ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಭರ್ಜರಿ ಶತಕ ಹಾಗೂ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ಐಕದಿನ ವಿಶ್ವಕಪ್ ಟೂರ್ನಿಯ ತನ್ನ ಏಳನೇ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 160 ರನ್‌ಗಳ ಭಾರಿ ಅಂತರದಿಂದ ಜಯಗಳಿಸಿತು.
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 340 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನೆದರ್ಲ್ಯಾಂಡ್ಸ್ 37.2 ಓವರ್‌ಗಳಲ್ಲಿ 179 ರನ್‌ಗಳಿಗೆ ಆಲೌಟ್ ಆಯಿತು.
ತೇಜ ನಿಡಮನೂರು(41), ನಾಯಕ ಸ್ಕಾಟ್ ಎಡ್ವರ್ಡ್ಸ್(38), ವೆಸ್ಲಿ ಬ್ಯಾರೆಸಿ(37) ಹಾಗೂ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (33) ಬ್ಯಾಟ್ಸ್‌ಮನ್‌ಗಳು ಮಾತ್ರ ಒಂದಷ್ಟು ಸಮಯ ಆಟವಾಡಿದರು.
ಇಂಗ್ಲೆಂಡ್ ಪರ ಅದಿಲ್ ರಶೀದ್ 54/3 , ಮೋಹಿನ್ ಅಲಿ 42/3 , ಡೇವಿಡ್ ವಿಲ್ಲಿ 19/2 ವಿಕೆಟ್ ಗಳಿಸಿ ನೆದರ್ಲ್ಯಾಂಡ್ಸ್ ಶೀಘ್ರ ಪತನಕ್ಕೆ ಕಾರಣರಾದರು.
ಈಗಾಗಲೇ ಸೆಮಿಪೈನಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದಿರುವ ಇಂಗ್ಲೆಂಡ್ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿದೆ. ತನ್ನ ಕೊನೆಯ ಪಂದ್ಯವನ್ನು ನ.11 ರಂದು ಪಾಕ್ ವಿರುದ್ಧ ಆಡಲಿದೆ.
An emphatic win in Pune breaks the streak of five straight #CWC23 losses for England 👌#ENGvNED 📝: https://t.co/03fpOlFJkO pic.twitter.com/EPNbrecZVW
— ICC (@ICC) November 8, 2023
ಸೆಮಿಫೈನಲ್ ಪ್ರವೇಶಕ್ಕೆ ಒಂದಿಷ್ಟು ಆಸೆ ಹೊಂದಿದ್ದ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ವಿರುದ್ಧ ಸೋಲುವುದರೊಂದಿಗೆ ಅಂತಿಮ ನಾಲ್ಕರ ಘಟ್ಟದ ಕನಸು ಕಮರಿ ಹೋಯಿತು. ಡಚ್ಚರು ತನ್ನ ಕೊನೆಯ ಪಂದ್ಯವನ್ನು ನ.12 ರಂದು ಬೆಂಗಳೂರಿನಲ್ಲಿ ಭಾರತದ ವಿರುದ್ಧ ಆಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಂದೇ ಬಾಲ್‌ಗೆ ಎರಡು ವಿಕೆಟ್: ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ‘ಟೈಮ್ಡ್ ಔಟ್’ಗೆ ಮ್ಯಾಥ್ಯೂಸ್ ಔಟ್
ಬೆನ್ ಸ್ಟೋಕ್ಸ್ ಸ್ಫೋಟಕ ಶತಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ ಭರ್ಜರಿ ಶತಕ ಹಾಗೂ ಡೇವಿಡ್ ಮಲನ್, ಕ್ರಿಸ್ ವೋಕ್ಸ್ ಆಕರ್ಷಕ ಅರ್ಧ ಶತಕಗಳ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 339 ರನ್ ಕಲೆ ಹಾಕಿತು.
ಆರಂಭದಲ್ಲಿ ಡೇವಿಡ್ ಮಲನ್ ಕೇವಲ 74 ಎಸೆತಗಳಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 87 ರನ್ ಗಳಿಸಿ ಉಪಯುಕ್ತ ನೆರವು ನೀಡಿದರು. ನಂತರ ಕ್ರಿಸ್ ವೋಕ್ಸ್ ಜೊತೆಗೂಡಿ ಏಳನೇ ವಿಕೆಟ್‌ಗೆ 129 ರನ್‌ಗಳ ಅಮೂಲ್ಯ ಜೊತೆಯಾಟವಾಡಿದ ಬೆನ್ ಸ್ಟೋಕ್ಸ್ ತಂಡದ ಮೊತ್ತ 300 ದಾಟಲು ನೆರವಾದರು. ಸ್ಟೋಕ್ಸ್ ಕೇವಲ 84 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸ್ಫೋಟಕ ಸಿಕ್ಸರ್ ಸಹಿತ 108 ರನ್ ಸಿಡಿಸಿದರು. ಕ್ರಿಸ್ ವೋಕ್ಸ್(51) ಕೂಡ ಆಕರ್ಷಕ ಅರ್ಧ ಶತಕ ಗಳಿಸಿದರು.
ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡ್ 3 ವಿಕೆಟ್ ಪಡೆದರೆ, ಆರ್ಯನ್ ದತ್ ಮತ್ತು ವಾನ್ ಬೀಕ್ ತಲಾ 2 ವಿಕೆಟ್ ಕಬಳಿಸಿದರು.
A commanding maiden @cricketworldcup ton from Ben Stokes in Pune 👊@mastercardindia Milestones 🏏#CWC23 | #ENGvNED pic.twitter.com/V8SUH8t758
— ICC (@ICC) November 8, 2023