- ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 13 ಕೊನೆಯ ದಿನಾಂಕ
- ನಿಗಮದಲ್ಲಿ ಸ್ಟೇಷನ್ ಕಂಟ್ರೋಲರ್/ಟ್ರೈನ್ ಆಪರೇಟರ್ 96 ಹುದ್ದೆ ಖಾಲಿ
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದಲ್ಲಿ ಖಾಲಿ ಇದ್ದ 96 ಸ್ಟೇಷನ್ ಕಂಟ್ರೋಲರ್/ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 7ರವರೆಗೆ ಅವಧಿ ವಿಸ್ತರಿಸಿದೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಅರ್ಜಿ ಸಲ್ಲಿಸಲು ನಿಗಮ ಮೇ 31ರವರೆಗೆ ಅವಕಾಶ ನೀಡಿತ್ತು. ಇದೀಗ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ.
ನಿಗಮದಲ್ಲಿ ಸ್ಟೇಷನ್ ಕಂಟ್ರೋಲರ್/ಟ್ರೈನ್ ಆಪರೇಟರ್‌ಗೆ 96 ಹುದ್ದೆಗಳು ಖಾಲಿ ಇದ್ದು, ಕೆಲಸಕ್ಕಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಮೇ 16, 2023ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ
ಮಾಸಿಕ ವೇತನ ₹35,000-82,660 ಇರಲಿದೆ.
ಪ್ರಮುಖ ದಿನಾಂಕಗಳು:
ಮೇ 16 ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 7 ಕೊನೆಯ ದಿನಾಂಕವಾಗಿದೆ.
ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 13 ಕೊನೆಯ ದಿನಾಂಕ
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಿನ್ನಕ್ಕಾಗಿ ಅಜ್ಜಿಯ ಕೊಲೆ : ಮೂವರ ಬಂಧನ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ BMTC ಕಾಂಪ್ಲೆಕ್ಸ್, K.H ರಸ್ತೆ, ಶಾಂತಿನಗರ ಬೆಂಗಳೂರು – 560027 ಕಳುಹಿಸಬೇಕು.