ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮತ್ತೆ ಮುನ್ನೆಲೆಗೆ

Date:

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ತಂಡ ಸೋತ ಬೆನ್ನಲ್ಲೇ, ಕ್ರಿಕೆಟ್‌ನಲ್ಲಿ ಮೀಸಲಾತಿ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಕೋಮುವಾದಿ ಅಜೆಂಡಾಗಳ ಮೂಲಕ ಟೀಕೆಗಳಿಗೆ ಒಳಗಾಗಿರುವ ಆಜ್‌ತಕ್‌ ಪತ್ರಕರ್ತ ಸುಧೀರ್‌ ಚೌದರಿ ಇತ್ತೀಚೆಗೆ ಪರಿಶಿಷ್ಟ ಜಾತಿ, ಒಬಿಸಿ ಸಮುದಾಯಗಳ ಪ್ರತಿಭೆಗಳನ್ನು ಅಣಕಿಸಿ ಕಾರ್ಯಕ್ರಮ ಮಾಡಿದ್ದರು.

ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತ ತಂಡ ಗೆದ್ದಿದ್ದನ್ನು ಶ್ಲಾಘಿಸುತ್ತಾ  ‘ಬ್ಲಾಕ್‌ ಆ್ಯಂಡ್ ವೈಟ್’ ಪ್ರೈಮ್ ಟೈಮ್ ಶೋನಲ್ಲಿ ಮಾತನಾಡಿದ್ದ ಚೌದರಿ, “ತಂಡದ ಆಯ್ಕೆಯ ಪ್ರಕ್ರಿಯೆಯಲ್ಲಿ ಮೀಸಲಾತಿ ಇಲ್ಲದೆ ಇರುವುದರಿಂದಾಗಿಯೇ ಭಾರತ ತಂಡವಿಂದು ಜಗತ್ತಿನಲ್ಲೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ” ಎಂದಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮುಂದುವರಿದು, “ಭಾರತ ಕ್ರಿಕೆಟ್ ತಂಡದ ಸಾಧನೆಗೆ ಜಾತಿ, ಧರ್ಮ ಅಥವಾ ಇನ್ನಿತರ ಅಂಶಗಳನ್ನು ಪರಿಗಣಿಸದೆ, ಆಟಗಾರರ ಪ್ರತಿಭೆಯನ್ನು ಮಾತ್ರ ಪರಿಗಣಿಸಿ ತಂಡಕ್ಕೆ ಆಯ್ಕೆ ಮಾಡಿರುವುದರಿಂದಾಗಿ ಭಾರತ ತಂಡ ಇಂತಹ ಸಾಧನೆಗೈಯ್ಯಲು ಸಾಧ್ಯವಾಗಿದೆ. ಒಂದು ವೇಳೆ ಮೀಸಲಾತಿಯನ್ನು ತೆಗೆದು ಹಾಕಿ, ಜನರನ್ನು ಅವರ ಪ್ರತಿಭೆಯ ಆಧಾರದಲ್ಲಿ ಎಲ್ಲ ವಲಯಗಳಲ್ಲಿ ಆಯ್ಕೆ ಮಾಡಿದರೆ ನಮ್ಮದೇಶ ಮತ್ತಷ್ಟು ಅದ್ಭುತ ಸಾಧನೆ ಮಾಡುವುದಿಲ್ಲವೆ ಹಾಗೂ ಮತ್ತಷ್ಟು ಅದ್ಭುತ ಮೈಲಿಗಲ್ಲುಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲವೆ?” ಎಂದು ಪ್ರಶ್ನಿಸಿದ್ದರು.

ಬಲಾಢ್ಯ ಜಾತಿಗಳಿಗೆ ಇಡಬ್ಲ್ಯುಎಸ್ ಅಡಿಯಲ್ಲಿ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳ ಮೀಸಲಾತಿ ಮಿತಿ ಶೇ. 50ರಷ್ಟು ಮೀರಲಾಗದೆ ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸುಧೀರ್‌ ಚೌದರಿ ಮೀಸಲಾತಿ ಕುರಿತು ಅಸಹನೆಯನ್ನು ಹೊರಹಾಕಿದ್ದು ಭಾರೀ ಟೀಕೆಗೆ ಒಳಗಾಗಿತ್ತು. ಆದರೆ ಫೈನಲ್‌ನಲ್ಲಿ ಭಾರತ ತಂಡ ಸೋತ ಬಳಿಕ ಕ್ರಿಕೆಟ್‌ನಲ್ಲಿ ಮೀಸಲಾತಿಯ ಅಗತ್ಯತೆ ಕುರಿತು ಚರ್ಚೆ ಶುರುವಾಗಿದೆ.

ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಅವರು ಈ ಕುರಿತು ಪೋಸ್ಟ್ ಮಾಡಿದ್ದು,  “ನಾನು ಮತ್ತೆ ಹೇಳುತ್ತಿದ್ದೇನೆ/ ಒತ್ತಿಹೇಳುತ್ತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿಯ ಅಗತ್ಯವಿದೆ. ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ, ಭಾರತ ವಿಶ್ವಕಪ್‌ಅನ್ನು ಸುಲಭವಾಗಿ ಗೆಲ್ಲುತ್ತಿತ್ತು” ಎಂದಿದ್ದಾರೆ.

ಲೇಖಕರಾದ ವಿ.ಆರ್‌.ಕಾರ್ಪೆಂಟರ್‌ ಪ್ರತಿಕ್ರಿಯಿಸಿದ್ದು,  “ಗೆಳೆಯ ಚೇತನ್ ಅವರ ಮಾತಿಗೆ ನನ್ನ ಸಹಮತವಿದೆ. ಯಾಕೆಂದರೆ ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಬರವಿಲ್ಲ. ಅದ್ಭುತವಾಗಿ ಆಡುವ ಕೊಹ್ಲಿ, ರೋಹಿತ್ ಶರ್ಮಾ ಅಂಥವರನ್ನೂ ಮೀರಿಸುವ ಆಟಗಾರರು SC/ST, OBC ಗಳಲ್ಲೂ ಇದ್ದಾರೆ. ಮೀಸಲಾತಿ ತಂದರೆ ಅಂಥವರ ಅನ್ವೇಷಣೆ ಆಗುತ್ತದೆ, ಅವಕಾಶ ಸಿಗುತ್ತದೆ. ಆದರೆ, ಭಾರತದ ಕ್ರಿಕೆಟ್‌ನೊಳಗಿರುವ ಜಾತೀಯತೆ ಬೌಲಿಂಗ್ ಮಾಡುವ ಮುಸ್ಲಿಂ ಆಟಗಾರರಿಗೆ ಚಾನ್ಸ್ ಕೊಡುತ್ತದಷ್ಟೇ, ಅಪ್ಪಿತಪ್ಪಿ ದಲಿತರಿಗೆ ಕೊಡುವುದಿಲ್ಲ. 1792ರಲ್ಲಿ ಬ್ರಿಟಿಷರಿಂದ ಶುರುವಾದ ಈ ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ದಲಿತ ಆಟಗಾರರ ಸಂಖ್ಯೆ ನಾಲ್ಕು ಮೀರಲ್ಲ” ಎಂದು ವಿಷಾದಿಸಿದ್ದಾರೆ.

“ಈಗಿರುವ ತಂಡ ಅದ್ಭುತವಾಗಿ ಆಡಿದೆ. ಅದರಲ್ಲಿ ಎರಡು ಮಾತಿಲ್ಲ. ಹಾಗಂತ ಅವಕಾಶ ವಂಚಿತರಿಗೆ ಅವಕಾಶ ಬೇಡವ? ಅವಕಾಶವೇ ಇಲ್ಲದಿದ್ದರೆ ದಲಿತ, ಹಿಂದುಳಿದ ಜಾತಿಗಳಲ್ಲಿ ಇರುವ ಸಚಿನ್, ಕೋಹ್ಲಿ, ರೋಹಿತ್, ಜಾಹೀರ್ ಖಾನ್, ಕೈಫ್, ಶಮಿಗಳ ಕತೆ ಏನಾಗಬೇಕು? ಅವಕಾಶವನ್ನೇ ಕಲ್ಪಿಸದೇ ‘ಹೇ ಕ್ರಿಕೆಟ್‌ಗೆಲ್ಲಾ ಮೀಸಲಾತಿ ಬೇಕ?’ ಎಂದು ಗಹಗಹಿಸುವುದು ಮೂರ್ಖತನವಷ್ಟೇ ಅಲ್ಲ, ಜಾತೀಯತೆಯ ನಂಜು ಕೂಡ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಇವತ್ತು ಸೌತ್ ಆಫ್ರಿಕಾ ತಂಡ ಮೀಸಲಾತಿ ಅಳವಡಿಸಿಕೊಂಡಿದೆ. ಮೀಸಲಾತಿ ಇಲ್ಲದಿದ್ದಾಗಲೂ ಅವರು ಸೆಮಿಫೈನಲ್ ದಾಟಿಲ್ಲ, ಇದ್ದಾಗಲೂ ದಾಟಿಲ್ಲ. ಆದರೆ ಅಲ್ಲಿನ ಕರಿಯ ಆಟಗಾರರಿಗೆ ಪ್ರಾತಿನಿದ್ಯ ದೊರಕಿದೆ. ರಬಾಡ, ಲುಂಗಿ ಎಂಗಿಡಿ ಥರದ ಆಟಗಾರರು ನಿರ್ಭೀತಿಯಿಂದ ಆಡುತ್ತಿದ್ದಾರೆ. ಕೇಶವ ಮಹರಾಜ್ ಎಂಬ ಹಿಂದುಳಿದ ಜಾತಿಯ ಆಟಗಾರನಿಗೂ ಅಲ್ಲಿ ಕರಿಯರ ಪ್ರಾತಿನಿಧಿಕದಲ್ಲೇ ಅವಕಾಶ ಕಲ್ಪಿಸಲಾಗಿದೆ. ಅಂಥ ಒಬ್ಬ ಒಳ್ಳೆಯ ಬೌಲರ್ ಭಾರತದಲ್ಲಿ ಇದ್ದಿದ್ದರೆ, ಇಲ್ಲಿನ ಜಾತೀ ವ್ಯವಸ್ಥೆ ಖಂಡಿತವಾಗಿ ಆತನಿಗೆ ಸಣ್ಣ ಅವಕಾಶವನ್ನೂ ಕಲ್ಪಿಸುತ್ತಿರಲಿಲ್ಲ. ಒಲಂಪಿಕ್ಸ್ ನಲ್ಲೂ ಮೀಸಲಾತಿ ಇಲ್ಲ! ಹಾಗಾದರೆ ಭಾರತ ಎಷ್ಟು ಚಿನ್ನದ ಪದಕಗಳನ್ನು ಗೆದ್ದಿದೆ?” ಎಂದು ಪ್ರಶ್ನಿಸಿದ್ದಾರೆ.

ರಾಜಕೀಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಸುಭಜಿತ್ ನಾಸ್ಕರ್‌ ಅವರು ’ಎಕ್ಸ್‌’ ಖಾತೆಯಲ್ಲಿ ಮಾಡಿರುವ ಪೋಸ್ಟ್‌ ಚರ್ಚೆಗಳನ್ನು ಹುಟ್ಟು ಹಾಕಿದೆ. “ಹೊಸ ಮುಖಗಳೊಂದಿಗೆ ಇಡೀ ಭಾರತೀಯ ಕ್ರಿಕೆಟ್ ತಂಡವನ್ನು ಬದಲಿಸಬೇಕಿದೆ. ಇವರು ಲಕ್ಷಾಂತರ ಜನರ ಭಾವನೆಯೊಂದಿಗೆ ಸೋತಿದ್ದಾರೆ. ಶರ್ಮಾ, ಕೊಹ್ಲಿ, ಗಿಲ್, ಅಯ್ಯರ್, ಶಮಿ, ಯಾದವ್ಸ್, ಬುಮ್ರಾ, ಸಿರಾಜ್, ಜಡೇಜಾ ಇತ್ಯಾದಿ ಯಾರೂ ಎಸ್ಸಿ ಎಸ್ಟಿ ಅಲ್ಲ” ಎಂದು ತಿಳಿಸಿದ್ದಾರೆ.

ಕ್ರೀಡೆಯಲ್ಲಿ ಮೀಸಲಾತಿ ನೀಡಬೇಕೆಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿದೆ. ಜಾತಿಗಳೇ ತುಂಬಿರುವ ಭಾರತದಲ್ಲಿ ಕೆಲವು ಕ್ರೀಡೆಗಳಿಗಷ್ಟೇ ಹೆಚ್ಚಿನ ಮಾನ್ಯತೆ ದೊರೆತಿದೆ. ಬಲಾಢ್ಯ ಜಾತಿಗಳವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ ಎಂಬ ಆರೋಪಗಳಿವೆ. ಈ ಕುರಿತು ಗಂಭೀರ ಚರ್ಚೆ ಆಗಬೇಕಿದೆ ಎಂಬುದು ಅನೇಕರ ಅಭಿಪ್ರಾಯ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

Fact Check | ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಬಂಗಲೆ ಖರೀದಿಸಿಲ್ಲ!

ಲೋಕಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ...

ಹೆಲಿಕಾಪ್ಟರ್ ಹತ್ತುವಾಗ ಎಡವಿ ಬಿದ್ದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಗಾಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ಪ್ರಚಾರದ...

ಲೋಕಸಭೆ ಚುನಾವಣೆ | ಇನ್ನುಳಿದ ಹಂತಗಳಲ್ಲಿ ಬಿಜೆಪಿ ಸ್ಥಿತಿ ಮತ್ತಷ್ಟು ಹದಗೆಡಲಿದೆ: ಅಖಿಲೇಶ್ ಯಾದವ್

ಲೋಕಸಭೆ ಚುನಾವಣೆಯ ಉಳಿದ ಹಂತಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು...

‘ತಾರಕ್ ಮೆಹ್ತಾ’ ನಟ ಗುರುಚರಣ್ ಸಿಂಗ್ ನಾಪತ್ತೆ; ಅಪಹರಣ ಪ್ರಕರಣ ದಾಖಲು

ಅತ್ಯಂತ ಜನಪ್ರಿಯ ಭಾರತೀಯ ಟಿವಿ ಶೋ ಆದ 'ತಾರಕ್ ಮೆಹ್ತಾ ಕಾ...