ವಿಶ್ವಕಪ್ನಲ್ಲಿ ನೀರಸ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ತಂಡದ ನಾಯಕತ್ವವವನ್ನು ಬಾಬರ್ ಆಝಂ ತ್ಯಜಿಸಿದ ಬೆನ್ನಲ್ಲೇ, ನೂತನ ನಾಯಕನಾಗಿ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿಯವರಿಗೆ ನೀಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಶಾಹೀನ್ ಶಾ ಅಫ್ರಿದಿ ಟಿ20 ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ. ಶಾನ್ ಮಸೂದ್ ಟೆಸ್ಟ್ ನಾಯಕತ್ವ ವಹಿಸಲಿದ್ದಾರೆ ಎಂದು ತಿಳಿಸಿದೆ. ಎಲ್ಲ ಮಾದರಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ಬಾಬರ್ ಆಝಂ ಘೋಷಿಸಿದ ಬೆನ್ನಲ್ಲೇ ಈ ನೇಮಕ ಮಾಡಲಾಗಿದೆ. ಆದರೆ ಏಕದಿನ ಪಂದ್ಯದ ನಾಯಕ ಯಾರು ಎಂದು ಪಿಸಿಬಿ ಇನ್ನೂ ಘೋಷಿಸಿಲ್ಲ.
Presenting our captains 🇵🇰@shani_official has been appointed Test captain while @iShaheenAfridi will lead the T20I side. pic.twitter.com/wPSebUB60m
— Pakistan Cricket (@TheRealPCB) November 15, 2023
ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಮತ್ತು ಬಾಬರ್ ಅಝಮ್ ಅವರು ಇಂದು ಲಾಹೋರ್ನಲ್ಲಿರುವ ಪಿಸಿಬಿ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ ನಾನಾ ವಿಚಾರ ಸೇರಿದಂತೆ ವಿಶ್ವಕಪ್ ಪ್ರದರ್ಶನದ ಕುರಿತು ಚರ್ಚಿಸಲು ಸಭೆ ನಡೆಸಿದರು. ಬೌಲರ್ ಶಾಹೀನ್ ಶಾ ಅಫ್ರಿದಿ ಅವರು ಪಾಕ್ನ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿಯವರ ಅಳಿಯನಾಗಿದ್ದಾರೆ.
‘ಟೆಸ್ಟ್ ನಾಯಕನಾಗಿ ಮುಂದುವರಿಯಲು ಬಾಬರ್ ಅವರನ್ನು ಕೇಳಲಾಯಿತು. ಆದರೆ ಅವರು ಅದನ್ನು ನಿರಾಕರಿಸಿದರು. ಅವರ ನಿರ್ಧಾರವನ್ನು ಪಿಸಿಬಿ ಗೌರವಿಸುತ್ತದೆ. ಹಾಗಾಗಿ, ವೈಟ್-ಬಾಲ್ ಕ್ರಿಕೆಟ್ನ ನಾಯಕತ್ವದಿಂದ ಅವರನ್ನು ಮುಕ್ತಿಗೊಳಿಸಲಾಗಿದೆ. ಆಟಗಾರನಾಗಿ ಬೆಳೆಯಲು ನಾವು ಬೆಂಬಲಿಸಲಿದ್ದೇವೆ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕ್ರಿಕೆಟ್ | ವಿಶ್ವಕಪ್ನಲ್ಲಿ ನೀರಸ ಪ್ರದರ್ಶನ: ಪಾಕ್ ತಂಡದ ನಾಯಕತ್ವ ತ್ಯಜಿಸಿದ ಬಾಬರ್ ಆಝಂ
ಬಾಬರ್ ಅವರ ನಾಯಕತ್ವದಲ್ಲಿ ಪಾಕ್ ತಂಡವು ಈ ಬಾರಿಯ ವಿಶ್ವಕಪ್ನಲ್ಲಿ ದಯನೀಯವಾಗಿ ವಿಫಲವಾಗಿದ್ದು, ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೀಡಾಗಿತ್ತು. ವಿಶ್ವಕಪ್ನಲ್ಲಿ ಆಡಿದ್ದ 9 ಲೀಗ್ ಪಂದ್ಯಗಳಲ್ಲಿ ಐದರಲ್ಲಿ ಸೋತು, 4ರಲ್ಲಿ ಮಾತ್ರ ಜಯ ದಾಖಲಿಸಿತ್ತು. ಆ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆಯುವುದರೊಂದಿಗೆ ಸೆಮಿಫೈನಲ್ಗೇರಲು ವಿಫಲವಾಗಿತ್ತು.
Babar Azam meets Chairman PCB Management Committee
Details here⤵️https://t.co/tqyYCbjrEM
— PCB Media (@TheRealPCBMedia) November 15, 2023
ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ನಲ್ಲಿ ಮುಂಬರುವ ಸರಣಿಗಳಿಗೆ ಹೊಸ ಕೋಚಿಂಗ್ ಸಿಬ್ಬಂದಿಯನ್ನು ಸರಿಯಾದ ಸಮಯದಲ್ಲಿ ಘೋಷಿಸಲಿದ್ದೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.