ್ತಿಗಳು ಹೊರ ರಾಜ್ಯಗಳ ಜನರನ್ನ ಕರೆ ತಂದು ಕೆಲಸ ಮಾಡಿಸುತ್ತಾರೆ. ಆದರೆ ಇಲ್ಲಿಯ ಮೂಲ ನಿವಾಸಿಗಳಿಗೆ ಸ್ವಚ್ಛತೆಯ ಕೆಲಸ ಸಿಗುತ್ತಿಲ್ಲ” ಎಂದು ಮುಖಂಡ ಈಶ್ವರ ಸಿಂಗ್ ಠಾಕೂರ್ ಬೇಸರ ವ್ಯಕ್ತಪಡಿಸಿದರು.
“ಹೀಗೆ ಮುಂದುವರೆದರೆ ಮೆಹೆತರ ಸಮಾಜ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ. ಅದನ್ನ ಕೂಡಲೇ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಮತ್ತು ಮೇಹೇತರ್ ಸಮಾಜದ ಬೇಡಿಕೆಗಳನ್ನು ಈಡೇರಿಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕೆಇಎ ಪರೀಕ್ಷಾ ಅಕ್ರಮ | ಪೊಲೀಸರನ್ನೇ ಸಿನೆಮಾ ಶೈಲಿಯಲ್ಲಿ ಯಮಾರಿಸುತ್ತಿರುವ ಆರ್ ಡಿ ಪಾಟೀಲ್
ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಶ್ವರ ಸ್ವಾಮಿ, ವಿರೂಪಾಕ್ಷ ಗಾದಗಿ, ಮೇಹೆತರ ಸಮಾಜದ ಪ್ರಮುಖರಾದ ದೀಪಕ್ ಸಿಂಗ್, ಮದನ ಪಾಲ್ ಮತ್ತಿತರು ಉಪಸ್ಥಿತರಿದ್ದರು.