ದೇಶ

ಮಸೂದೆಗಳ ಅಂಗೀಕಾರ ವಿಳಂಬ: ಕೇರಳ ರಾಜ್ಯಪಾಲರಿಗೆ ಸುಪ್ರೀಂ ನೋಟಿಸ್

ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಪರಿಗಣನೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ  ಸರ್ಕಾರ ಸಲ್ಲಿಸಿದ ಮನವಿಯ ಮೇಲೆ ಸುಪ್ರೀಂ ಕೋರ್ಟ್ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರಿಗೆ ಸೋಮವಾರ ನೋಟಿಸ್ ಜಾರಿ...

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಮೋದಿಗೆ ಮಣಿಪುರ ಭೇಟಿಗೆ ಸಮಯವಿಲ್ಲ: ಕಾಂಗ್ರೆಸ್ ಆಕ್ರೋಶ

ವಿಶ್ವಕಪ್‌ ಫೈನಲ್‌ ಪಂದ್ಯ ವೀಕ್ಷಿಸುವ ನರೇಂದ್ರ ಮೋದಿ ಅವರಿಗೆ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಸಮಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ...

ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮತ್ತೆ ಮುನ್ನೆಲೆಗೆ

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ತಂಡ ಸೋತ ಬೆನ್ನಲ್ಲೇ, ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಕೋಮುವಾದಿ ಅಜೆಂಡಾಗಳ ಮೂಲಕ ಟೀಕೆಗಳಿಗೆ ಒಳಗಾಗಿರುವ ಆಜ್‌ತಕ್‌ ಪತ್ರಕರ್ತ ಸುಧೀರ್‌ ಚೌದರಿ...

ಪ್ರಧಾನಿ ಮೋದಿ ’ಭಾರತ್ ಮಾತಾ ಕೀ ಜೈ’ ಅನ್ನದೆ ’ಅದಾನಿ ಕೀ ಜೈ’ ಅನ್ನಲಿ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರು ದಣಿವರಿಯದೆ ಉದ್ಯಮಿ ಗೌತಮ್ ಅದಾನಿಯವರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಾಜಸ್ಥಾನದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿರುವ ಅವರು, "ಪ್ರಧಾನಿ ಮೋದಿಯವರು ಭಾರತ್ ಮಾತಾ ಕಿ ಜೈ...

ಯುಪಿ: ಗೋಹತ್ಯೆ ಆರೋಪಿ ಎನ್‌ಕೌಂಟರ್‌ನಲ್ಲಿ ಬಲಿ

ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ  ಗೋಹತ್ಯೆ ಆರೋಪಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಪಟ್ವಾಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಹತ್ಯೆ ಪ್ರಕರಣದ ತನಿಖೆ ನಡೆಸಲಾಗುತ್ತಿತ್ತು....

ಸುರಂಗ ದುರಂತ: 8ನೇ ದಿನವಾದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ, ಆಪತ್ತಿನಲ್ಲಿ 41 ಮಂದಿ

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸುರಂಗ ಕುಸಿಯುವ ಭೀತಿಯಿಂದ ಪ್ರಸ್ತುತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಉತ್ತರಾಖಂಡದ ಸುರಂಗದಲ್ಲಿ 170 ಗಂಟೆಗಳ ಕಾಲ ಸಿಲುಕಿ ಹಾಕಿಕೊಂಡಿರುವ...

ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೊಳಿಸಿ: ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ

"ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಲೋಕಸಭೆಯಲ್ಲಿ ಆಡಳಿತರೂಢ ಎನ್‌ಡಿಎಗೆ ಮೂರನೇ ಎರಡರಷ್ಟು ಬಹುಮತವಿದೆ. ಹೀಗಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ಪ್ರಧಾನಿ ಮೋದಿ ಜಾರಿಗೆ ತರಬೇಕು" ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ...

