ವಿಜಯಪುರ | ಅಂಗನವಾಡಿ ನೌಕರರ ಹೋರಾಟ; ಖಾತೆಗೆ ಜಮೆಯಾಯಿತು 2019ರ ಗೌರವ ಧನ

Date:

Advertisements

ಮುದ್ದೇಬಿಹಾಳ ತಾಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ತಮ್ಮ 2019ರ ಜುಲೈ ತಿಂಗಳ ಗೌರವ ಧನವನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಬೆನ್ನಲ್ಲೇ, ನೌಕರರ ಖಾತೆಗೆ ಜಮೆ ಮಾಡಲಾಗಿದ್ದು, ಹೋರಾಟ ಕೈಬಿಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಬರಬೇಕಾಗಿದ್ದ 2019ರ ಜುಲೈ ತಿಂಗಳ ಗೌರವ ಧನ ಪಾವತಿ ಮಾಡಿರಲಿಲ್ಲ. ಈ ಸಮಸ್ಯೆಯನ್ನು ಸಂಘವು ಕೈಗೆತ್ತಿಕೊಂಡು ವಿವಿಧ ಹಂತದ ಹೋರಾಟಗಳನ್ನು ನಡೆಸಿತ್ತು.

ಇತ್ತೀಚೆಗೆ ನಡೆದ ಒಂದು ವಾರದ ಸತತ ಹೋರಾಟ ಮತ್ತು ಅದರ ನಂತರ ಆದ ಫಾಲವಪ್ ನಿಂದಾಗಿ ಸರ್ಕಾರದ ಹಂತದಲ್ಲಿ ಮತ್ತು ಇಲಾಖೆ ಮಟ್ಟದಲ್ಲಿ ವಿವಿಧ ಸಭೆಗಳನ್ನು ಸಂಘ ನಡೆಸಿತ್ತು. ಇದರ ಫಲವಾಗಿ, ಮುದ್ದೇಬಿಹಾಳ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ 2019ರ ಜುಲೈ ತಿಂಗಳ ಗೌರವ ಧನವನ್ನು ಇಲಾಖೆ ಅವರವರ ಬ್ಯಾಂಕ್ ಖಾತೆಗೆ ಜಮ ಮಾಡಿದೆ.

Advertisements

ಜಯ ಸಿಗುವವರೆಗೂ ನಿರಂತರವಾಗಿ ಹೋರಾಡಿ ಗೆದ್ದಿರುವ ಮುದ್ದೇಬಿಹಾಳ ತಾಲೂಕಿನ ಎಲ್ಲಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಸಂಘದ ರಾಜ್ಯ ಸಮಿತಿಯು ಅಭಿನಂದಿಸಿದೆ.

ಈ ವೇಳೆ ರಾಜ್ಯ ಅಧ್ಯಕ್ಷರು ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ (ಎಐಯುಟಿಯುಸಿ) ಉಮಾದೇವಿ ಎಂ, ಮಲ್ಲಿಕಾರ್ಜುನ್ ಎಚ್. ಟಿ, ನಿಂಗಮ್ಮ ಹಿರೇಮಠ್, ಭರತ್ ಕುಮಾರ್, ಸಾವಿತ್ರಿ ನಾಗರತ್ತಿ, ಗುರುಬಾಯಿ  ಮಲಗೌಡ್ರ್, ಕಲಾವತಿ ಪಾದಗಟ್ಟಿ, ಕಲಾವತಿ ವಂದಲಾ, ಸುರೇಖಾ ಹಿರೇಮಠ್ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

ಶಿವಮೊಗ್ಗ | 15 ವರ್ಷದ ಬಳಿಕ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಮಾರುತಿ ವರ್ಗಾವಣೆ!

ಶಿವಮೊಗ್ಗ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ 15...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Download Eedina App Android / iOS

X