19 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ಜಾಮೀನಿನ ಮೇಲೆ ಹೊರಬಂದಿದ್ದ ಇಬ್ಬರು ದುರುಳರು ಸಂತ್ರಸ್ತೆಯನ್ನು ಹಾಡಹಗಲೇ ಅಮಾನುಷವಾಗಿ ಕೊಲೆ ಮಾಡಿರುವ ಆಘಾತಕಾರಿಯಾದ ಘಟನೆ ಉತ್ತರ ಪ್ರದೇಶ ರಾಜ್ಯದ ಕೌಶಾಂಬಿ ಜಿಲ್ಲೆಯ ದೇರ್ಹಾ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಅಶೋಕ್ ಮತ್ತು ಪವನ್ ನಿಶಾದ್ ಕೊಲೆ ಮಾಡಿದ್ದ ಹಂತಕರು. ಹತ್ಯೆಯ ಕೆಲವು ದಿನಗಳ ಮೊದಲು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕೊಲೆಯಾದ ಸಂತ್ರಸ್ತೆಯನ್ನು ಈ ಆರೋಪಿಗಳು ಮೂರು ವರ್ಷದ ಹಿಂದೆ ಅತ್ಯಾಚಾರವೆಸಗಿದ್ದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡುವಂತೆ ಯುವತಿಗೆ ಈ ಆರೋಪಿಗಳು ಕಿರುಕುಳ ನೀಡುತ್ತಿದ್ದರು.
ಪವನ್ ಅವರ ಸಹೋದರ ಅಶೋಕ್ ನಿಶಾದ್ ಮತ್ತೊಂದು ಕೊಲೆ ಪ್ರಕರಣದ ಆರೋಪಿಯಾಗಿದ್ದು, ಯುವತಿಯ ಕೊಲೆಗೆ ಎರಡು ದಿನಗಳ ಮೊದಲು ಬಿಡುಗಡೆಗೊಂಡಿದ್ದಾನೆ. ಜೈಲಿನಿಂದ ಹೊರ ಬಂದ ನಂತರ ಮಹಿಳೆಗೆ ಪುನಃ ಪ್ರಕರಣವನ್ನು ವಾಪಸ್ ಪಡೆಯುವಂತೆ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಯುವತಿ ಆರೋಪಿಗಳ ಬೆದರಿಕೆಗೆ ಬಗ್ಗಲಿಲ್ಲ. ತನ್ನ ಹತ್ತಿರದ ಜಮೀನಿನಲ್ಲಿ ತನ್ನ ಕುಟುಂಬದ ಹಸುಗಳನ್ನು ಮೇಯಿಸಿ ಹಿಂತಿರುಗುತ್ತಿದ್ದಾಗ ಆರೋಪಿಗಳು ಹೊಂಚು ಹಾಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಲು ತೀವ್ರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್, ಮಧ್ಯಪ್ರದೇಶದ ಗ್ರಾಮೀಣ ಕಾರ್ಮಿಕರಿಗೆ ದೇಶದಲ್ಲೇ ಅತ್ಯಂತ ಕಡಿಮೆ ದಿನಗೂಲಿ: ಆರ್‌ಬಿಐ
ಪೊಲೀಸರು ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಆರೋಪಿಗಳನ್ನು ಬಂಧಿಸಲು ತಂಡಗಳನ್ನು ರಚಿಸಿದ್ದಾರೆ ಎಂದು ಕೌಶಾಂಬಿ ಜಿಲ್ಲಾ ಎಸ್‌ಪಿ ಶ್ರೀವಾಸ್ತವ ತಿಳಿಸಿದ್ದಾರೆ.
ಅತ್ಯಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ನಿತ್ಯ ನಿರಂತರವಾಗಿದೆ. ಅತ್ಯಾಚಾರವೆಸಗಿದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಕೊಲೆ ಮಾಡಿರುವುದು ಅಮಾನುಷ ಘಟನೆಯಾಗಿದೆ. ಉತ್ತರ ಪ್ರದೇಶದಲ್ಲಿ ಕೊಲೆಗಡುಕರು ಎಷ್ಟು ನಿರ್ಭೀತರಾಗಿದ್ದಾರೆ ಎಂದರೆ ಅವರಿಗೆ ಕಾನೂನಿನ ಭಯ ಇಲ್ಲ, ಗೌರವವಿಲ್ಲ. ಇಲ್ಲಿ, ಹೆಣ್ಣುಮಕ್ಕಳು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂದರೆ ಅವರು ತಮ್ಮ ಅನ್ಯಾಯದ ಬಗ್ಗೆ ಧ್ವನಿ ಎತ್ತಿದರೆ, ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಅಂಧಕಾರ ಕೊನೆಯಾಗುವುದು ಯಾವಾಗ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಲಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಮಾಹಿತಿಯ ಪ್ರಕಾರ, ಉತ್ತರ ಪ್ರದೇಶ ರಾಜ್ಯದಲ್ಲಿ 2021 ರಲ್ಲಿ ಮಹಿಳೆಯರ ವಿರುದ್ಧದ 56,000 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದು ಯಾವುದೇ ಇತರ ರಾಜ್ಯಕ್ಕಿಂತ ಹೆಚ್ಚು. ಇದರಲ್ಲಿ ಅತ್ಯಾಚಾರ, ಕೊಲೆ ಮತ್ತು ಆಸಿಡ್ ದಾಳಿಗಳು ಸೇರಿವೆ.
कौशाम्बी में सरेआम दो दरिंदों ने युवती की कुल्हाड़ी से काटकर हत्या कर दी।
इनमें से एक दरिंदा हत्या के मामले में अभी 2 दिन पहले ही जमानत पर बाहर आया था। तो दूसरा इसी मृतक युवती के रेप का आरोपी था।
UP में दरिंदे इस कदर बेखौफ़ हैं कि उनके मन में किसी कानून का कोई भय नहीं। कोई… pic.twitter.com/P5eligfE6T
— UP Congress (@INCUttarPradesh) November 21, 2023