ಕಲಬುರಗಿ

ಕಲಬುರಗಿ | ಸಿರಿಗನ್ನಡ ವೇದಿಕೆ, ಸಾಕ್ಷಿ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ಸಮಾಗಮ ಕಾರ್ಯಕ್ರಮ

ನಗರದಲ್ಲಿ ಭಾನುವಾರ ಸಿರಿಗನ್ನಡ ವೇದಿಕೆ (ರಿ) ಜಿಲ್ಲಾ ಘಟಕ, ಕಲಬುರಗಿ ಹಾಗೂ ಸಾಕ್ಷಿ ಪ್ರತಿಷ್ಠಾನ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸಾಹಿತ್ಯ ಸಮಾಗಮ ಉಪನ್ಯಾಸ ಮಾಲಿಕೆ–೧೨ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ...

ಕಲಬುರಗಿ | ಎಲ್‌ಪಿಜಿ ದರ ಏರಿಕೆ ಖಂಡನೆ: ಸಿಪಿಐ(ಎಂ) ಆಕ್ರೋಶ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ 5 ಕೆಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಿರುವುದನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) (ಸಿಪಿಐಎಂ) ತೀವ್ರವಾಗಿ ಖಂಡಿಸಿದೆ. ಸಿಲಿಂಡರ್ ದರ ಏರಿಕೆಯು ಗ್ರಾಹಕರ ಮೇಲೆ ಅನ್ಯಾಯಕರವಾದ ಹೆಚ್ಚುವರಿ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ಇಕ್ರಮುಲ್ಲಾ ಶರೀಫ್ ನೇಮಕ

ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಕೈಗೊಂಡಿದ್ದು, ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ಇಕ್ರಮುಲ್ಲಾ ಶರೀಫ್, ಐಎಎಸ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಅವರು ಬೆಂಗಳೂರು ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿ...

ಕಲಬುರಗಿ | 2570ನೇ ವೈಶಾಖ ಬುದ್ಧ ಪೂರ್ಣಿಮಾ ದಿನಾಚರಣೆ: ಬುದ್ಧ ತತ್ವಗಳ ಅಳವಡಿಕೆಗೆ ಕರೆ

ನಗರದಲ್ಲಿ ಶುಕ್ರವಾರ ಸಿದ್ದಾರ್ಥ ಬುದ್ಧ ವಿಹಾರದಲ್ಲಿ 2570ನೇ ವೈಶಾಖ ಬುದ್ಧ ಪೂರ್ಣಿಮಾ ದಿನಾಚರಣೆಯನ್ನು ಪೂಜ್ಯ ಭಂತೇಜಿಯವರಿಂದ ಬುದ್ಧ ವಂದನೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ...

ಕಲಬುರಗಿ | ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಭಾರೀ ಅವ್ಯವಹಾರ ಆರೋಪ

ಬಡವರಿಗೆ ಸೂರು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ ಹಲವಾರು ಬಡ ಕುಟುಂಬಗಳಿಗೆ ಆಶ್ರಯವಾಗಬೇಕಿತ್ತು. ಆದರೆ ಈ ಯೋಜನೆಯಡಿ ಜೇವರ್ಗಿ ತಾಲೂಕಿನಲ್ಲಿ ಮನೆಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯ...

ಕಲ್ಯಾಣ ಕರ್ನಾಟಕದಲ್ಲಿ ಹೊಸ 6 ಜಿಲ್ಲೆ, 12 ತಾಲೂಕು ರಚನೆಗೆ ಒತ್ತಾಯ

ಭವಿಷ್ಯದ ಅಭಿವೃದ್ಧಿ ಮತ್ತು ಕ್ಷೇತ್ರ ವಿಂಗಡಣೆ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನೂ 6 ಹೊಸ ಜಿಲ್ಲೆಗಳು ಹಾಗೂ 12 ತಾಲೂಕುಗಳನ್ನು ರಚಿಸಬೇಕೆಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ. ಕೇಂದ್ರ ಸರಕಾರ...

ಕಲಬುರಗಿ | ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಅಫಜಲಪುರ ತಾಲೂಕಿನ ಅತನೂರ ಗ್ರಾಮದ ಆರ್‌ಎಂಎಸ್ ಶಾಲೆ ಸಮೀಪ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ಒಂದು ಆಕಸ್ಮಿಕವಾಗಿ ರಸ್ತೆ ಕೆಳಭಾಗದ ಹೊಲಕ್ಕೆ ಇಳಿದ ಘಟನೆ ಸಂಭವಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಅಫಜಲಪುರದಿಂದ ಕಲಬುರಗಿಯತ್ತ...

ಕಲಬುರಗಿ | ಕೌಟುಂಬಿಕ ಕಲಹ : ಪತ್ನಿ ಕೊಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತಿ

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಗಂಡ ಪುಟ್ಟ ಮಗುವಿನೊಂದಿಗೆ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ಬಳಿ ಸಂಭವಿಸಿದ...

ಕಲಬುರಗಿ | ಎಸ್ಟಿ ಪ್ರಮಾಣ ಪತ್ರ ವಿತರಣೆಗೆ ಆಗ್ರಹಿಸಿ ತಳವಾರ ಸಮುದಾಯ ರಸ್ತೆ ತಡೆದು ಪ್ರತಿಭಟನೆ

ಜಿಲ್ಲೆಯಲ್ಲೂ ಪರಿಶಿಷ್ಟ ಪಂಗಡ (ಎಸ್ಟಿ) ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ತಳವಾರ, ಪರಿವಾರ ಎಸ್ಟಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಮುದಾಯದ ಸಾವಿರಾರು ಜನರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆ ನಡೆಸಿ...

ಕಲಬುರಗಿ | ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋ ಪಕ್ಕಕ್ಕೆ ಹಾಕಿ ಎಂದಿದ್ದಕ್ಕೆ ಮಾರಣಾಂತಿಕ ಹಲ್ಲೆ

ರಸ್ತೆ ಮಧ್ಯೆ ನಿಲ್ಲಿಸಿದ್ದ ಆಟೋವನ್ನು ಪಕ್ಕಕ್ಕೆ ಸರಿಸುವಂತೆ ಹೇಳಿದ ವಿಚಾರಕ್ಕೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಭೀಮಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಚಿತ್ತಾಪುರ...

ಕಲಬುರಗಿ | ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಜೈಲು, ₹1.25 ಲಕ್ಷ ದಂಡ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿಗೆ ವಿಶೇಷ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.25 ಲಕ್ಷ ದಂಡ ವಿಧಿಸಿ ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ...

ಕಲಬುರಗಿ | ಲಾರಿ,ಬಸ್,ಆಟೋ ನಡುವೆ ಭೀಕರ ಅಪಘಾತ: 13 ಮಂದಿ ಗಂಭೀರ ಗಾಯ

ಸಿಮೆಂಟ್ ತುಂಬಿದ ಲಾರಿ, ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು 13 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ತಾಂಡೂರಿನಿಂದ...

ಈ ಹೊತ್ತಿನ ಪ್ರಮುಖ ಸುದ್ದಿ

WhatsApp Image 2026 09 15 at 4.20.08 PM