ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಏಕದಿನ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯದಲ್ಲೂ ಕೂಡ ನೆದರ್‌ಲ್ಯಾಂಡ್ಸ್ ವಿರುದ್ಧವೂ ಟೀಮ್ ಇಂಡಿಯಾ 160 ರನ್‌ಗಳ ಭರ್ಜರಿ ದಾಖಲಿಸುವ ಮೂಲಕ ಲೀಗ್ ಮಟ್ಟದಲ್ಲಿ ಆಡಿರುವ ಎಲ್ಲ 9 ಪಂದ್ಯಗಳಲ್ಲಿ ಯಾವುದೇ ಸೋಲು ಕಾಣದೆ ಅಜೇಯರಾಗಿ ಉಳಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾ, ಕೆ ಎಲ್ ರಾಹುಲ್-ಶ್ರೇಯಸ್ ಅಯ್ಯರ್ ಭರ್ಜರಿ ಶತಕದ ನೆರವಿನಿಂದ ನೆದರ್‌ಲ್ಯಾಂಡ್ಸ್ ಗೆಲುವಿಗೆ 411 ರನ್‌ಗಳ ಬೃಹತ್ ಗುರಿ ನೀಡಿತ್ತು.
Who else but Captain Rohit Sharma with the final wicket of the match! 😎#TeamIndia complete a 160-run win in Bengaluru 👏👏
Scorecard ▶️ https://t.co/efDilI0KZP#CWC23 | #MenInBlue | #INDvNED pic.twitter.com/PzyQTi3QZV
— BCCI (@BCCI) November 12, 2023
ಈ ಗುರಿಯನ್ನು ಬೆನ್ನತ್ತಿದ ನಾಯಕ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ಡಚ್ಚರ ತಂಡ, 47.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 250 ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಟೀಮ್ ಇಂಡಿಯಾ 160 ರನ್‌ಗಳ ಭರ್ಜರಿ ದಾಖಲಿಸಿತು.
ನೆದರ್‌ಲ್ಯಾಂಡ್ಸ್ ಪರ ಬ್ಯಾಟಿಂಗ್‌ನಲ್ಲಿ ತೇಜ ನಿಡಮನೂರು ಅರ್ಧ ಶತಕ(54 ರನ್) ಗಳಿಸಿ, ರೋಹಿತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಸೈಬ್ರಾಂಡ್ ಎಂಗಲ್ಬ್ರೆಕ್ಟ್ 45 ರನ್, ಕಾಲಿನ್ ಅಕರ್ಮನ್ 35, ಮ್ಯಾಕ್ಸ್ ಓಡೌಡ್ 30, ಸ್ಕಾಟ್ ಎಡ್ವರ್ಡ್ಸ್ 17 ರನ್ ಗಳಿಸಿದರು.
INDIA FINISHED GROUP STAGES UNBEATEN IN THE 2023 WORLD CUP….!!!! pic.twitter.com/3D9e7IDkc3
— Mufaddal Vohra (@mufaddal_vohra) November 12, 2023
ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್, ಜಸ್‌ಪ್ರೀತ್ ಬುಮ್ರಾ, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರೆ, ಅಪರೂಪಕ್ಕೆ ಬೌಲಿಂಗ್ ನಡೆಸಿದ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
More bowling options in Bengaluru 👌👌
Shubman Gill 🤝 Suryakumar Yadav
Follow the match ▶️ https://t.co/efDilI0KZP#TeamIndia | #CWC23 | #MenInBlue | #INDvNED pic.twitter.com/Zlt7EzlqFW
— BCCI (@BCCI) November 12, 2023
ಟೀಮ್ ಇಂಡಿಯಾ ಪರ ಬ್ಯಾಟಿಂಗ್‌ನಲ್ಲಿ ಔಟಾಗದೆ 128*(94 ಎಸೆತ, 5 ಸಿಕ್ಸ್, 10 ಬೌಂಡರಿ) ರನ್ ಗಳಿಸಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
9 ಮಂದಿ ಆಟಗಾರರಿಂದ ಬೌಲಿಂಗ್
ನೆದರ್‌ಲ್ಯಾಂಡ್ಸ್ ವಿರುದ್ಧದ ಇಂದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಇಬ್ಬರನ್ನು ಬಿಟ್ಟರೆ ಒಂಭತ್ತು ಮಂದಿ ಆಟಗಾರರು ಬೌಲಿಂಗ್ ನಡೆಸಿದ್ದು ವಿಶೇಷವಾಗಿತ್ತು. ಶುಭಮನ್ ಗಿಲ್, ಸೂರ್ಯ ಕುಮಾರ್ ಯಾದವ್ ಕೂಡ ಬೌಲಿಂಗ್ ನಡೆಸಿದ್ದು, ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿತು.
ಸೆಮಿಫೈನಲ್‌ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಟೀಮ್ ಇಂಡಿಯಾ ಎದುರಿಸಲಿದೆ.