ಮಧ್ಯ ಪ್ರದೇಶ ಶೇ.71, ಛತ್ತೀಸ್‌ಗಢ ಶೇ.68 ಮತದಾನ: ಅಲ್ಲಲ್ಲಿ ಗಲಭೆ, ಯೋಧ ಸಾವು

ಮಧ್ಯ ಪ್ರದೇಶದ 230 ಕ್ಷೇತ್ರಗಳಿಗೆ ನಡೆದ ಏಕ ಹಂತ ಹಾಗೂ ಛತ್ತೀಸ್‌ಗಢದ 70 ಸ್ಥಾನಗಳಿಗೆ ನಡೆದ ಕೊನೆಯ ಹಂತದ ಮತದಾನ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ವರದಿ ಪ್ರಕಾರ ಸಂಜೆ 6 ಗಂಟೆ ವೇಳೆಗೆ...

ಖಾಸಗಿ ವಲಯದಲ್ಲಿ ಶೇ.75 ಮೀಸಲಾತಿ ಅಸಂವಿಧಾನಿಕ ಎಂದ ಹರಿಯಾಣ ಹೈಕೋರ್ಟ್

ಖಾಸಗಿ ವಲಯದ ಉದ್ಯೋಗಗಳಲ್ಲಿ ರಾಜ್ಯದ ನಿವಾಸಿಗಳಿಗೆ ಶೇ. 75 ಮೀಸಲಾತಿಯನ್ನು ಕಡ್ಡಾಯಗೊಳಿಸುವ ಹರಿಯಾಣ ಸರ್ಕಾರದ ಕಾನೂನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರದ್ದುಗೊಳಿಸಿದ್ದು, ಇದು ಸಂವಿಧಾನಬಾಹಿರ ಎಂದು ಹೇಳಿದೆ. ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ...

ವಿಶ್ವಕಪ್ ಫೈನಲ್ ಪಂದ್ಯ ಬಂಡವಾಳ ಮಾಡಿಕೊಂಡ ವಿಮಾನಯಾನ ಸಂಸ್ಥೆ, ಹೋಟೆಲ್‌ಗಳು: ಟಿಕೆಟ್, ಕೊಠಡಿ ಬಾಡಿಗೆ ಹತ್ತು ಪಟ್ಟು ಹೆಚ್ಚಳ

ಗುಜರಾತಿನ ಅಹಮದಾಬಾದಿನಲ್ಲಿ ನ.19ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್‌ ಪಂದ್ಯ ನಡೆಯಲಿದೆ. ಟ್ರೋಫಿ ಯಾರು ಗೆಲ್ಲುತ್ತಾರೆಂದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಕ್ರೀಡಾ ಹಬ್ಬಕ್ಕೆ...

ಇಸ್ರೇಲ್ – ಹಮಾಸ್ ಸಂಘರ್ಷ: ನಾಗರಿಕರ ಹತ್ಯೆಗೆ ಪ್ರಧಾನಿ ಮೋದಿ ಖಂಡನೆ

ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಸಾವಿರಾರು ಅಮಾಯಕರು ಸಾವಿಗೀಡಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ...

ಈ ಹಿಂದೆ ಎಡಪಂಥೀಯರ ‘ಎಕೋ ಚೇಂಬರ್‌’ನಲ್ಲಿದ್ದೆ: ಮೋದಿ ಪರವಾಗಿ ಒಲವು ತೋರಿದ ಶೆಹ್ಲಾ ರಶೀದ್‌ ಹೇಳಿಕೆ

ಜೆಎನ್‌ಯುವಿನ ವಿದ್ಯಾರ್ಥಿ ನಾಯಕಿಯಾಗಿದ್ದ ಕಾಶ್ಮೀರದ ಶೆಹ್ಲಾ ರಶೀದ್‌, ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸಿ, ಬಲಪಂಥೀಯರಿಂದ ದೇಶದ್ರೋಹಿ, 'ತುಕ್ಡೇ ತುಕ್ಡೇ ಗ್ಯಾಂಗ್' ಸದಸ್ಯೆ ಎನ್ನಿಸಿಕೊಂಡಿದ್ದರು. ಆದರೆ ಈಗ ಅದೇ ಶೆಹ್ಲಾ ರಶೀದ್,...

ಈ ಹೊತ್ತಿನ ಪ್ರಮುಖ ಸುದ್ದಿ